‘ಜಾತಸ್ಯ ಮರಣಂ ಧ್ರುವಂ’ ಹುಟ್ಟಿದವನಿಗೆ ಸಾವು ನಿಶ್ಚಿತ ಎಂಬಂತೆ ವಿಠೋಬ ನಾರಾಯಣ ನಾಯಕ ಕೂಡ ಜೀವಂತಿಕೆಯ ಪ್ರತೀಕವಾಗಿ ನಮ್ಮ ಮನಸ್ಸುಗಳಲ್ಲಿ ಸದಾ ನೆಲೆಸಿದ್ದಾರೆ. ಜುಲೈ ೨೦ ರಂದು ತನ್ನ ೮೨ನೇ ವಯಸ್ಸಿಗೆ ರಸ್ತೆ ಅಪಘಾತದಿಂದ ತಮ್ಮ ಯಶಸ್ವಿಯಾದ ಬದುಕಿಗೆ ವಿರಾಮವನ್ನು ನೀಡಿದ್ದಾರೆ.
ಹಿರೇಗುತ್ತಿಯ ಕೋಸಣ್ಣನ ಮನೆ ಕುಟುಂಬದಲ್ಲಿ ಮಾನವೀಯ ಮೌಲ್ಯದ ಮುಕುಟವಾಗಿ ನಿಷ್ಕಲ್ಮಶ ಮನಸ್ಸಿನ ನಿರಾಡಂಬರ ವ್ಯಕ್ತಿತ್ವವನ್ನು ಮೈದೆಳೆದು ಎಲ್ಲರಿಗೂ ಆದರ್ಶ ಪ್ರಿಯರಾಗಿರುವ ವಿಠೋಬಣ್ಣ. ಓರ್ವ ಅತ್ಯುತ್ತಮ ಆದರ್ಶ ಶಿಕ್ಷಕರಾಗಿ ಸಾವಿರಾರು ಶಿಷ್ಯ ವೃಂದದ ಮನೆಮಂದಿರದಲ್ಲಿ ನೆಲೆಯೂರಿದವರು. ಅವರೆಲ್ಲರ ಬದುಕಿಗೆ ಬರಹವಾದವರು. ಎದ್ದು ತೋರುವಷ್ಟು ಅಪರೂಪದ ದೇಹದಾಡ್ಯತೆಯೊಂದಿಗೆ ಅಷ್ಟೇ ತೂಕದ ವ್ಯಕ್ತಿತ್ವ ರೂಪಿಸಿಕೊಂಡವರು.
ಬದುಕಿಗೆ ಭಾಷ್ಯ ಬರೆಯುವ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಐ.P.S ರಾಮಪುರ ಶಿರಸಿ, ಊ.P.S ದಾಂಡೇಲಿ, ಊ.P.S ಸಾಂಬ್ರಾಣ (ಹಳಿಯಾಳ), ಒ.ಊ.P.S ಗುಡೇಅಂಗಡಿ, ಐ.P.S ಬರ್ಗಿ ಓo೨ ಶಾಲೆಗಳಲ್ಲಿನ ಒಟ್ಟು ೩೪ ವರ್ಷಗಳ ಸುದೀರ್ಘ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಮೆಚ್ಚಿನ ಶಿಕ್ಷಕರಾಗಿ ಸಮುದಾಯ ಹಾಗೂ ಶಿಕ್ಷಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದವರಾಗಿ ಶಾಲೆಯ ಭೌತಿಕ ಅಭಿವೃದ್ಧಿಗೆ ದುಡಿದು ತಾಳ್ಮೆ ಮತ್ತು ಪ್ರೀತಿ ಮೂಲಕ ಅನೇಕ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಅವರ ಉಜ್ವಲ ಶಿಕ್ಷಣಕ್ಕೆ ಪ್ರೇರಣೆಯಾದವರು.
ಇವರ ಧರ್ಮಪತ್ನಿ ನಿವೃತ್ತ ಶಿಕ್ಷಕಿ ಮೋಹಿನಿ ನಾಯಕ ಆತಿಥ್ಯಕ್ಕೆ ಎತ್ತಿದ ಕೈಯಾಗಿ ಗುರುತಿಸಿಕೊಂಡವರು. ಹಿರಿಯ ಮಗಳು ರೇಷ್ಮಾ ಹೈಸ್ಕೂಲ್ ಶಿಕ್ಷಕಿ, ಇನ್ನೊಬ್ಬ ಮಗಳು ಡಾ.ವೀಣಾ ಬೆಂಗಳೂರಿನಲ್ಲಿ ವೈದ್ಯ ವೃತ್ತಿಯಲ್ಲಿದ್ದಾಳೆ. ಅಳಿಯಂದಿರಾದ ಕೃಷ್ಣಮೂರ್ತಿ ನಾಯಕ ಬೇಲೆಕೇರಿ, ಹರ್ಷ ಎಲ್ ನಾಯಕ ವಂದಿಗೆ ಹಾಗೂ ಮೊಮ್ಮಕ್ಕಳ ಸುಶಿಕ್ಷಿತ ತುಂಬು ಕೋಸಣ್ಣನ ಮನೆ ಕುಟುಂಬ ಇವರದು.
ವಿಠೋಬಣ್ಣನ ನಿಧನ ಅನಿರೀಕ್ಷಿತ ಅಪಘಾತದಿಂದ ಇತ್ತೀಚಿನ ವರ್ಷಗಳ ಬಹುದೊಡ್ಡ ಬ್ರೇಕಿಂಗ್ ನ್ಯೂಸ್ ರಸ್ತೆ ಅಪಘಾತಗಳದ್ದು. ಪ್ರತಿದಿನ ಅದೇ ಸುದ್ದಿ. ಮನೆಯಿಂದ ಕೆಲಸಕ್ಕೆ ಹೊರಹೋದ ವ್ಯಕ್ತಿ ಮನೆಗೆ ಬಂದಾಗಲೇ ಗ್ಯಾರಂಟಿ ಎನ್ನುವ ಮಾತು ಚಾಲ್ತಿಯಲ್ಲಿದೆ.
ಭಾರತದಲ್ಲಿ ಅಪಘಾತಗಳಿಂದಲೇ ನಿಮಿಷಗಳ ಲೆಕ್ಕದಲ್ಲಿ ಜನ ಸಾಯುತ್ತಿದ್ದಾರೆ. ಮತ್ತು ಅಂಗವಿಕಲರಾಗುತ್ತಿದ್ದಾರೆ. ಹಿರಿಯರನ್ನು ನೋಡಿದಾಗ ಇಷ್ಟೊಂದು ಅವ್ಯವಸ್ಥೆಯ ವಾಹನಗಳ ಭರಾಟೆಯಲ್ಲಿ ಇವರು ಹೇಗೆ ಇನ್ನೂ ಜೀವಂತವಿದ್ದಾರೆ ಎಂದು ಆಶ್ಚರ್ಯವಾಗುತ್ತದೆ ! ಏಕೆ ಹೀಗೆ? ರಸ್ತೆಗಳೇ ಎದ್ದು ಬಂದು ಜನರನ್ನು ಕೊಲ್ಲುತ್ತವೆಯೇ? ಅಥವಾ ವಾಹನಗಳು ಬೇಕಂತಲೇ ಜನರನ್ನು ಬೀಳಿಸುತ್ತವೆಯೇ? ಅಥವಾ ಜನಸಂಖ್ಯೆ ಕಡಿಮೆ ಮಾಡಲು ಪ್ರಕೃತಿಯ ಆಟ ಇರಬಹುದೇ? ಎಂದು ಯೋಚಿಸಬೇಕಾಗಿದೆ.
ಕೇವಲ ಘಟನೆ ನಡೆದಾಗ ಯಾವನೋ ಒಬ್ಬ ಆರ್.ಟಿ.ಓ ಅಥವಾ ಡ್ರೆöÊವರ್ ಅಥವಾ ವಾಹನ ಮಾಲಿಕ ಅಥವಾ ರಸ್ತೆ ನಿರ್ಮಿಸಿದವ ಅಥವಾ ವಾಹನ ನಿರ್ಮಿಸಿದವನ ಮೇಲೆ ಕ್ರಮ ಕೈಗೊಂಡರೆ ಅಪಘಾತಗಳು ನಿಲ್ಲುವುದಿಲ್ಲ. ಎಂದಿನAತೆ ಸಾವು ಗೋಳಾಟ ವಿಧಿಲೀಲೆ, ದುರಾದೃಷ್ಟ ಎಂದು ಸಮಾಧಾನ ಮಾಡಿಕೊಳ್ಳಬೇಕಷ್ಟೆ.
ನನ್ನ ಅಂತರಂಗದಲ್ಲಿ ಚಿರಂಜೀವಿ ಸ್ಥಾನವನ್ನು ಶಾಶ್ವತವಾಗಿ ಪಡೆದುಕೊಂಡ ಕೆಲವೇ ಕೆಲವು ಜನರಲ್ಲಿ ವಿಠೋಬಣ್ಣ ಒಬ್ಬರು. ತುಂಬು ಮನಸ್ಸಿನಿಂದ ಕರೆದು ಮಾತನಾಡಿಸಿ ಹೋಗುವ ಅವರ ವ್ಯಕ್ತಿತ್ವ ಮರೆಯಲು ಸಾಧ್ಯವಿಲ್ಲ. ಎಲ್ಲರನ್ನು ಸಮಭಾವದಿಂದ ಕಾಣುವುದು ಸ್ನೇಹಮಯಿಯಾಗಿ ವರ್ತಿಸುವುದು, ಆದರಿಸುವುದು ಅವರ ಬಹುದೊಡ್ಡ ಗುಣ. ಎಂದಿಗೂ ಯಾರೊಂದಿಗೂ ವೈರತ್ವ ಸಾಧಿಸದೇ ಎಲ್ಲರನ್ನೂ ಪ್ರಾಮಾಣ ಕತೆಯಿಂದ ತಮ್ಮವಂತೆ ಕಂಡು ಎಲ್ಲರ ಕಷ್ಟ ಸುಖಕ್ಕೆ ಭಾಗಿಯಾದವರು. ಬಂಧು ಬಳಗದವರನ್ನು ಅಪಾರವಾಗಿ ಪ್ರೀತಿಸುವ, ಆದರಿಸುವ ವಿಠೋಬಣ್ಣನ ನಡೆ ಇನ್ನೂ ನೆನಪು ಮಾತ್ರ. ಹಮ್ಮು-ಗಿಮ್ಮುಗಳಿಲ್ಲದೇ ಎಲ್ಲರನ್ನೂ ಕರೆದು ಮಾತನಾಡಿಸುವ ನಿಮ್ಮ ಸರಳ ಸಜ್ಜನಿಕೆಯ ಮಹಾನ್ ವ್ಯಕ್ತಿತ್ವಕ್ಕೆ ಶಿರಬಾಗಿ ನಮಿಸುವೆನು.
ಅವರ ನಡೆ-ನುಡಿಗಳು ನಮಗೆ ದಾರಿದೀಪವಾಗಲಿ ಅವರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನಿಡಲಿ.
ಎನ್ ರಾಮು ಹಿರೇಗುತ್ತಿ