ಕುಮಟಾ : ತಾಲೂಕಿನ ಧಾರೇಶ್ವರದ ರಾಷ್ಟ್ರೀಯ ಹೆದ್ದಾರಿ (66)ರ ಕರ್ನಾಟಕ ಬ್ಯಾಂಕ್ ಸನಿಹದಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರೊಂದು ಬಡಿದದ್ದರಿಂದ ಅಪಘಾತಕ್ಕೊಳಗಾದ ಮಹಿಳೆಯು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಮೀನುಗಾರ ಮಹಿಳೆ ಗಿರಿಜಾ ನಾರಾಯಣ ಅಂಬಿಗ (60) ಇವಳಿಗೆ, ಅತೀ ವೇಗ ಹಾಗೂ ನಿಷ್ಕಾಳಜಿಯಿಂದ ಕಾರು ಚಲಾಯಿಸಿಕೊಂಡು ಬಂದ ಹೈದರಾಬಾದ್ ತೆಲಂಗಾಣ ಮೂಲದ ದೀಪಕ ನಾಗರಾಜ ಡಿಕ್ಕಿ ಪಡಿಸಿದ ಪರಿಣಾಮ ಮಹಿಳೆಯನ್ನು ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ. ಅಪಘಾತದ ರಭಸಕ್ಕೆ ಗಿರಿಜಾಳ ಕಾಲು, ತಲೆ ಭಾಗಕ್ಕೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. 

RELATED ARTICLES  ವಾಚಾಳಿತನಕ್ಕೆ ದೊರೆತ ಶಿಕ್ಷೆ

ಗಿರಿಜಾ ಧಾರೇಶ್ವರದ ಕರ್ನಾಟಕ ಬ್ಯಂಕ್ ಹತ್ತಿರದಲ್ಲಿ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಸಂದರ್ಭದಲ್ಲಿ ಹೊನ್ನಾವರ ಕಡೆಯಿಂದ ಕುಮಟಾ ಕಡೆ ಕಾರು ಚಲಾಯಿಸಿಕೊಂಡು ಬಂದಿರುವ ಕಾರು ಚಾಲಕ ದೀಪಕ ನಾಗರಾಜ  ಡಿಕ್ಕಿಪಡಿಸಿದ್ದಾನೆ ಎಂದು ಪ್ರಕರಣ ದಾಖಲಾಗಿದೆ. 

RELATED ARTICLES  ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಮಾಡಿದ ಪತಿ : ಮುರುಡೇಶ್ವರದಲ್ಲಿ ನಡೆದ ಘಟನೆ : ಆರೋಪಿಯನ್ನು ಬಂಧಿಸಿದ ಪೊಲೀಸರು.