Satwadhara News

ಕರ್ತವ್ಯಕ್ಕೆ ತೆರಳುವ ವೇಳೆ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಸಾವು.

ಜೋಯಿಡಾ : ಕರ್ತವ್ಯಕ್ಕೆ ತೆರಳುತ್ತಿದ್ದ ವೇಳೆ ಬೈಕೊಂಡು ಸ್ಕಿಡ್ ಆಗಿ ಬಿದ್ದು ಸವಾರರೋರ್ವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಜೋಯಿಡಾ ತಾಲೂಕಿನ ಅಣಶಿಯ ನಿಗುಂದಿಯಲ್ಲಿ ನಡೆದಿದೆ.

ಖಾನಾಪುರ ಮೂಲದ ವಿನಾಯಕ ಜಂಗ್ಲಿ ಎಂಬವರೇ ಮೃತಪಟ್ಟ ದುರ್ದೈವಿಯಾಗಿದ್ದು, ಇವರು ಕಾರವಾರ ಜೈಲಿನಲ್ಲಿ ವಾರ್ಡರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದರು. ತನ್ನೂರು ಖಾನಾಪುರಕ್ಕೆ ತನ್ನ ದ್ವಿಚಕ್ರ ವಾಹನದಲ್ಲಿ ಹೋಗಿ ಹಿಂದಿರುಗಿ ಬರುತ್ತಿದ್ದಾಗ ಅಣಶಿಯ ನಿಗುಂದಿ ಎಂಬಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ‌ ಬಿದ್ದ ಪರಿಣಾಮವಾಗಿ ಗಂಭೀರ ಗಾಯಗೊಂಡ ವಿನಾಯಕ್ ಸ್ಥಳದಲ್ಲಿ ಮೃತಪಟ್ಟಿದ್ದಾರೆ.