ಪ ಪೂ ಶ್ರೀ ಶ್ರೀ ಭೀಮಾನಂದ ಸ್ವಾಮೀಜಿ , ಶೃದ್ಧಾನಂದ ಮಠ ಕುಷ್ಟಗಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

RELATED ARTICLES  ಆಸ್ಪತ್ರೆಯಲ್ಲಿ ಇಲ್ಲ ಸಿಬ್ಬಂದಿ : ಬಲಿಯಾಯ್ತು ಬಡ ಜೀವ, ಯಲ್ಲಾಪುರದಲ್ಲಿ ಘಟನೆ!

ಉಪಾಧಿವಂತ ಮಂಡಳಿಯ ಸದಸ್ಯ ವೇ ಗಣಪತಿ ಭಟ್ ಗಾಯತ್ರಿ ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು . ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .

RELATED ARTICLES  ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮದಿಂದ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಯಶ ಕಾಣಲಿ : ಶಿವಾನಂದ ಹೆಗಡೆ