ನ.2 ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ಬಿಜೆಪಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಅತ್ಯಾಧುನಿಕ ಸೌಲಭ್ಯವುಳ್ಳ ಬಸ್ಸೊಂದನ್ನು ಸಿದ್ಧಪಡಿಸಲಾಗಿದೆ. ಇದರ ಬೆಲೆ ಸುಮಾರು 1 ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ.

ಏನೀನಿದೆ?

ಅತ್ಯಾಧುನಿಕ ಸೌಲಭ್ಯವುಳ್ಳ ಬಸ್‍ನಲ್ಲಿ ಮುಂಭಾಗ 12 ಮಂದಿ ನಿಂತುಕೊಂಡು ಭಾಷಣ ಮಾಡುವ ವ್ಯವಸ್ಥೆ ಮಾಡಲಾಗಿದೆ. ಮಲಗುವ ವ್ಯವಸ್ಥೆ, 10 ಜನ ಕುಳಿತು ಸಭೆ ನಡೆಸಬಹುದಾದಷ್ಟು ದೊಡ್ಡ ಹಾಲ್, ಸುಡುಬಿಸಿಲಿನಿಂದ ರಕ್ಷಣೆ ಪಡೆಯಲು ಅತ್ಯಾಧುನಿಕ ತಂತ್ರಜ್ಞಾನ, ಕಂಪ್ಯೂಟರ್, ಲ್ಯಾಪ್ ಟಾಪ್ ಬಳಸಲು ಕಛೇರಿ, ಶೌಚಾಲಯ, ಕಾಫಿ,ಟೀ ತಯಾರಿಕೆ, ಆಹಾರ ಬಿಸಿ ಮಾಡಲು ಮೈಕ್ರೋಒವನ್ ಮುಂತಾದ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದೆ.

RELATED ARTICLES  2018 ರಿಂದ ಗೂಗಲ್ ಕ್ರೋಮ್ ನಲ್ಲಿ ಜಾಹೀರಾತುಗಳ ಹಾವಳಿ ಇರುವುದಿಲ್ಲ!

ಮಾಜಿ ಉಪಮೇಯರ್ ಎಸ್.ಹರೀಶ್ ನೇತೃತ್ವದಲ್ಲಿ ಈಶ್ವರ್ ಕಂಪೆನಿಯ ಅಡಿಯಲ್ಲಿ ಬಸ್ ವಿನ್ಯಾಸಗೊಂಡಿದ್ದು, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇದು ಸಂಚರಿಸಲಿದೆ. ಇದಕ್ಕೆ ನುರಿತ ಚಾಲಕನನ್ನೂ ನೇಮಕ ಮಾಡಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಿಂದ ನವಕರ್ನಾಟಕ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿದ ಬಳಿಕ ಕುಣಿಗಲ್ ಮೂಲಕ ರಾಜ್ಯದ 224 ಕ್ಷೇತ್ರಗಳಲ್ಲಿ ಬಸ್ ಸಂಚರಿಸಲಿದೆ.

RELATED ARTICLES  ದೇಶಕ್ಕೇ ವಿನೂತನ ಈ ಮಲ್ಲೇಶ್ವರದ ಪ್ರಾಥಮಿಕ ಆರೋಗ್ಯ ಕೇಂದ್ರ.

ನವೆಂಬರ್ 2ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಅನಂತ್‍ಕುಮಾರ್, ಅನಂತ್‍ಕುಮಾರ್ ಹೆಗಡೆ, ನಿರ್ಮಲಾ ಸೀತಾರಾಮನ್, ರಮೇಶ್ ಜಿಗಜಿಣಗಿ ರಾಜ್ಯ ಉಸ್ತುವಾರಿ ಮುರಳೀಧರ್‍ರಾವ್, ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಸಹ ಉಸ್ತುವಾರಿ ಪಿಯೂಷ್ ಗೋಯಲ್, ಯಡಿಯೂರಪ್ಪ ಮುಂತಾದವರು ಈ ವಾಹನದಲ್ಲೇ ನಿಂತು ಭಾಷಣ ಮಾಡಲಿದ್ದಾರೆ.