ಕಾರವಾರ : ನಿನ್ನೆ ಡೆಂಗ್ಯೂದಿಂದ ಯುವಕನೋರ್ವನ ಸಾವು ಸಂಭವಿಸಿದ್ದು, ಇಂದು ಡೆಂಗ್ಯೂಗೆ ಇನ್ನೂ ಓರ್ವ ಸಾವು ಕಂಡಿದ್ದಾರೆ ಎಂಬ ಬಗ್ಗೆ ಎಲ್ಲೆಡೆ ಸುದ್ದಿಯಾಗುತ್ತಿದೆ. ಈ ಮೂಲಕ ಡೆಂಗ್ಯೂನಿಂದ ಸಾವು ಸಂಭವಿಸಿದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆಯೇ ಎಂಬುದು ಇನ್ನೇನು ಆರೋಗ್ಯ ಇಲಾಖೆಯಿಂದ ತಿಳಿದು ಬರಬೇಕಿದೆ.. ಭಟ್ಕಳದ ಖಾಝಿಯಾ ಸ್ಟ್ರೀಟ್ ನಿವಾಸಿಯೋರ್ವರು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಸಾವು ಕಂಡವರು ಎಂದು ಎಲ್ಲೆಡೆ ಸುದ್ದಿಯಾಗಿದೆ.
ನಿನ್ನೆ ರಾತ್ರಿ ಮಾವಿನಕುರ್ವಾ ಪಂಚಾಯ್ತಿ ವ್ಯಾಪ್ತಿಯ ತಲಗೋಡು ನಿವಾಸಿ ಪ್ರಜ್ವಲ್ ಗೋವಿಂದ ಕಾರ್ವಿ (24 )ಡೆಂಗ್ಯೂಗೆ ಬಲಿಯಾಗಿದ್ದ. ಜಿಲ್ಲೆಯಲ್ಲಿ ಭಟ್ಕಳದಲ್ಲಿ ಅತೀ ಹೆಚ್ಚು ಡೆಂಗ್ಯೂ ಜ್ವರ ಕಾಣಿಸಿಕೊಂಡಿದೆ. ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ನಡೆಸುವ ನಾಲ್ಕು ಜನರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು ಜಿಲ್ಲೆಯಲ್ಲಿ 26 ಜನರು ಡೆಂಗ್ಯೂದಿಂದ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಇನ್ನು 8 ಜನರಲ್ಲಿ ಮಲೇರಿಯ, ಮೂವತ್ತೆರಡು ಜನರಿಗೆ ಇಲಿಜ್ವರ ಕಾಣಿಸಿಕೊಂಡಿದೆ.