Home Health ಜೀವ ಸಂಜೀವಿನಿ ಕಲ್ಲಂಗಡಿ ಬೀಜ! ನಿಮಗೆಷ್ಟು ಗೊತ್ತು ನೋಡಿ

ಜೀವ ಸಂಜೀವಿನಿ ಕಲ್ಲಂಗಡಿ ಬೀಜ! ನಿಮಗೆಷ್ಟು ಗೊತ್ತು ನೋಡಿ

ಕಲ್ಲಂಗಡಿ ಹಣ್ಣಿನ ಬೀಜದ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿ ಪಡುವಿರಿ!

ಹೃದಯವನ್ನು ರಕ್ಷಿಸುತ್ತದೆ

ಈ ಬೀಜಗಳಲ್ಲಿರುವ ಉತ್ತಮ ಪ್ರಮಾಣದ ಮೆಗ್ನೇಶಿಯಂ ಹೃದಯ ಸಾಮಾನ್ಯವಾಗಿ ಕಾರ್ಯನಿರ್ವಹಿಸಲು ನೆರವಾಗುತ್ತದೆ. ಅಲ್ಲದೇ ಹೃದಯದ ಒತ್ತಡ ಸಮತೋಲನದಲ್ಲಿರಲು ಹಾಗೂ ಜೀವರಾಸಾಯನಿಕ ಕ್ರಿಯೆ ಉತ್ತಮಗೊಳ್ಳಲು ನೆರವಾಗುತ್ತದೆ. ಇದು ಕಲ್ಲಂಗಡಿ ಬೀಜಗಳನ್ನು ಸೇವಿಸುವ ಅತ್ಯುತ್ತಮ ಪ್ರಯೋಜನವಾಗಿದೆ.

ವೃದ್ಧಾಪ್ಯವನ್ನು ತಡವಾಗಿಸುತ್ತದೆ.

ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ವೃದ್ಧಾಪ್ಯ ಆವರಿಸುವ ಗತಿಯನ್ನು ನಿಧಾನವಾಗಿಸುವ ಮೂಲಕ ವೃದ್ಧಾಪ್ಯವನ್ನು ತಡವಾಗಿಸುತ್ತದೆ. ಚರ್ಮದ ಸೆಳೆತ ಹೆಚ್ಚಿಸಿ ತಾರುಣ್ಯವನ್ನು ಕಾಪಾಡುತ್ತದೆ. ಇದು ಕಲ್ಲಂಗಡಿ ಬೀಜಗಳನ್ನು ಸೇವಿಸುವ ಅತ್ಯುತ್ತಮವಾದ ಇನ್ನೊಂದು ಪ್ರಯೋಜನವಾಗಿದೆ

ಮೊಡವೆಗಳನ್ನು ನಿವಾರಿಸುತ್ತದೆ.

ಮುಖದ ಮೇಲೆ ಇರುವ ಮೊಡವೆಗಳನ್ನು ನಿವಾರಿಸಲು ಈ ಬೀಜಗಳಿಂದ ಹಿಂಡಿ ತೆಗೆದ ಎಣ್ಣೆ ಉತ್ತಮವಾಗಿದೆ. ಅಷ್ಟೇ ಅಲ್ಲ, ಚರ್ಮದ ಸೂಕ್ಷ್ಮ ರಂಧ್ರದಲ್ಲಿ ಸಿಲುಕಿದ್ದ ಕೊಳೆ ಹಾಗೂ ಸತ್ತ ಜೀವಕೋಶಗಳನ್ನು ನಿವಾರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಈ ಎಣ್ಣೆ ಎಲ್ಲಾ ಬಗೆಯ ತ್ವಚೆಗಳಿಗೂ ಸುರಕ್ಷಿತವಾಗಿದೆ.

ಕೂದಲ ಬುಡವನ್ನು ದೃಢಪಡಿಸುತ್ತದೆ.

ಈ ಎಣ್ಣೆಯಲ್ಲಿರುವ ಉತ್ತಮ ಪ್ರಮಾಣದ ಪ್ರೋಟೀನುಗಳು ಹಾಗೂ ಅಮೈನೋ ಆಮ್ಲಗಳು ಕೂದಲಿನ ಬುಡವನ್ನು ದೃಢಗೊಳಿಸುತ್ತವೆ. ಈ ಬೀಜಗಳನ್ನು ಹುರಿದು ಪುಡಿಮಾಡಿ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಈ ಪುಡಿಯಲ್ಲಿರುವ ತಾಮ್ರ ಕೂದಲಿಗೆ ಬಣ್ಣ ನೀಡುವ ಮೆಲನಿನ್ ಎಂಬ ವರ್ಣದ್ರವ್ಯವನ್ನು ಹೆಚ್ಚಿಸಿ ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ.

ಘಾಸಿಗೊಂಡ ಕೂದಲನ್ನು ದುರಸ್ತಿಗೊಳಿಸುತ್ತದೆ ಈ ಬೀಜಗಳಲ್ಲಿರುವ ಅವಶ್ಯಕ ಕೊಬ್ಬಿನ ಆಮ್ಲಗಳು ಕೂದಲು ಘಾಸಿಗೊಳ್ಳುವುದನ್ನು ತಡೆಯುತ್ತದೆ ಹಾಗೂ ದುರಸ್ತಿಗೊಳ್ಳಲು ನೆರವಾಗುತ್ತವೆ.

ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

ಈ ಬೀಜಗಳಲ್ಲಿ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ವಿಟಮಿನ್ ಬಿ5 ಆಹಾರದ ಕಾರ್ಬೋಹೈಡ್ರೇಟುಗಳನ್ನು ಒಡೆದು ಶಕ್ತಿಯನ್ನು ಬಿಡುಗಡೆ ಮಾಡುತ್ತದೆ ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ

ಶರೀರದ ಬಾವುಗಳನ್ನು ಕಡಿಮೆ ಮಾಡುತ್ತದೆ

ಒಂದು ವೇಳೆ ಉರಿಯೂತದ ಕಾರಣ ಶರೀರದ ಯಾವುದಾದರೊಂದು ಭಾಗದಲ್ಲಿ ಬಾವು ಕಾಣಿಸಿಕೊಂಡರೆ ಒಂದು ಚಿಕ್ಕ ಚಮಚ ಒಣಗಿಸಿ ಕುಟ್ಟಿ ಮಾಡಿದ ಪುಡಿಯನ್ನು ಒಂದು ಚಿಕ್ಕ ಚಮಚ ಜೇನು ಹಾಗೂ ಮುಕ್ಕಾಲು ಕಪ್ ಬಿಸಿನೀರನ್ನು ಬೆರೆಸಿ ಮಿಶ್ರಣ ಮಾಡಿ ದಿನಕ್ಕೆರಡು ಬಾರಿ ಸೇವಿಸಿ. ಇದರಿಂದ ಬಾವು ಕಡಿಮೆಯಾಗುತ್ತದೆ.

ಪುರುಷರಲ್ಲಿ ಫಲವಂತಿಕೆ ಹೆಚ್ಚಿಸುತ್ತದೆ

ಈ ಬೀಜಗಳಲ್ಲಿರುವ ಲೈಕೋಪಿನ್ ಎಂಬ ಆಂಟಿ ಆಕ್ಸಿಡೆಂಟು ಪುರುಷರಲ್ಲಿ ನಂಪುಸಕತ್ವವನ್ನು ಕಡಿಮೆಗೊಳಿಸಿ ಫಲವಂತಿಕೆ ಹೆಚ್ಚಿಸುತ್ತದೆ