ಯಲ್ಲಾಪುರ: ತಾಲೂಕಿನ ಚಂದಗುಳಿ ಗ್ರಾ.ಪಂ ವ್ಯಾಪ್ತಿಯ ಹುಬ್ನಳ್ಳಿಯ ಸೊರಟೆಗಾಳಿ ಬಳಿ ಬೃಹತ್ ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ವ್ಯತ್ಯಯ ಉಂಟಾಯಿತು. ಮರ ರಸ್ತೆಯ ಮೇಲೆ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೂ ತೊಂದರೆಯಾಯಿತು. ಹುಬ್ನಳ್ಳಿಯ ಶೌರ್ಯ ತಂಡದವರು ಮರವನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹೆಸ್ಕಾಂ ಸಿಬ್ಬಂದಿ ವಿದ್ಯುತ್ ಲೈನ್ ಸರಿಪಡಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿದರು. ಶೌರ್ಯ ತಂಡದ ಚರಣ ನಾಯ್ಕ, ಸಚಿನ್ ನಾಯ್ಕ, ಚಂದ್ರಕಾಂತ ನಾಯ್ಕ, ಗ್ರಾಮಸ್ಥರಾದ ಆನಂದ, ನಾರಾಯಣ, ಮಹಾಬಲೇಶ್ವರ, ಅನಂತ ನಾಯ್ಕ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

RELATED ARTICLES  ಅನಂತ ಮೂರ್ತಿ ಟ್ರಸ್ಟ್ ವತಿಯಿಂದ ಉಚಿತ ಕೊನೆ ಗೌಡರ ಜೀವೇವಿಮೆ ಕಾರ್ಯ : ಯಲ್ಲಾಪುರ ತಾಲೂಕಿನಲ್ಲಿ ಪ್ರಾರಂಭ