ಕುಮಟಾ : ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಅದೃಷ್ಟ ಭಲದಮೇಲೆ ಕೊನೆಯ ಕ್ಷಣದಲ್ಲಿ ದಿನಕರ ಶೆಟ್ಟಿ 673 ಮತಗಳ ಮುನ್ನಡೆ ಪಡೆದು ಆಯ್ಕೆಯಾಗಿದ್ದಾರೆ. ಕೊನೆಯ ಕ್ಷಣದ ವರೆಗೂ ತೀವ್ರ ಪೈಪೋಟಿ ನೀಡಿ ಮುನ್ನಡೆ ಕಾಯ್ದುಕೊಂಡು ಗೆಲುವಿನ ಸನಿಹವಿದ್ದ ಜೆ.ಡಿ.ಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿಯವರಿಗೆ ಅದೃಷ್ಟ ಕೈ ಕೊಟ್ಟಿದೆ.

ಬಿ.ಜೆ.ಪಿ ಅಭ್ಯರ್ಥಿ ದಿನಕರ ಕೆ ಶೆಟ್ಟಿ 59966 ಮತ ಪಡೆದರೆ ಜೆ.ಡಿ.ಎಸ್ ಪಕ್ಷದ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ 59293 ಮತ ಪಡದಿದ್ದಾರೆ. ಇನ್ನೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿವೇದಿತಾ ಆಳ್ವಾ 19272 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಆದರೆ ಈ ಚುನಾವಣೆಯಲ್ಲಿ ಸೂರಜ್ ನಾಯ್ಕ ಸೋನಿ ಸೋತು ಗೆದ್ದಿದ್ದಾರೆ ಎಂಬ ಅಭಿಪ್ರಾಯ ಎಲ್ಲಡೆ ಇದೆ.

RELATED ARTICLES  ಕೂಜಳ್ಳಿ: ಮೂವರು ಸಂಗೀತ-ಯಕ್ಷ ಸಾಧಕರಿಗೆ ಷಡಕ್ಷರಿ ರಾಷ್ಟ್ರೀಯ ಪುರಸ್ಕಾರ ಪ್ರದಾನ, ಷಡಕ್ಷರಿ ಗವಾಯಿಗಳ ಪುತ್ಥಳಿ ನಿರ್ಮಿಸಿ ಎಂದ ಪ್ರಶಸ್ತಿ ಪುರಸ್ಕೃತ ಪಂ.ಮರಡೂರ

ಅವರ ಸೋಲು ಸೋಲೇ ಅಲ್ಲ ಅದೃಷ್ಟ ಕೈ ಕೊಟ್ಟಿದೆ ಎನ್ನಬೇಕು ಅಷ್ಟೇ. ಯಾಕೆಂದರೆ ಯಾವುದೇ ಸ್ಟಾರ್ ಪ್ರಚಾರಕರಿಲ್ಲದೆ, ಯಾವುದೇ ರಾಷ್ಟ್ರೀಯ ಮುಖಂಡರಿಲ್ಲದೆ, ಜೆ.ಡಿ.ಎಸ್ ಪಕ್ಷಕ್ಕೆ ಯಾವುದೇ ಮತ ಬ್ಯಾಂಕ್ ಇಲ್ಲದೆ ಕ್ಷೇತ್ರದಲ್ಲಿ ಯಾವುದೇ ಪ್ರಭಲ ಮುಖಂಡರಿಲ್ಲದೆ ಕೇವಲ ಅಭಿಮಾನಿಗಳ , ಹೀತೈಶಿಗಳ ಯುವ ಪಡೆಯ ಸಹಯೋಗದೊಂದಿಗೆ 59 ಸಾವಿರಕ್ಕೂ ಹೆಚ್ಚು ಮತ ಪಡೆದಿದ್ದಾರೆ ಎಂದರೆ ಅವರು ಜನಮಾನಸದಲ್ಲಿ ಉಳಿದಂತೆಯೇ ಸರಿ.

RELATED ARTICLES  ಬೆಳೆಗಳನ್ನು ತಿಂದು ತೇಗುತ್ತಿರುವ ಮಂಗಗಳು : ರೈತರ ಗೋಳು ಕೆಳೋರು ಯಾರು? : ವಾನರ ಹಾವಳಿಗೆ ಬಳಲಿದ ಬೆಳೆಗಾರ.

ಹಾಗಾಗಿ ಸೂರಜ ನಾಯ್ಕ ದಾಖಲೆಯಲ್ಲಿ ಸೋತರೂ ಜನಮಾನಸದಲ್ಲಿ ಗೆದ್ದಿದ್ದಾರೆ. ಇನ್ನು ಶಾಸಕ ದಿನಕರ ಶೆಟ್ಟಿಯವರು ಅವರ ಸ್ವಂತ ವರ್ಚಸ್ಸು ಮತ್ತು ಅವರ ರಾಜಕೀಯ ತಂತ್ರಗಾರಿಕೆ ಹಾಗು ಅದೃಷ್ಟದ ಭಲದ ಮೇಲೆ ಗೆಲುವು ಸಾಧಿಸಿದ್ದಾರೆ ಎಂದೆ ಹೇಳಬಹುದು. ಚುನಾವಣೆಯಲ್ಲಿ ಒಂದು ಮತದಿಂದ ಗೆದ್ದರೂ ಗೆಲುವೇ ಆಗಿದ್ದರಿಂದ ಬಿ.ಜೆ.ಪಿ ಪಕ್ಷದ ಅಭ್ಯರ್ಥಿ ದಿನಕರ ಶೆಟ್ಟಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.