ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ‘ಇಂಡಿಯಾ ಟುಡೇ-ಆಕ್ಸಿಸ್’ ಸಮೀಕ್ಷೆ ಭವಿಷ್ಯ ನುಡಿದಿದೆ.
ಸಮೀಕ್ಷೆಯ ಪ್ರಕಾರ, ಹಿಮಾಲಯ ಪ್ರದೇಶದಲ್ಲಿ ಬಿಜೆಪಿ 43 ರಿಂದ 47 ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಜಯಗಳಿಸಳಿದೆ, ಕಾಂಗ್ರೆಸ್ ಹಿಮಾಚಲ ಪ್ರದೇಶಲ್ಲಿಯೂ ಕೂಡ ಅಧಿಕಾರವನ್ನು ಕಳೆದುಕೊಳ್ಳಲಿದೆ ಎಂದು ಸಮೀಕ್ಷೆ ಹೇಳಿದೆ,, ಸಮೀಕ್ಷೆಯ ಪ್ರಕಾರ 68 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ ಕೇವಲ 21 ರಿಂದ 25 ಸ್ಥಾನಗಳನ್ನು ಪಡೆಯಬಹುದು.
ಗುಜರಾತ್ ರಾಜಕೀಯವಾಗಿ ಮಹತ್ವಪೂರ್ಣವಾಗಿದ್ದು ಮುಂಬರುವ ಚುನಾವಣೆಯಲ್ಲಿ, ಬಿಜೆಪಿ 115-125 ಸ್ಥಾನಗಳನ್ನು ಗಳಿಸಲಿದೆ, ಕಾಂಗ್ರೆಸ್ 57-65 ರಷ್ಟು ಕ್ಷೇತ್ರಗಳನ್ನು ಗೆದ್ದು ತೃಪ್ತಿ ಪಡಬೇಕಾಗಿದೆ , ಸಮೀಕ್ಷೆಯಂತೆ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ನ ಹೀನಾಯ ಸೋಲು ಪಕ್ಷಕ್ಕೆ ಭಾರಿ ಹೊಡೆತವನ್ನು ನೀಡಲಿದೆ.
ಪ್ರಧಾನಿ ಮೋದಿಗೆ ಗುಜರಾತ್ ನಲ್ಲಿ ಪ್ರಾದೇಶಿಕ ಬೆಂಬಲ ಪ್ರಸ್ತುತಃ 66% ನಷ್ಟು ಹೆಚ್ಚಿದೆ, ಸುಮಾರು 74 ಪ್ರತಿಶತದಷ್ಟು ಜನರು ಮೋದಿ ಸರ್ಕಾರ ಉತ್ತಮ ಅಥವಾ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಭಾವಿಸುತ್ತಾರೆ..!
ಸಮೀಕ್ಷೆಯ ಪ್ರಕಾರ ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಅವರು 34% ರಷ್ಟು ಬೆಂಬಲದೊಂದಿಗೆ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದಾರೆ. ಕಾಂಗ್ರೆಸ್’ನ ಶಕ್ತಿಸಿನ್ ಗೋಹಿಲ್ ಅವರು ಕೇವಲ 19% ರಷ್ಟು ಜನಪ್ರಿಯತೆಯನ್ನು ಗಳಿಸಲು ಸಫಲರಾಗಿದ್ದಾರೆ.