ಕುಮಟಾ : ಹೊನ್ನಾವರ ತಾಲೂಕಿನ ಇಡಗುಂಜಿ ಸನಿಹದ ತಲಗೋಡ ಮೂಲದ ಪ್ರಸ್ತುತ ಬೆಂಗಳೂರು ನಿವಾಸಿ ರಶ್ಮಿ ಲಂಬೋದರ ಭಟ್ ಇತ್ತೀಚೆಗೆ ನಡೆದ ಸಿ.ಎ.(ಚಾರ್ಟರ್ಡ ಅಕೌಂಟಂಟ್) ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮೂಲಕ ಕಡಿಮೆ ವಯಸ್ಸಿನಲ್ಲೇ ಹೆಚ್ಚಿನ ಸಾಧನೆ ಮಾಡಿದ್ದಾರೆ. ಕಠಿಣ ಅಭ್ಯಾಸ, ದೈವಾನುಗ್ರಹವೇ ಅವಳ ಯಶಸ್ಸಿಗೆ ಕಾರಣ ಎಂದು ತಾಯಿ ವೀಣಾ ಹಾಗೂ ತಂದೆ ಲಂಬೋದರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.