ಕಾರಿನ ಫಾಸ್ಟ್ ಟ್ಯಾಗ್ ರೀಡ್ ಆಗದ ಹಿನ್ನೆಲೆಯಲ್ಲಿ ನಡೆದ ವಾಗ್ವಾದದ ಕೊನೆಯಲ್ಲಿ ಟೋಲ್ ಸಿಬ್ಬಂದಿಗಳು ಕಾರಿನ ಚಾಲಕ ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅವಾಚ್ಯ ಶಬ್ದಗಳಿಂದ ಬೈದದ್ದಲ್ಲದೇ, ೯ ಜನರ ಮೇಲೆ ಹಲ್ಲೆ ಮಾಡಿದ ಘಟನೆ ತಾಲೂಕಿನ ಹೊಳೆಗದ್ದೆ ಟೋಲ್ ನಾಕಾ ಬಳಿ ಶುಕ್ರವಾರ ರಾತ್ರಿ ನಡೆದಿದೆ.
ಮಂಗಳೂರಿನ ಮಹ್ಮದ್, ಮಹ್ಮದ್ ಸೈಯದ್, ಮಹ್ಮದ್ ರಿಫಾನ್, ಮಹ್ಮದ್ ರೆಹಮಾನ್,ಮೊಹದ್ದೀನ್ , ನಾಸೀರ್ ಅಬ್ದುಲ್ ಕರೀಮ್, ಕೇರಳದ ಆಯಿಷಾ , ಫಾತಿಮ, ಮುಜೀಬ್ ಹಲ್ಲೆಗೊಳಗಾದವರಾಗಿದ್ದಾರೆ.
ಹೊಳೆಗದ್ದೆಯ ಟೋಲ್ ನ ಸಿಬ್ಬಂದಿ ಸತೀಶ, ಕಿರಣ , ಮಂಜುನಾಥ , ನಾಗರಾಜ ಸೇರಿ ಇನ್ನೂ ೪-೫ ಜನ ಅಪರಿಚಿತರು ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳಾಗಿದ್ದಾರೆ.
ಫಾಸ್ಟ್ ಟ್ಯಾಗ್ ತಾಂತ್ರಿಕ ತೊಂದರೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ರೀಡ್ ಆಗದೆ ಹಣ ಸಂದಾಯವಾಗಿಲ್ಲದ ವಿಷಯಕ್ಕೆ ಫೆ.೧೬ ರಂದು ರಾತ್ರೆ ಕಾರಿನಲ್ಲಿ ಬಂದವರು ಹಾಗೂ ಹೊಳೆಗ್ಗೆಯಲ್ಲಿರುವ ಐ.ಆರ್.ಬಿ ಕಂಪನಿಯ ಸಿಬ್ಬಂದಿಗಳ ಮಧ್ಯೆ ವಾಗ್ವಾದ ನಡೆದಿದೆ. ಆದು ವಿಕೋಪಕ್ಕೆ ಹೋಗಿ ಹೊಡೆದಾಟಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿ ಹಲ್ಲೆಗೊಳಗಾದ ಕಾರಿನ ಪ್ರಯಾಣಿಕರು ಇಲ್ಲಿನ ಪೋಲೀಸ್ ಠಾಣೆಯಲ್ಲಿ ಟೋಲ್ ಸಿಬ್ಬಂದಿಗಳ ವಿರುದ್ದ ಪ್ರತ್ಯೇಕವಾಗಿ ಎರಡು ದೂರು ದಾಖಲಿಸಿದ್ದಾರೆ.