ಹನ್ನೆರಡನೆ ಶತಮಾನ ಎಂದಾಕ್ಷಣ ನೆನಪಿನಂಗಳಕ್ಕೆ ಇಳಿಯುವುದು ಬಸವಾದಿ ಶರಣರ & ವಚನ ಚಳುವಳಿ, ಸಂಸತ್ತು ಎಂದು ಗುರುತಿಸಲ್ಪಡುವ ಬಸವಣ್ಣನವರು ಕಟ್ಟಿದ “ ಅನುಭವ ಮಂಟಪ” ಕಲ್ಯಾಣಕ್ಕೆ ಬರುವ ಶರಣರನ್ನು ಪರೀಕ್ಷಿಸುವ ಕಾಯಕ ಮಡಿವಾಳ ಮಾಚಯ್ಯನದು, ದಾಸೋಹ, ಗುರುಲಿಂಗ, ಜಂಗಮ ಸೇವೆ, ಷಟಸ್ಥಲ ಕಾಯಕ ಮಹಿಮೆ, ಶೂನ್ಯ ಸಂಪಾದನೆ ಹೀಗೆ ಹಲವು ವಿಷಯಗಳ ಮೇಲೆ ಅನುಭವ ಮಂಟಪದಲ್ಲಿ ನಡೆಯುವ ಚರ್ಚೆಗಳಲ್ಲಿ “ ಮಾಚಿತಂದೆ” ಇರುತ್ತಿದ್ದರು.


ತಂದೆ ಪರ್ವತಯ್ಯ ತಾಯಿ ಸುಜ್ಞಾನವ್ವ, ಪತ್ನಿ ಮಲ್ಲಿಗಮ್ಮ ಗುರು ಮಲ್ಲಿಕಾರ್ಜುನ ಸ್ವಾಮಿ, ವೀರಭದ್ರನ ಅವತಾರವೆಂದು ಜನ ನಂಬಿದರು ಮಾಚಿದೇವ ನುರಿತ ವಿದ್ವಾಂಸ, ಕಟು ವಿಮರ್ಶಕ, ನೇರನುಡಿ, ಯಾರಿಗೂ ಹೆದರದ ಜಗ್ಗದ ಎದೆಗಾರಿಕೆ ಯುದ್ದದಲ್ಲಿ ಯಾರನ್ನೂ ಬೇಕಾದರೂ ಸದೆ ಬಡಿದು ಗೆಲ್ಲಬಲ್ಲ ವೀರ, ಶಿರಶಣರ ಬಟ್ಟೆಯನ್ನು ಮಾತ್ರ ಶುಚಿಗೊಳಿಸಿ ಮಡಿಮಾಡಿ ತರುವ ನಿಯಮವನ್ನು ತಮಗೆ ತಾವೆ ನಿರ್ಧರಿಸಿದರು. ವೈಯಕ್ತಿಕ ಶಿಸ್ತು & ಜೀವನ ಶೈಲಿಯ ನಿಯಮವನ್ನು ಶಾಸನದಂತೆ ಪಾಲಿಸಿದರು ಶಿವಶರಣರ ವಚನಸಾಹಿತ್ಯದ ರಕ್ಷಣೆಗೆ ಪಣತೊಟ್ಟು ನಿಂತರು, ಸರ್ವರಿಗೂ ಸಮಪಾಲು ಸಮಬಾಳು ಅರಿವನ್ನು ಮೂಡಿಸಿದರು. ಅವರ ವಚನ ಶೈಲಿ ತುಂಬಾ ಸರಳ.

RELATED ARTICLES  ಜಿಗಿಯುವ ಮುನ್ನ ಜಾಗರೂಕತೆ ಇರಬೇಕು ಎಂದರು ಶ್ರೀಧರರು.


“ಇಂತೀ ತ್ರಿವಿಧ ಪಾಶವ ಹರಿದು ನಿಜಾನಂದ
ವಿಂಗೈಕ್ಯರ ತೋರಾ ಕಲಿದೇವರ ದೇವ”
ಮಾಚಯ್ಯನದು ಮಡಿವಾಳ ಕೆಲಸ ಬಟ್ಟೆಯನ್ನು ಶುದ್ದ ಮಾಡುವಂತೆ ಭಕ್ತರ ಮನಸ್ಸನ್ನು ಶುದ್ದ ಮಾಡಿದ್ದು ವಿಶ್ವಕ್ಕೆ ಕಾಯಕದ ಘನತೆಯನ್ನು ತಿಳಿಸಿಕೊಟ್ಟಿದ್ದಾರೆ. ಆಡು ಭಾಷೆಯಲ್ಲಿ ಮೂರು ಕೋಟಿ ಮುನ್ನೂರು ವಚನಗಳನ್ನು ರಚನೆ ಮಾಡಿದ್ದಾರೆಂದು ಶರಣರ ವಚನವೊಂದರಲ್ಲಿ ಉಲ್ಲೇಖ ಇದೆ. ನಮಗೆ ಲಭ್ಯವಿದ್ದುದು ಮಾತ್ರ 512 ವಚನಗಳು, ಮನುಕುಲಕ್ಕೆ ನೆಮ್ಮದಿಯ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ಮಾಚಿತಂದೆ ಉಳುವಿಯಿಂದ ದೇವರ ಹಿಪ್ಪರಗಿಗೆ ಮರಳಿ ಅನೇಕ ವರ್ಷಗಳ ವರೆಗೆ ಶರಣರ ತತ್ವ ಅರಿವು ಅನುಭವಗಳನ್ನು ಸಾರುತ್ತಾ ವಿಶ್ವದಾರ್ಶನಿಕರಾದರು, ಮಡಿವಾಳ ಮಾಚದೇವರ ಸ್ಮರಣೆಯ ಜಯಂತೋತ್ಸವ ಈ ದೇಶಕ್ಕೆ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸುತ್ತೇವೆ.

RELATED ARTICLES  ಶ್ರೀಧರರು ಹೇಳುವ ಪ್ರಕಾರ ಮಹಾತ್ಮರ ನಡೆ ಇಂತಿರುವುದು.

ಉದಯ ಮಡಿವಾಳ ಹೆಗಡೆ