ಕುಮಟಾ : ವಿಧಾನಸಭಾ ಚುನಾವಣಾ ಸಮಯದಲ್ಲಿ ಕುಮಟಾಕ್ಕೆ ವರ್ಗಾವಣೆಗೊಂಡು ತಾಲೂಕಾ ದಂಡಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ್ದ ಎಸ್.ಎಸ್ ನಾಯ್ಕಲಮಠ ವರ್ಗಾವಣೆಯಿಂದ ತೆರವಾಗಿರುವ ಕುಮಟಾ ತಾಲೂಕಾ ದಂಡಾಧಿಕಾರಿ (ತಹಶೀಲ್ದಾರ) ಹುದ್ದೆಗೆ ಸತೀಶ ಗೌಡ ನಿಯುಕ್ತಿಕೊಂಡಿದ್ದಾರೆ.

RELATED ARTICLES  ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ದಿನಾಚರಣೆ

ಇವರು ಈ ಹಿಂದೆ ಹೊನ್ನಾವರ ತಾಲೂಕಾ ತಹಶೀಲ್ದಾರರಾಗಿ, ಕುಮಟಾ ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಹಾಗೂ ಕುಮಟಾದ ಉಪತಹಶೀಲ್ದಾರರಾಗಿ ಸೇವೆ ಸಲ್ಲಿಸಿ, ಜನರ ಜೊತೆಗೆ ಉತ್ತಮ ಬಾಂಧವ್ಯ ಹೊಂದಿ ವಿವಿಧ ಕಾರ್ಯಗಳಲ್ಲಿ ಚುರುಕಿನ ಕಾರ್ಯಾಚರಣೆ ನಡೆಸಿ ಸೈ ಎನಿಸಿಕೊಂಡವರು.

RELATED ARTICLES  ಜಿಲ್ಲೆಯ ಎಂಡೋಸಲ್ಪಾನ್ ಪೀಡಿತರಿಗಾಗಿ ಸೇವೆಯಲ್ಲಿದ್ದ ಸಂಚಾರಿ ಆರೋಗ್ಯ ಘಟಕಗಳಿಗೆ ಅನುದಾನದ ಬಿಡುಗಡೆಗೆ ಪ್ರಯತ್ನಿಸಲಾಗುವುದು: ಶಾಸಕ ದಿನಕರ ಶೆಟ್ಟಿ.

ಇವರ ಅವಧಿಯಲ್ಲಿ ಉತ್ತಮ ಕಾರ್ಯಗಳು ಆಗುವಂತಾಗಲಿ ಎಂದು ಹಾರೈಸಿ, ತಹಶೀಲ್ದಾರ ಕಛೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.