‘ಎಲ್ಲದಕ್ಕೂ ಒಂದು ಕಾಲವಿದೆ’ ಎಂಬುದನ್ನು ಅರಿತಿರುವ ನಾವು ಕಲಿಕೆಯ ಕಾಲಕ್ಕಾಗಿ ಕಾಯುವುದೇ ಇಲ್ಲವಲ್ಲ ಇದೇನು? ಎಂದು ನಿಮ್ಮ ಮನಸ್ಸಿನಲ್ಲಿ ಗೊಂದಲ ಪ್ರಾರಂಭವಾಗಿರಬಹುದು. ಖಂಡಿತ ನಮ್ಮಲ್ಲಿಯ ಕಲಿಕೆಯ ಕಾಲದ ಯೋಜನೆ ಬಗ್ಗೆ ನಡೆಸಿದ ಕಿರು ಅಧ್ಯಯನದ ಹಾಗೂ ಪ್ರಾಯೋಗಿಕ ಉತ್ಪನ್ನದ ಬಗ್ಗೆ ಕೆಲವು ಅಂಶಗಳನ್ನು ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ.
ಕಲಿಯಲಿಕ್ಕೂ ಕಾಲವೇ ಉತ್ತರ ನೀಡುತ್ತೆ ಅಥವಾ ಅವಕಾಶ ಕೊಡುತ್ತದೆ ಎಂದರೂ ತಪ್ಪಲ್ಲ ಇಂದಿನ ಶಿಕ್ಷಣದಲ್ಲಿ ಕಲಿಕೆಯ ನಂತರ ಪರೀಕ್ಷೆಯಾದರೆ ಜೀವನದಲ್ಲಿ ಮೊದಲು ಪರೀಕ್ಷೆ ನಂತರ ಪರೀಕ್ಷೆಯಿಂದಲೇ ಪ್ರಾರಂಭವಾಗುವ ಕಲಿಕೆ ಮಕ್ಕಳು ಬುದ್ಧಿವಂತರಾಗಬೇಕು, ವಿದ್ಯಾವಂತರಾಗಬೇಕು ಎಂಬುದು ಪ್ರತಿಯೊಬ್ಬ ಪಾಲಕರ ಆಸೆಯಾ ಹೌದು ಮಗುವಿಗೆ ಕಲಿಸುವ ಶಿಕ್ಷಕರ ಗುರಿಯೂ ಹೌದು ಆದರೆ ಈ ಆಸೆ ಹಾಗೂ ಗುರಿ ಸಾಧನೆಯಲ್ಲಿ ಕಾಲವನ್ನು ಅಂದರೆ ಕಲಿಕೆಯ ಸಮಯವನ್ನು, ಮಗುವಿನ ವಯಸ್ಸನ್ನು, ಮಗುವಿನ ಆಸಕ್ತಿಯನ್ನು ನಾವು ಗೌಣವಾಗಿಸಿ ಬಿಟ್ಟಿದ್ದೇವೆ ಎಂಬುದು ಮಾತ್ರ ಕಟು ಸತ್ಯ.
2 ವಾರಗಳ ಶೈಶವ 2 ವರ್ಷಗಳ ಹಸುಳೆತನದ ನಂತರದಲ್ಲಿ ಅಂದರೆ 2 ವರ್ಷದಿಂದ 6 ವರ್ಷದವರೆಗೆ ಪೂರ್ವಬಾಲ್ಯ ಹಂತವನ್ನು ನಾವು ಗುರ್ತಿಸಬಹುದು ಆ ಕಾಲಘಟ್ಟದಲ್ಲಿ ಮಗುವಿನ ದೈಹಿಕ, ಮಾನಸಿಕ ಹಾಗೂ ವ್ಯಕ್ತಿತ್ವದ ಅಂಶಗಳನ್ನು ಇಂದಿನ ಶಿಕ್ಷಣದ ಸ್ಪರ್ಧಾ ಜಗತ್ತಿನಲ್ಲಿ ನಾವೆಷ್ಟು ಅಳವಡಿಸುತ್ತಿದ್ದೇವೆ? ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿಯೇ ಕಾಡುತ್ತಿದೆ. ಹೀಗೆಯೇ ಈ ವಿಷಯವನ್ನು ಅವಲೋಕಿಸಿದಾಗ ಈಗಿನ ನರ್ಸರಿ ಶಾಲೆಗಳು ಹಾಗೂ ಐ.ಏ.ಉ ತರಗತಿಗಳಲ್ಲಿ ಕಲಿಯುವ ಮಕ್ಕಳೇ ಪೂರ್ವ ಬಾಲ್ಯ ಹಂತದ ಮಕ್ಕಳು ಇದನ್ನ “ಕೂಟ ಪೂರ್ವಯುಗ” ಎಂಬುದಾಗಿಯೂ ಮನಃಶಾಸ್ತ್ರ ವಿವರಿಸುತ್ತದೆ. ಈ ಕಾಲದಲ್ಲಿ ಮಗು ದೈಹಿಕವಾಗಿ ಮಧ್ಯಮಗತಿಯಲ್ಲಿ ಬೆಳೆಯುತ್ತದಾದರೂ ಸ್ನಾಯುಗಳ ಬೆಳವಣಿಗೆ ಈ ಕಾಲಘಟ್ಟದಲ್ಲಿಯೇ ಹೆಚ್ಚು ಹೀಗಾಗಿ ಮಗುವಿಗೆ ಸ್ನಾಯುಗಳು ಚುರುಕುಗೊಳ್ಳುವ ಹಾಗೂ ಸೂಕ್ಷ್ಮ ದೈಹಿಕ ವಿಕಾಸದ ಚಟುವಟಿಕೆಗಳನ್ನು ಒದಗಿಸಬೇಕಷ್ಟೇ ಈ ಸಮಯದಲ್ಲಿ ಸೂಕ್ಷ್ಮ ಕಾರ್ಯಗಳನ್ನು ಮಗು ಮಾಡುವುದು ಸ್ವಲ್ಪ ಕಡಿಮೆ ಉ.ದಾ. ಬರವಣಿಗೆ ಲೇಖನಿ ಹಿಡಿಯುವುದು ಪೆನ್ಸಿಲ್ ಬಳಕೆ, ನಿಖರ ಅಕ್ಷರ ಬರವಣಿಗೆ ಅದು ಮಗುವಿಗೆ ಕಷ್ಟಕರ ಆದರೆ ಇಂದಿನ ದಿನದಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಬರವಣಿಗೆ ಕೌಶಲ್ಯ ಬೆಳೆಸುವ ಪ್ರಯತ್ನ ನಡೆಯುತ್ತಿರುವುದು ವಿಷಾಧಕರ. ಈ ಕೂಟಪೂರ್ವಯುಗದಲ್ಲಿ ಮಗುವಿನ ಸ್ಮರಣಶಕ್ತಿ ಅತ್ಯಂತ ಚುರುಕು ಮತ್ತು ಅತೀ ಹೆಚ್ಚಿನ ನೆನಪಿನ ಶಕ್ತಿಯನ್ನು ಹೊಂದಿರುತ್ತದೆ.
ಪೂರ್ವ ಬಾಲ್ಯದಲ್ಲಿ ಮಗುವಿನ ಕ್ರಿಯಾಶೀಲ ಪದಸಂಪತ್ತು ಗಮನಾರ್ಹವಾಗಿ ಹೆಚ್ಚುತ್ತದೆ. ಹೊಸ ಪದಗಳ ಕಲಿಕೆ ಹಿಂದೆ ಕಲಿತ ಪದಗಳ ಹೊಸ ಅರ್ಥದ ಅರಿವು ಒಳ್ಳೆಯ-ಕೆಟ್ಟ ಪದಗಳ ಉಪಯೋಗ, ಸಂಖ್ಯಾ ವಾಚಕಗಳ ಉಪಯೋಗ ಇವೆಲ್ಲವೂ ಈ ಹಂತದಲ್ಲಿ ಪ್ರಕಟವಾಗುತ್ತವೆ ಮಗು ತನ್ನೆದುರು ಕಾಣುವುದನ್ನು ಮಾತ್ರ ಹೆಚ್ಚಾಗಿ ಗುರ್ತಿಸಿ ನೆನಪಿನಲ್ಲಿ ಇಡುತ್ತದೆ ಹೀಗಾಗಿಯೇ ಈ ಅವಧಿಯಲ್ಲಿ ಚಿತ್ರ ಹಾಗೂ ಕಥಾ ಮಾದರಿಗಳ ಮೂಲಕ ಗೊಂಬೆಗಳ ಮೂಲಕವೇ ಕಲಿಸುವುದು ಒಳಿತು ಈ ಸಮಯದಲ್ಲಿ ಎಲ್ಲರೂ ನನ್ನ ರೀತಿಯಲ್ಲಿಯೇ ಎಂದು ಭಾವಿಸುತ್ತದೆ. ಚಿತ್ರ ಹಾಗೂ ಆಟದ ಸಾಮಗ್ರಿಗಳ ಜೊತೆಗೂ ಮಾತನಾಡುವ ಸಮಯ ಇದು ಸುಮಾರು 4 ವರ್ಷಗಳ ನಂತರದಲ್ಲಿ ಮಗು 6-8 ಸದರಗಳನ್ನೊಳಗೊಂಡ ವಾಕ್ಯಗಳನ್ನು ರಚಿಸಲು ಕಲಿಯುತ್ತದೆ. ಗುರ್ತಿಸುವ ಮೂಲಕ ಹಾಗೂ ನೋಡಿ ಕಲಿಯುವ ಮೂಲಕವೇ ಮಗುವಿನ ಕಲಿಕೆ ಸಾಗುತ್ತದೆ ಎಂಬುದನ್ನು ಇಲ್ಲಿ ಗುರ್ತಿಸಬೇಕು ಈ ಹಂತದಲ್ಲಿ ಮಗು ಅಹಂ ಕಲ್ಪನೆ ಹೊಂದಿವುದು ಮಗುವಿನ ಭಾವೋದ್ರಕ್ಕೆ ಕಾರಣ ಎಂಬುದನ್ನು ಪ್ರತಿಯೊಬ್ಬರೂ ಅರಿತಿರಬೇಕು ಈ ಸಮಯಗಳನ್ನು ಸರಿಯಾಗಿ ಗುರ್ತಿಸಿ ಕಲಿಸಬೇಕಾದ ವಿಷಯವನ್ನು ಮಗುವಿಗೆ ತಲುಪಿಸಬೇಕು.
ಬಾಲ್ಯ ಹಂತದಲ್ಲಿ ಮಗುವಿಗೆ ಮನೋವೈಜ್ಞಾನಿಕವಾಗಿ ಜ್ಞಾನೇಂದ್ರಯಗಳಿಗೆ ತರಬೇತಿ ನೀಡುವ ಅಂಶಗಳನ್ನು ಹಾಗೂ ನೈಸರ್ಗಿಕ ಚಟುವಟಿಕೆಗಳನ್ನು ಬೆಳೆಸಿಕೊಳ್ಳಲು ಅವಕಾಶವಿರುವಂತಹ ಅಂಶಗಳನ್ನು ಸೇರಿಸಬೇಕು ಅಂದರೆ ಸ್ಪರ್ಶ, ದೃಶ್ಯ, ಶ್ರವಣ, ರುಚಿ, ವಾಸನೆಗಳ ತರಬೇತಿ ಕೊಡುವ ಪಠ್ಯಕ್ರಮವನ್ನು ಈ ಹಂತದ ಮಕ್ಕಳಿಗೆ ಯೋಜಿಸುವುದೇ ಅಲ್ಲದೆ ಜ್ಞಾನೇಂದ್ರಿಯಗಳಿಗೆ ಅನುಭವವನ್ನೊಂಟುಮಾಡುವಂತಹ ಉಪಕರಣ ಒದಗಿಸಬೇಕು.
ಪೋಷಕರ ದೃಷ್ಠಿಯಲ್ಲಿ ಈ ಸಮಯ ಸಮಸ್ಯೆಯ ಕಾಲವಾಗಬಹುದು ಮಗುವಿನ ವಯಕ್ತಿಕತೆ ಪ್ರಕಟವಾಗುವ ಕಾಲ ಇದಾದದ್ದರಿಂದ ಈ ಕಾಲದಲ್ಲಿ ಶಿಕ್ಷಕರು ಹಾಗೂ ಪಾಲಕರೂ ಸೇರಿ ಮಗುವಿನ ಸಮರ್ಪಕ ಶಿಕ್ಷಣಕ್ಕೆ ಪ್ರಯತ್ನಿಸಬೇಕು ಅಷ್ಟೇ.