ಕುಮಟಾ : ಮಳೆಯ ಕೈಕೊಟ್ಟ ಕಾರಣದಿಂದಾಗಿ ತರಕಾರಿ ಬೆಳೆಯು ಕಡಿಮೆಯಾಗಿ, ತರಕಾರಿಗಳ ಬೆಲೆ ಗಗನಕ್ಕೆ ಏರಿದೆ‌. ಅವುಗಳ ಮಧ್ಯೆ ವ್ಯಾಪಾರ ಹಾಗೂ ಖರೀದಿಯ ಬುಧವಾರದ ಸಂತೆಯಲ್ಲಿ ಸಾಮಾನ್ಯವಾಗಿ ಕಂಡುಬಂತು. ಕೆಲವು ತರಕಾರಿಗಳ ಬೆಲೆ ಜನಸಾಮಾನ್ಯರ ಕೈಗೆಟಾಕುವುದಕ್ಕಿಂತ ಮೇಲೆ ಹೋಗಿದ್ದು ಇದರಿಂದಾಗಿ ಗ್ರಾಹಕರು ಖರೀದಿಗೆ ಹಿಂದೇಟು ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಬೇರೆ ಬೇರೆ ಊರುಗಳಿಂದ ವ್ಯಾಪಾರಕ್ಕೆ ಆಗಮಿಸಿದ ವ್ಯಾಪಾರಸ್ಥರು ಬೆಲೆ ಹೆಚ್ಚಿಗೆ ಎಂಬ ಕಾರಣದಿಂದ ಗ್ರಾಹಕರು ಕಡಿಮೆ ಪ್ರಮಾಣದ ತರಕಾರಿ ಖರೀದಿಸುತ್ತಿದ್ದುದರಿಂದ ಕಂಗಾಲಾಗಿದ್ದರು.

ಕುಮಟಾದಲ್ಲಿ ಬೆಳಿಗ್ಗೆ 120 ರೂ. ಗೆ ಒಂದು ಕಿ.ಗ್ರಾಂ ನಿಂದ ಪ್ರಾರಂಭವಾದ ಟೊಮೆಟೊ ಮಾರಾಟ, ಸಾಯಂಕಾಲದ ಹೊತ್ತಿಗೆ 110 ರೂ ಗೆ ಒಂದು ಕಿ.ಗ್ರಾಂ. ನಂತೆ ಮಾರಾಟ ಮಾಡಲಾಗಿದೆ. ಆದರೆ ಅನಿವಾರ್ಯವಾಗಿ ಟೊಮೆಟೊವನ್ನು ಖರೀದಿಸಲೇಬೇಕಾದ ಅನೇಕ ಗ್ರಾಹಕರು ಎಷ್ಟೇ ದರ ಹೆಚ್ಚಿದ್ದರೂ ಟೊಮೇಟೊ ಖರೀದಿಗೆ ಮುಂದಾಗಿದ್ದರು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಟೊಮೆಟೊ ಬೆಳೆ ಇಲ್ಲಿ ಇಲ್ಲದೆ ಇರುವುದರಿಂದ ನಾಸಿಕ್ ದಿಂದ ಟೊಮೆಟೊ ಬೆಳಗಾವಿಗೆ ಬಂದು ಬೆಳಗಾವಿಯಿಂದ ವ್ಯಾಪಾರಸ್ಥರು ಕೊಂಡು ತಂದು ಇಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಬೆಳಗಾವಿಯಿಂದ ಕೊಂಡು ತರುವಾಗಲೇ ಪ್ರತಿ ಕೆಜಿ ಟೊಮೇಟೋ ಕೆ.ಜಿ ಗೆ 95 ರೂ. ವ್ಯಾಪಾರಸ್ಥರಿಗೆ ತಗಲುತ್ತಿದ್ದು ಅದರಲ್ಲಿ ಲಾಭ ಕಾಣುವುದು ಕಷ್ಟಕರವಾಗಿದೆ.

ಇದರ ಜೊತೆಗೆ ಬೀನ್ಸ್ ಹಾಗೂ ಹಸಿಮೆಣಸು ಸಹ ಕೊಂಚ ಏರಿಕೆ ಕಂಡಿದೆ. ಈರುಳ್ಳಿ ಹಾಗೂ ಬಟಾಟೆ ದರ ಇಳಿಕೆಯಾಗಿದೆ. ಲಿಂಬು ದರ ತುಂಬಾ ಇಳಿಮುಖವಾಗಿದೆ. ತರಕಾರಿ ದೇವರಾಜ್ ಜಾಸ್ತಿ ಆದಂತೆ ಗ್ರಾಹಕರ ಕರಿಬೇಕು ಕಡಿಮೆ ಆಗುವಂತದ್ದು ಸಾಮಾನ್ಯ ವಾಡಿಕೆ ಇದರಿಂದಾಗಿ ವ್ಯಾಪಾರಸ್ಥರು ನಷ್ಟ ಅನುಭವಿಸುವ ಭೀತಿ ಎದುರಾಗಿದೆ.

22 ಕಿ.ಗ್ರಾ ಟೊಮ್ಯಾಟೊ ಬಾಕ್ಸ್ ಗೆ 2,200 ರೂ ಬೆಳಗಾವಿಯಲ್ಲಿಯೇ ನಿಗದಿ ಮಾಡಲಾಗಿದೆ. ಅಲ್ಲಿಂದ ಕೊಂಡು ತಂದು ಲಾಭ ಪಡೆಯುವುದು ಕಷ್ಟ. ಆದರೆ ಇದೇ ಉದ್ಯೋಗ ನಂಬಿಕೊಂಡಿದ್ದರಿಂದ ಈ ಕಾಯಕವನ್ನು ನಾವು ಮುಂದುವರಿಸಿತ್ತಿದ್ದೇವೆ – ಹನುಮಪ್ಪ, ಸಂತೆಯ ತರಕಾರಿ ಮಾರಾಟಗಾರ.

RELATED ARTICLES  ಗೋ ರಕ್ಷಕರೇ ಟಾರ್ಗೆಟ್ ಆಗ್ತಿದ್ದಾರೆ! ತಡೆಯೋಣ ಬನ್ನಿ ಒಂದಾಗಿ ಎನ್ನುತ್ತಿದೆ ಯುವ ಬ್ರಿಗೇಡ್.

ಕೋಲಾರದಿಂದ ಪ್ರತೀ ಕೆ.ಜಿ ಗೆ ನೂರು ರೂಪಾಯಿಗೆ ಟೊಮೇಟೊ ತಂದು ನಾವು ಇಲ್ಲಿ ಮಾರಾಟ ಮಾಡುತ್ತಿದ್ದೇವೆ. ಹಿಂದಿನ ವರ್ಷ ಟೊಮೇಟೊಗೆ ಬೆಲೆ ಇಲ್ಲದ ಕಾರಣ ಅನೇಕರು ಟೊಮೆಟೊವನ್ನೇ ಬೆಳೆದಿಲ್ಲ. ಇದರಿಂದ ಈ ವರ್ಷ ಟೊಮ್ಯಾಟೋ ಬಹುಬೇಡಿಕೆಯ ತರಕಾರಿ ಎಂಬಂತಾಗಿದೆ. – ರಾಮಚಂದ್ರ ಹುಕ್ಕಲ, ಬೆಳೆಗಾರ ಹಾಗೂ ವ್ಯಾಪಾರಿ.

120 ರೂಪಾಯಿ ಕೊಟ್ಟು ಒಂದು ಕೆಜಿ ಟೊಮ್ಯಾಟೋ ಖರೀದಿಸುವುದು ಸಾಮಾನ್ಯ ಜನಜೀವನದ ವ್ಯವಸ್ಥೆಯಲ್ಲಿ ಕಷ್ಟಕರವಾಗಿದೆ ನಾವು ಟೊಮೆಟೊ ಹೊರತುಪಡಿಸಿ ಅನ್ಯ ತರಕಾರಿಗಳನ್ನು ಖರೀದಿಸಿ ಮನೆಗೆ ವಾಪಸ್ ಆಗುತ್ತಿದ್ದೇವೆ ಬೆಲೆ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿ – ಸಚಿನ್ ನಾಯ್ಕ, ಗ್ರಾಹಕ.