ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯ ತೇಜ್ ಹೆಸರಿನ ಟಗ್ ಬೋಟ್ ನ ಇಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಕಸ್ಮಿಕವಾಗಿ ಇಂಜಿನ್ ಗೆ ಬೆಂಕಿ ತಗುಲಿ ನೌಕಾನೆಲೆಯ ಡಾಕ್ ಯಾರ್ಡ್ ಗೆ ಬೆಂಕಿ ಆವರಿಸಿತ್ತು. ಘಟನೆಯಲ್ಲಿ ನೌಕಾನೆಲೆಯ ತೇಜ್ ಟಗ್ ಬೋಟ್ ನ ಒಳಭಾಗದ ಇಂಜಿನ್ ಸಂಪೂರ್ಣ ಸುಟ್ಟುಹೋಗಿದ್ದು, ದೊಡ್ಡ ಮಟ್ಟದಲ್ಲಿ ನೌಕಾನೆಲೆಯ ಡಾಕ್ ಯಾರ್ಡ್ ನಲ್ಲಿ ಹೊಗೆ ಆವರಿಸಿತ್ತು. ತೇಜ್ ಹೆಸರಿನ ಈ ಟಗ್ ಬೋಟ್ ಅನ್ನು ನೌಕಾ ಹಡಗುಗಳನ್ನು ಡಾಕ್ ಗೆ ಎಳದು ತರಲು ಉಪಯೋಗಿಸಲಾಗುತ್ತದೆ. ನೌಕಾ ಅಗ್ನಿಶಾಮಕ ಸಿಬ್ಬಂದಿ ಹಾಗೂ ಕಾರವಾರ ಅಗ್ನಿಶಾಮಕ ಸಿಬ್ಬಂದಿಗಳಿoದ ಬೆಂಕಿ ನಂದಿಸಿದ್ದು, ಇದರಿಂದಾಗಿ ದೊಡ್ಡ ಮಟ್ಟದ ಅನಾಹುತ ತಪ್ಪಿದೆ.

RELATED ARTICLES  ಭೂತ ಪಿಶಾಚಿಗಳ ಕಾಟ ನಿವಾರಣೆ ಭಜರಂಗಿಯ ಆರಾಧನೆ : ಹೊನ್ನಾವರದಲ್ಲಿ ಕಾಂಗ್ರೆಸ್ ಗೆ ಮಾತಿನ ಛಾಟಿ ಬೀಸಿದ ಯೋಗಿ ಆದಿತ್ಯನಾಥ್