ಕುಮಟಾ : ಕುಮಟಾದಲ್ಲಿ ಹಿಂದೆಂದೂ ಕೇಳಿರದ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಖುರಾನ್ ಓದಲು ಮಸೀದಿಗೆ ಬರುತ್ತಿದ್ದ ಬಾಲಕನಿಗೆ ಅಸಹಜ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಪಟ್ಟಣದ ಮಸೀದಿಯೊಂದರ ಮೌಲಾನನೋರ್ವನ
ಪೋಕ್ಸೊ ಪ್ರಕರಣ ದಾಖಲಾಗಿದೆ.

ಪಶ್ಚಿಮ ಬಂಗಾಳ ಮೂಲದವನಾದ ಮೌಲಾನ ಅಬ್ಬುಸ್ ಸಮದ್ ಜಿಯಾಯಿ (25) ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ. ಈತ ಸೆ. 23ರ ರಾತ್ರಿ 8 ಗಂಟೆ ಸರಿಸುಮಾರಿನಲ್ಲಿ ಖುರಾನ್ ಓದಲು ಬಂದ ಬಾಲಕನ ಗುಪ್ತಾಂಗ ಸ್ಪರ್ಶಿಸಿ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಹಾಗೂ ಕೆಲ ದಿನಗಳ ಹಿಂದೆಯೂ ಹೀಗೆಯೇ ದೌರ್ಜನ್ಯ ಎಸಗಿದ್ದ ಎಂದು ಬಾಲಕನ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಸಮುದ್ರಪಾಲಾಗುತ್ತಿದ್ದ ನಾಲ್ವರ ರಕ್ಷಣೆ.

ಪೋಕ್ಸೋ ಕಾನೂನಿನನ್ವಯ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ಬಳಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರ ಎದುರು ಹಾಜರು ಪಡಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿತನನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

RELATED ARTICLES  ಕಾರು - ಬೈಕ್ ಡಿಕ್ಕಿ : ಓರ್ವ ಸಾವು.