ಕುಮಟಾ: ಬಿಜೆಪಿ ಮುಖಂಡರಿಗೆ ಇತ್ತೀಚಿನ ದಿನದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಪ್ರಚಾರ ಗಿಟ್ಟಿಸಿಕೊಳ್ಳುವ ಸ್ವಭಾವ ಹಾಗೂ ಇದೇ ಆತುರದಲ್ಲಿ ನಾಲಿಗೆ ಹರಿಬಿಡುವ ಚಾಳಿ ಕಾಯಕವಾಗಿದ್ದು, ಇದು ಶಾಂತಿ ಕದಡುವ ಪ್ರಯತ್ನವಾಗಿದೆ ಎಂದು ಕೆಪಿಸಿಸಿ ಸಂಯೋಜಕ ಭಾಸ್ಕರ ಪಟಗಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

ಕಳೆದೆರಡು ತಿಂಗಳಿಂದ ಸಂಸದರು ಜಿಲ್ಲೆಯಲ್ಲಿ ಗಾಡ ನಿದ್ರೆಯಿಂದ ಎದ್ದು ಜಿಲ್ಲೆಯ ಮುಗ್ಧ ಜನರನ್ನ ಮರಳು ಮಾಡಲು ಪ್ರಯತ್ನಿಸುತ್ತಿದ್ದು, ಭಾವನಾತ್ಮಕ ವಿಷಯದಿಂದ ಬಿಜೆಪಿ ಟಿಕೆಟ್ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಅದಲ್ಲದೆ ಉತ್ತರ ಕನ್ನಡ ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ಹಾಗೂ ರಾಜ್ಯಮಟ್ಟದಲ್ಲಿ ತಾವು ಮುಖಂಡರೆಂದು ಹೇಳುವ ಕೆಲವರು ಜಿಲ್ಲೆಗೆ ಬಂದು ಪ್ರಚೋದನೆ ಮಾಡುವ ಕಾಯಕದಲ್ಲಿ ತೊಡಗಿದ್ದಾರೆ ಎಂದು ಅವರು ದೂರಿದ್ದಾರೆ.

ಪ್ರಧಾನಮಂತ್ರಿಯವರು ಜಿಲ್ಲೆಗೆ ಬಂದಾಗ ಬೆಲೆ ಕೊಡದ ಸಂಸದರಿಗೆ ಸಂಸ್ಕೃತಿ ಇಲ್ಲ ಎಂಬುದು ಜಿಲ್ಲೆಯ ಜನತೆ ಅರಿತಿದ್ದಾರೆ. ಇನ್ನು 

RELATED ARTICLES  ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಯೇ ಮಾಡುತ್ತೇವೆ : ಡಿ.ಕೆ ಶಿವಕುಮಾರ್

ಒಮ್ಮೆಯೂ ಜಿಲ್ಲೆಯ ಸಮಸ್ಯೆ ಬಗ್ಗೆ ಧ್ವನಿಯೆತ್ತದ ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣಿಮನೆ ಇತ್ತೀಚೆಗೆ ಭಟ್ಕಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಹೈಕಮಾಂಡ್ಗೆ ತಮ್ಮ ಬಗ್ಗೆ ಗಮನವಿರಲಿ ಎನ್ನುವುದಕ್ಕಾಗಿ ಪ್ರಚೋದನಕಾರಿ ಹೇಳಿಕೆ ನೀಡಿ ಯಶಸ್ವಿಯಾಗುತ್ತೇವೆ ಎಂಬ ಭಾವನೆಯಿಂದ ಜಿಲ್ಲೆಯಲ್ಲಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. 

ಎಂ.ಪಿ ಟಿಕೆಟ್ ಕೊಡಬಹುದೇನೋ ಎನ್ನುವ ಗುಂಗಿನಲ್ಲಿ ನೀಡುವ ಇಂಥಹ ಹೇಳಿಕೆಯನ್ನು ಕೆಪಿಸಿಸಿ ಸಂಯೋಜಕನಾಗಿ ಖಂಡಿಸುತ್ತೇನೆ ಎಂದಿದ್ದು,  ಜಿಲ್ಲೆಯ ಮತದಾರರು ನಿಮ್ಮ ಸುಳ್ಳು ಹೇಳಿಕೆಗಳಿಗೆ ಕಿವಿ ಕೊಡುವುದಿಲ್ಲ. ಲೋಕಸಭೆ ಚುನಾವಣೆ ಸಮೀಪದಲ್ಲಿ ಬಂದು ನೀತಿ ಪಾಠವನ್ನು ಜಿಲ್ಲೆಯ ಜನತೆಗೆ ನಿಮ್ಮಿಂದ ಕೇಳುವ ಅವಶ್ಯಕತೆ ಇಲ್ಲ. ಪ್ರಚೋದನಕಾರಿ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿದರೆ ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಕಾಲ ಮೇಲೆ ನೀವೇ ಚಪ್ಪಡಿ ಕಲ್ಲು ಹಾಕಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದು ಎಚ್ಚರಿಸಿದ್ದಾರೆ.

RELATED ARTICLES  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸರಕಾರ ಹಣ ನೀಡದಿದ್ದರೆ ಆಮರಣಾಂತ ಉಪವಾಸ ಸತ್ಯಾಗ್ರಹ : ಅನಂತಮೂರ್ತಿ ಹೆಗಡೆ.

 ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ವರ್ಗದವರ ಮತವನ್ನು ಗಿಟ್ಟಿಸಿಕೊಳ್ಳುವ ಮುಖಾಂತರ ಅತ್ಯಧಿಕ ಅಂತರದಲ್ಲಿ ಗೆದ್ದಿದ್ದಾರೆ. ಅವರ ಬಿಡುವಿಲ್ಲದ ಒತ್ತಡದಲ್ಲಿ ಯಾವುದೇ ರೀತಿಯ ಜಿಲ್ಲೆಯಲ್ಲಿ ಅಹಿತಕರೆ ಘಟನೆ ನಡೆಯದಂತೆ ಸಾಕಷ್ಟು ಸಮನ್ವಯದಿಂದ ಸೌಹಾರ್ದತೆಯಿಂದ ಎಲ್ಲ ವರ್ಗದವರೊಂದಿಗೆ ಭಾಂದವ್ಯ ಹೊಂದಿ ಕಾಂಗ್ರೆಸ್ ಪಕ್ಷದಲ್ಲಿ ಉತ್ತಮವಾದ ಆಡಳಿತ ನೀಡುತ್ತಿದ್ದಾರೆ. ಬಡವರಿಗೆ ಗ್ಯಾರಂಟಿ ಯೋಜನೆಯಿಂದ ದಿನನಿತ್ಯ ಕಾಂಗ್ರೆಸ್ ಬೆಂಬಲಿಸುತ್ತಿದ್ದಾರೆ. ಬಿಜೆಪಿಯವರು ಒಮ್ಮೆಯಾದರೂ ಬಡವರ ಸಾಮಾನ್ಯ ಜನರ ಏಳಿಗೆಗಾಗಿ ಯಾವುದಾದರೂ ಒಂದು ಯೋಜನೆಯನ್ನು ಜಾರಿಗೆ ತಂದಿರುವ ಮಾಹಿತಿ ನೀಡಿ ಎಂದು ಅವರು ಸವಾಲು ಎಸೆದಿದ್ದಾರೆ.