ಲೋಕಸಭಾ ಚುನಾವಣೆಯಲ್ಲಿ ಯಾರು ಸ್ಪರ್ಧಿಸಬೇಕೆಂಬ ಚಿತ್ರಣ ಒಂದೊಂದೇ ಕ್ಷೇತ್ರದಲ್ಲಿ ಸ್ಪಷ್ಟವಾಗತೊಡಗಿದ್ದು
ಕಾಂಗ್ರೇಸ್ ಈಗಾಗಲೇ ಮಹಿಳಾ ಅಭ್ಯರ್ಥಿಯಾಗಿ ಅಂಜಲಿ ನಿಂಬಾಳಕರ್ ಅವರ ಹೆಸರನ್ನು ಘೋಷಣೆ ಮಾಡುವ ಹಂತದಲ್ಲಿದೆ. ದಕ್ಷಿಣ ಭಾರತದಲ್ಲಿಯೇ 2019 ರ ಚುನಾವಣೆಯಲ್ಲಿ ದಾಖಲೆಯ ಮತದೊಂದಿಗೆ ವಿಜಯ ಗಳಿಸಿದ ಭಾರತೀಯ ಜನತಾಪಾರ್ಟಿಯ ಅಭ್ಯರ್ಥಿ ಪ್ರಬಲ ಹಿಂದುತ್ವವಾದಿ ಅನಂತಕುಮಾರ ಹೆಗಡೆಯವರು ಸತತವಾಗಿ ಜಯಿಸುತ್ತ ಬಂದಿದ್ದು ಒಂದುಕಾಲದಲ್ಲಿ ಕಾಂಗ್ರೇಸ್ ನ ಭದ್ರಕೋಟೆ ಎನಿಸಿದ ಅಂದಿನ ಕೆನರಾಕ್ಷೇತ್ರವನ್ನು ಬಿಜೆಪಿಯ ಗಂಡು ಮೆಟ್ಟಿನ ಸ್ಥಳವಾಗಿಸಿದ್ದು ಈಗ ಇತಿಹಾಸ
ಘಟಾನುಘಟಿಗಳನ್ನು ಸೋಲಿಸಿದ ಖ್ಯಾತಿಯ ಅನಂತ ಕುಮಾರ ಹೆಗಡೆಯವರು ಮತ್ತೊಮ್ಮೆ ಅಭ್ಯರ್ಥಿ ತನ ಬಯಸಿದ್ದರೂ ಇದುವರೆಗೂ ಈ ಕ್ಷೇತ್ರದಲ್ಲಿ ಬಿಜೆಪಿ ಟಿಕೇಟ್ ಘೋಷಣೆ ಮಾಡದೇ ಸಸ್ಪೆನ್ಸ ಕಾದುಕೊಂಡಿದೆ.


ದಿನದಿಂದ ದಿನಕ್ಕೆ ಊಹಾಪೋಹಗಳು ಹೆಚ್ಚುತ್ತಿದ್ದು ಕಡೆಯ ಘಳಿಗೆಯಲ್ಲಿ ಅನಂತಕುಮಾರ್ ಹೆಗಡೆಯವರೇ ಮತ್ತೆ ಅಭ್ಯರ್ಥಿ ಆಗಲಿದ್ದಾರೆ ಎಂಬ ಗುಸುಗುಸು ಸುದ್ದಿಯ ನಡುವೆ ಮಾಜಿ ಸ್ಪೀಕರ್ ಕಾಗೇರಿ,ಹರಿಪ್ರಕಾಶ ಕೋಣೇಮನೆ,ಡಾ‌,ಜಿ ಜಿ ಹೆಗಡೆ,ವಕೀಲ‌ ನಾಗರಾಜ ನಾಯಕ ನಿಕಟ ಪೂರ್ವ ಅಧ್ಯಕ್ಷ ವೆಂಕಟೇಶ ನಾಯಕ,ಅಲ್ಲದೇ ಜಿಲ್ಲೆಯ ಮೂಲದ ಚಕ್ರವರ್ತಿ ಸೂಲಿಬೆಲೆ ಹೆಸರೂ ಕೇಳಿ ಬರುತ್ತಿವೆ.


ಕರ್ನಾಟಕದಲ್ಲಿ ಕನಿಷ್ಠ ಮೂವರು ಮಹಿಳೆಯರಿಗೆ ಟಿಕೇಟ್ ನೀಡಬೇಕೆಂಬ ನಿರ್ಧಾರ ಬಿಜೆಪಿ ಮಾಡಿದದ್ದು ಈಗಾಗಲೇ ಬೆಂಗಳೂರು ಉತ್ತರ,ದಾವಣಗೆರೆ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಘೋಷಣೆ ಮಾಡಿದೆ.ಬಹುತೇಕ ಮಂಗಳಾ ಅಂಗಡಿಯ ಬೆಳಗಾವಿ ಜಗದೀಶ ಶೆಟ್ಟರ್ ಪಾಲಾದರೆ
ಉತ್ತರಕನ್ನಡ ಕ್ಷೇತ್ರದ ಹಾಲಿ ಅಭ್ಯರ್ಥಿ ಬದಲಿಸುವ ಸಾಧ್ಯತೆ ಇದ್ದರೆ ಇದೇ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿ ಘೋಷಣೆ ಮಾಡಬಹುದು ಎನ್ನಲಾಗಿದೆ ಅತೀ ಹೆಚ್ಚು ಸಂಖ್ಯೆಯಲ್ಲಿ ಮರಾಠರು ಹಾಗೂ ಕೊಂಕಣಿರಾಠ ಮತದಾರರನ್ನು ಹೊಂದಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಅಂಜಲಿ‌ ನಿಂಬಾಳಕರ್ ಪಂಚಗ್ಯಾರಂಟಿಯನ್ನು ಮುಂದಿಟ್ಟು ಬಂದಾಗ ಅನಂತಕುಮಾರ ಹೆಗಡೆ ಅಲ್ಲದೇ ಇದ್ದರೆ ಕಾರವಾರ ಕ್ಷೇತ್ರದ ಮಾಜಿ ಶಾಸಕಿ ಹಾಲಿ ಬಿಜೆಪಿ ರಾಜ್ಯ‌ಉಪಾಧ್ಯಕ್ಷೆ ರೂಪಾಲಿ ನಾಯಕ ಅಚ್ಚರಿಯ ಅಭ್ಯರ್ಥಿ ಆದರೂ ಆಗಬಹುದು ಎಂಬ ಮಾತು ಕೇಳಿಬರುತ್ತಿದೆ. ಏನೇ ಇದ್ದರೂ ಈ ಊಹಾ ಪೋಹಗಳಿಗೆ ಒಂದೆರಡು ದಿನಗಳಲ್ಲಿ ಪರಿಹಾರ ಸಿಗಬುದೆಂಬ ಮಾತು ಕ್ಷೇತ್ರದಾದ್ಯಂತ ಕೇಳಿಬರುತ್ತಿದೆ.