ಕುಮಟಾ : ಮಿರ್ಜಾನ್ ವಲಯ ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಪ್ರಗತಿ ವಿದ್ಯಾಲಯ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.  ಯೋಜನಾ ಗೌಡ ಉದ್ದ ಜಿಗಿತ, ತ್ರಿವಿಧ ಜಿಗಿತ ಪ್ರಥಮ ಹಾಗೂ 200 ಮೀ. ಓಟ ತೃತೀಯ, ಅರುಂಧತಿ ಗೌಡ ಜವಲಿನ್ ಎಸೆತ ಪ್ರಥಮ, ತೇಜಸ್ವಿನಿ ಗೌಡ 800 ಮೀ ಓಟ ದ್ವಿತೀಯ, ಮಾಧುರಿ ಗೌಡ 400 ಮೀ ಓಟ ದ್ವಿತೀಯ, ಮಾನಸಾ ಗೌಡ ಹ್ಯಾಮರ್ ಎಸೆತ ದ್ವಿತೀಯ, ದೇವಕಿ ಗೌಡ ಎತ್ತರ ಜಿಗಿತ ದ್ವಿತೀಯ, 3000 ಮೀ ಓಟ ತೃತೀಯ, ಮೇಘಾ ಗೌಡ 1500 ಮೀ ಓಟ ತೃತೀಯ, ಪದ್ಮಾ ಗೌಡ ಜವಲಿನ್ ಎಸೆತ ತೃತೀಯ, ಕವಿತಾ ಗೌಡ ಚಕ್ರ ಎಸೆತ ತೃತೀಯ, ಗಣೇಶ ಗೌಡ 1500 ಮೀ ಓಟ ದ್ವಿತೀಯ, ಎತ್ತರ ಜಿಗಿತ ತೃತೀಯ, ದೀಪಕ್ ಗೌಡ ತ್ರಿವಿಧ ಜಿಗಿತ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದ ಗುಂಪಿನಾಟದಲ್ಲಿ  ವಾಲಿಬಾಲ್ ಮತ್ತು  ಥ್ರೋ ಬಾಲ್ ನಲ್ಲಿ ದ್ವಿತೀಯ, ಬಾಲಕರ ವಿಭಾಗದ ಗುಂಪಿನಾಟ ವಾಲಿಬಾಲ್ ಪ್ರಥಮ ,ಥ್ರೋ ಬಾಲ್  ದ್ವಿತೀಯ ಸ್ಥಾನ ಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಸಾಧಕ ವಿದ್ಯಾರ್ಥಿಗಳನ್ನು, ತರಬೇತಿ ನೀಡಿದ ಶಿಕ್ಷಕರಾದ ಎಮ್.ಆಯ್.ಭಟ್ಟರನ್ನು ವಿದ್ಯಾನಿಕೇತನ ಮೂರೂರು, ಕಲ್ಲಬ್ಬೆ ಸಂಸ್ಥೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯಾಧ್ಯಾಪಕರು , ಶಿಕ್ಷಕವೃಂದ , ಬೋಧಕೇತರ ಸಿಬ್ಬಂದಿ ವರ್ಗ, ಪೂರ್ವ ವಿದ್ಯಾರ್ಥಿ ವೃಂದ , ಪಾಲಕ ಪೋಷಕ ವೃಂದ ಅಭಿನಂದಿಸಿದೆ.
RELATED ARTICLES  ಕುಮಟಾದಲ್ಲಿ 24, ಹೊನ್ನಾವರದಲ್ಲಿ 11 ಕೊರೋನಾ ಕೇಸ್