ಅಕ್ಷರ ರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.
೪೫. ನಮ್ಮನ್ನು ಪಾಲನ ಮಾಡುವವರು ಇಲ್ಲಿ ‘ವಿಶೇಷರೂಪ’ದಿಂದ ವಾಸಮಾಡುತ್ತಿದ್ದಾರೆಂದು ಆ ಭೂದೇವಿಯೇ ಯಾವುದನ್ನು ತನ್ನ ಮುಕುಟವಾಗಿಸಿಕೊಂಡು, ತನ್ನ ಶಿರೋಭಾಗದಲ್ಲಿ ಧರಿಸಿಕೊಂಡಿದ್ದಾಳೋ, ಆ ಸಜ್ಜನಗಡದ ಮಹತ್ವವನ್ನು ಎಷ್ಟೆಂದು ಹಾಡಿ ಹೊಗಳಲಿ?
(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಎರಡನೆಯ ಭಾಗ)
‘ಅಲ್ಲೊಂದಾದರೆ ಇಲ್ಲೊಂದು; ಎಲ್ಲಿ ನೋಡಿದರೂ ಒಂದಿದ್ದರೆ ಒಂದಿಲ್ಲ?’
ಹಾಗಾಗಿಯೇ ಕಾರ್ಯದ ಸರ್ವಾಂಗೀಣ ಉನ್ನತಿಗೆ ಬೇರೆ-ಬೇರೆಯ ತರದ ಜನರ ಆವಶ್ಯಕತೆ ಇದೆ. ಆದ್ದರಿಂದಲೇ ಸಮಾಜ, ಸಂಪ್ರದಾಯ, ಸಂಘ ಮೊದಲಾದವುಗಳ ಸ್ಥಾಪನಾಕಾರ್ಯ ಮಾಡಬೇಕಾಗುತ್ತದೆ. ಒಂದು ಧ್ಯೇಯವಿರುವ ಜನ ಕೂಡಿ ಒಂದೇ ಮನಸ್ಸಿನಿಂದ ನಮಗೆ ಉತ್ಕೃಷ್ಟ ರೀತಿಯಿಂದ ಕಾರ್ಯ ಹೇಗೆ ಮಾಡಿ ಮುಗಿಸಲಿಕ್ಕೆ ಬರಬಹುದು ಎಂಬ ಬಗ್ಗೆ ಒಮ್ಮನಸ್ಸಿನಿಂದ ವಿಚಾರ ಮಾಡಿ ನಿಸ್ವಾರ್ಥರೀತಿಯಿಂದ ಕಾಯಾವಾಚಾಮನಸಾ ಹೆಣಗಹತ್ತಿದರೆ ಸ್ವಲ್ವೇ ಕಾಲದಲ್ಲಿ ಕೈಗೆತ್ತಿಕೊಂಡ ಸುಂದರ ಕಾರ್ಯ ಕೈಗೂಡುತ್ತದೆ.
‘ಸಂಘೇ ಶಕ್ತಿಃ’ ಯಾಗಿರುವದರಿಂದ ‘ಸಂಗಚ್ಛಧ್ವಂ ಸಂವದಧ್ವಂ ಸಂವೋ ಮನಾಸಿ ಜಾನತಾಮ|’ ಹೀಗೆ ಶ್ರುತಿಮಾತೆಯ ಹೇಳಿಕೆ ಇದೆ. ಕಳೆದು ಹೋದ ದಶಷಂಚಕದ ಯಾವ ಒಬ್ಬ ಕುಲಕರ್ಣಿಯ ಹುಡುಗ ಅದೆಂತು ಇಡೀ ದೇಶಕ್ಕೇ ಜೀವ ತುಂಬಿದರೋ ಆ ಸಮರ್ಥರೇ ನಿಮ್ಮ ಬೆನ್ನ ಹಿಂದಿರುವಾಗ ನಿಮ್ಮ ಉತ್ಸಾಹ ಯಾವಾಗಲೂ ದುರ್ದಮವಾಗಿಯೇ ಇರಬೇಕು. ‘ಅರೇ ಮಾಡಿದರೆ ಮಾತ್ರ ಆಗುತ್ತದೆಯೋ| ಆದರೆ ಮೊದಲು ಮಾಡಬೇಕಲ್ಲಾ|’ ಈ ವಾಕ್ಯ ಆಗಾಗ ನಿಮ್ಮ ಕಿವಿಯ ಮೇಲೆ ಬಿದ್ದಾಗ ನಿಮ್ಮ ಆಕಾಶದೆತ್ತರದ ಉತ್ಸಾಹ ಪುನಃ ಪುನಃ ಹೆಚ್ಚುತ್ತಿಲ್ಲವೇ?
‘ಕರೀಲ ತರೀ ಕಾಯ ನೋಹೇ ಮಹಾರಾಜ’ ನಿಮ್ಮನ್ನು ಹುರಿದುಂಬಿಸಿ ಶ್ರೀಸಮರ್ಥ ಎಷ್ಟು ತೀವ್ರಗತಿಯಿಂದ ನಿಮ್ಮಿಂದಲೇ ಅದೆಷ್ಟು ದೊಡ್ಡ ದೊಡ್ಡ ಕಾರ್ಯಗಳನ್ನು ಮಾಡಿಸುತ್ತಿದ್ದಾರೆ. ‘ಶ್ರೀಸಮರ್ಥ ಎಂಬ ಹೆಸರು ಕಿವಿಗೆ ಬಿದ್ದದ್ದೇ ತಡ ಒಂದು ದಿವ್ಯಸ್ಫೂರ್ತಿ ಮನಸ್ಸಿನಲ್ಲಿ ಪ್ರವೇಶಿಸುತ್ತದೆ. ಆ ಸರ್ವಸಾಮರ್ಥ್ಯದ ತೇಜಸ್ವಿ ಮೂರ್ತಿ ಕಣ್ಣಮುಂದೆ ಪ್ರಕಾಶಿಸಹತ್ತುತ್ತದೆ. ನಿಜವಾಗಿಯೂ, ಆ ಮೂರ್ತಿ ಕಣ್ಮುಂದೆ ಬಂದಾಗ, ಯಾರಿಗಾದರೂ, ಆ ಧರ್ಮೋದ್ಧಾರಕರ ಮತ್ತು ದೇಶೋದ್ಧಾರಕರ ಪ್ರಚಂಡ ಶಕ್ತಿಯ ಸಾಕ್ಷಾತ್ಕಾರ ಒಂದು ಕ್ಷಣವಾದರೂ ಆಗದೇ ಇರುವದಿಲ್ಲ. ತಮ್ಮ ಆ ಅಲೌಕಿಕ ಸಾಮರ್ಥ್ಯದಿಂದ ಶ್ರೀಸಮರ್ಥರು ಈಗಲೂ ಆ ಸಜ್ಜನಗಡದಲ್ಲಿ ವಿಶೇಷರೂಪದಿಂದ ವಾಸ ಮಾಡುತ್ತಿದ್ದಾರೆ. ನಮ್ಮನ್ನು ಪಾಲನ ಮಾಡುವವರು ಇಲ್ಲಿ ‘ವಿಶೇಷರೂಪ’ದಿಂದ ವಾಸಮಾಡುತ್ತಿದ್ದಾರೆಂದು ಆ ಭೂದೇವಿಯೇ ಯಾವುದನ್ನು ತನ್ನ ಮುಕುಟವಾಗಿಸಿಕೊಂಡು, ತನ್ನ ಶಿರೋಭಾಗದಲ್ಲಿ ಧರಿಸಿಕೊಂಡಿದ್ದಾಳೋ, ಆ ಸಜ್ಜನಗಡದ ಮಹತ್ವ ಎಷ್ಟೆಂದು ಹಾಡಿ ಹೊಗಳಲಿ? ಇಲ್ಲಿ ನಾಲ್ಕೂಕಡೆ ದೃಷ್ಟಿ ತಿರುಗಿಸಿದಾಗ ಮತ್ತು ಆ ಎಲ್ಲ ಮನೋಹರ ಪರ್ವತ ಶ್ರೇಣಿ ಕಣ್ಣಿಗೆ ಬಿದ್ದೊಡನೆ, ಇವೆಲ್ಲ ಅದೆಷ್ಟು ಆದರದಿಂದ ತಮ್ಮ ತಮ್ಮ ಸ್ಥಾನಗಳಲ್ಲಿ ಸೇನೆಯ ಶಿಸ್ತಿನಂತೆ ನಿಂತು, ಶ್ರೀಸಜ್ಜನಗಡಕ್ಕೆ ನಮೃನಮನ ಮಾಡುತ್ತಿರುವಂತೆ ಕಾಣುತ್ತಿದೆ.
(ಈ ಪತ್ರದ ಮೂರನೆಯ ಭಾಗ ಮುಂದುವರಿಯುವದು)