ಜೋಯಿಡಾ:ತಾಲೂಕಿನ ಗಣೇಶ ಗುಡಿಯ
ಆರೋಗ್ಯ ಬಸ್ ನಿಲ್ದಾಣದ ಬಳಿ ಬಜಾಕುಣಂಗದಿಂದ ಜೋಯಿಡಾಕ್ಕೆ ಬರುತ್ತಿದ್ದ ಸಾರಿಗೆ ಬಸ್‌ನ ಟೈರ್ ಸ್ಫೋಟಗೊಂಡ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ಗಟಾರಕ್ಕೆ ಇಳಿದ ಘಟನೆ ನಡೆದಿದೆ.
ಗಣೇಶಗುಡಿ ಕಡೆಯಿಂದ ಜೋಯಿಡಾ ಕಡೆಗೆ ಸಾಗುತ್ತಿದ್ದ ಬಸ್ ಇಳಿಜಾರು ಪ್ರದೇಶದಲ್ಲಿ ಸಾಗುತ್ತಿದ್ದ ವೇಳೆ ಬಸ್‌ನ ಟೈರ್ ಸ್ಫೋಟಗೊಂಡಿದೆ ಎನ್ನಲಾಗಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬಸ್‌ನಲ್ಲಿ ಇದ್ದ ಬಹಳಷ್ಟು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅವರನ್ನು ಗಣೇಶಗುಡಿ ಕೆ.ಪಿ.ಸಿ ಆಸ್ಪತ್ರೆಗೆ ಕರೆದೊಯ್ಯದು ಪ್ರಥಮ ಚಿಕಿತ್ಸೆ ನೀಡಲಾಗಿದೆ.