ಎಸ್ಟೇ ಸುಳ್ಳಿನ ಜಾಲ ಹೆಣೆದರೂ ಸತ್ಯದ ದಾರಿಯಲ್ಲಿರುವವರಿಗೆ ಎಂದಿಗೂ ಜಯ ಇದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು.ಇವರು ಏರಿದ್ದು ರಾಜ ಸಿಂಹಾಸನ. ರಾಜೋಪಚಾರವನ್ನು ಪಡೆಯುತ್ತ ಆಧ್ಯಾತ್ಮ ಪ್ರಸಾರ ಮಾಡುವ ಶ್ರೀ ಪೀಠ ಇದು.ಆದಿ ಶಂಕರರಿಂದ ಸ್ಥಾಪಿತವಾದ ಈ ಪೀಠ ಅವಿಚ್ಚಿನ್ನ ಪೀಠವಾಗಿ ಇಂದಿಗೂ ಸಕಲ ಭಕ್ತ ಸಮೂಹದ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹಾನ್ ಪೀಠ. ಇಂತಹ ಪರಮ ಪವಿತ್ರ ಪೀಠದಲ್ಲಿ ವಿರಾಜಮಾನರಾಗುವವರು ಪೂಜಿಸುವುದು ಶ್ರೀ ರಾಮನನ್ನು. ಶ್ರೀ ರಾಮನಾದರೋ ಮಾನವ ಸ್ವರೂಪಿಯಾಗಿ ಗೋಚರಿಸಿದರೂ ಭುವಿಗಿಳಿದ ಭಗವಂತ.ಶ್ರೀ ರಾಮನನ್ನೇ ಪೂಜಿಸುತ್ತ ಆರಾಧಿಸುತ್ತ ಬಂದ ಪರಂಪರೆಯ ಈಗಿನ ಗುರುಗಳು ನಮ್ಮೆಲ್ಲರ ನೆಚ್ಚಿನ ಶ್ರೀ ಸಂಸ್ಥಾನ.ನಡೆಯಲ್ಲಿ ನುಡಿಯಲ್ಲಿ ಶ್ರೀ ರಾಮನನ್ನು ತುಂಬಿಕೊಂಡಿರುವ ಶ್ರೀಗಳದ್ದು ನಿಜವಾಗಿಯೂ ಶ್ರೀ ರಾಮನ ನಡೆ.ಪೂಜ್ಯರಿಗೆ ಬಂದಿರುವ ಸ್ಥಿತಿಯೂ ಆ ರಾಮನದ್ದೇ. ಆದರೂ ಎಲ್ಲ ಭಾರವನ್ನು ಶ್ರೀ ರಾಮನ ಪದದಲ್ಲಿಟ್ಟು ಆರಾಮಾಗಿದ್ದಾರೆ {ಆ ರಾಮನೇ ಆಗಿದ್ದಾರೆ} ಶ್ರೀಗಳು. ಪ್ರೇಮಲತಾ ದಿವಾಕರ್ ಅವರು ಹಾಗೂ ಅವರ ಹಿಂದಿರುವ ಕಾಣದ ಕೈಗಳು ಹೆಣೆದಿರುವ ಸುಳ್ಳಿನ ಹಗ್ಗ ಶ್ರೀಗಳನ್ನು ಬಂಧಿಸುವುದಿರಲಿ ಅವರ ಹತ್ತಿರಕ್ಕೂ ಸುಳಿಯಲಾಗದಂತೆ ಕಣ್ಮರೆಯಾಯಿತು.ಶ್ರೀಗಳು ದೇವರ ದೃಷ್ಟಿಯಲ್ಲಿಯೇ ಆಗಲಿ ಶಿಷ್ಯರ ದೃಷ್ಟಿಯಲ್ಲಿಯೇ ಆಗಲಿ ಇಂದಿಗೆ ಅಂತಲ್ಲ ಎಂದಿಗೂ ಕಳಂಕಿತರಲ್ಲ. ಅಕ್ಷರಷ: ಶ್ರೀಗಳು ದೈವೀ ಸಂಭೂತರು.ಆದ್ದರಿಂದಲೇ ಸಾವಿರಾರು ಸಂಖ್ಯೆಯ ಜನ ಶ್ರೀಗಳನ್ನು ಬೆಂಬಲಿಸುತ್ತಿದ್ದಾರೆ.ಶ್ರೀಗಳ ಕಾರುಣ್ಯದ ಕಣ ಕಣವನ್ನು ನೋಡಿದ ಜನರು ಶ್ರೀಗಳ ಮಾತೃತ್ವ ಅನುಭವಿಸಿದ ಮಕ್ಕಳಂತೆ ಇದ್ದಾರೆ. ಹೆಣ್ಣಿನ ಮೂಲಕ ಷಡ್ಯಂತ್ರದ ಜಾಲ ಹೆಣೆದ ಆ ಅಗೋಚರ ರಾಕ್ಷಸ ಕುಲಕ್ಕೆ ಹಿಡಿ ಶಾಪ ಹಾಕುವ ಎಷ್ಟೋ ಮಹಿಳಾ ಭಕ್ತರನ್ನು ನಾವು ಕಂಡಿದ್ದೇವೆ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ರಾಮಚಂದ್ರಾಪುರ ಮಠ ಮೂಲತ: ಹವ್ಯಕ ಸಮಾಜದ್ದೇ ಆದರೂ ಇವರೊಂದಿಗೆ ಮುಕ್ರಿ ,ನಾಡವರ,ಹಾಲಕ್ಕಿ,ಭಂಡಾರಿ ಹೀಗೇ 19 ಸಮಾಜದವರೂ ಇದು ತಮ್ಮ ಪೀಠವೆಂದು ಒಪ್ಪುತ್ತಿರುವುದೇ ಶ್ರೀಗಳ ಸಂಘಟನೆಗೆ ಹಿಡಿದ ಕೈಗನ್ನಡಿ.ಗೋಕರ್ಣದ ಇಂಗಸ್ಪರ್ಶದ ಅವಕಾಶ ಹರಿಜನ ಗಿರಿಜನ ಹಾಗೂ ಸರ್ವರಿಗೂ ಮುಕ್ತವಾಗಿದ್ದನ್ನ ಇಲ್ಲಿ ಸ್ಮರಿಸಲೇ ಬೇಕು.ಶ್ರೀಗಳ ಸಮಾಜ ಮುಖಿ ಕಾರ್ಯಗಳೇ ಶ್ರೀಗಳಿದ್ದಲ್ಲಿಗೆ ಎಲ್ಲರನ್ನು ಬರಮಾಡಿಕೊಂಡಿತ್ತು.2007ರ ವಿಶ್ವ ಗೋ ಸಮ್ಮೇಳನ ಗೋವಿನ ಕುರಿತಾದ ಜನದನಿಯ ಅನಾವರಣವಾಗಿ ಮೈದಳೆದಿತ್ತು.2010ರಲ್ಲಿ ಅನಾವರಣ ಗೊಂಡು ನಿರಂತರವಾಗಿ ನಡೆದುಬಂದ ರಾಮಾಯಣದ ಪುನರವತರಣ ಅದುವೇ “ರಾಮಕಥೆ”.ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶಾದ್ಯಂತ ಶ್ರೀ ಮಠದ ಹಾಗೂ ಸಂಸ್ಥಾನದ ಕೀರ್ತಿಯನ್ನು ಹೆಚ್ಚಿಸಿದ ಕಾರ್ಯಕ್ರಮ.ಜಾತಿ ಮಥ ಪಂಥಗಳನ್ನೂ ಮೀರಿದ ಮಾನವ ಪ್ರಜ್ಞೆಯ ಉನ್ನತೀಕರಣದ ಕಾರ್ಯಕ್ರಮವಾಗಿ ರಾಮಕಥೆ ಜನ ಮಾನಸದಲ್ಲಿ ಬೆಳೆದುನಿಂತಿತ್ತು.ಶ್ರೀಗಳ ಕೀರ್ತಿಯನ್ನು ನೋಡಿಯೂ ಸಹಿಸಲಾಗದ ಜನರು ಮಠದಮೇಲೆ ಪಿತೂರಿಯ ಕಾರ್ಯ ಮಾಡಿದರು.ಅದರ ರೂಪವೇ ಪ್ರೇಮಲತಾ ಪ್ರಕರಣ.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಶ್ರೀಗಳ ಮೇಲೆ ಅದೆಷ್ಟೇ ಆರೋಪಗಳನ್ನು ಮಾಡಿದರೂ ನ್ಯಾಯಾಲಯ ಸತ್ಯವನ್ನು ಜಗಕ್ಕೆ ಸಾರಿದೆ.ನ್ಯಾಯದೇವತೆ ತನ್ನ ಕಣ್ಣಿಗೆ ಕಟ್ಟಿದ್ದ ಬಟ್ಟೆ ಬಿಡಿಸಿ ಈ ಪ್ರಕರ್ಣದ ತೀರ್ಪು ನೀಡಿದ್ದಾಳೆ .ಸತ್ಯಮೇವ ಜಯತೆ ಎಂಬುದು ನಿಜವಾಗಿದ್ದನ್ನ ಎಲ್ಲರೂ ಕಂಡಿದ್ದೇವೆ. ಆದರೆ ಇಲ್ಲೊಂದು ಆಶ್ಚರ್ಯದ ಸಂಗತಿಯಿದೆ. ಅಷ್ಟೆಲ್ಲ ಆರೋಪಗಳು ಬಂದರೂ ಶ್ರೀ ಸಂಸ್ಥಾನದ ನುಡಿಯಲ್ಲಿ ಹಾಗೂ ಮುಖ ಛಾಯೆಯಲ್ಲಿ ಕಿಂಚಿತ್ತೂ ಬದಲಾವಣೆ ಇರಲಿಲ್ಲ .ಅದರ ಬದಲಾಗಿ ಸುಳ್ಳು ಆರೋಪ ಮಾಡಿದವರೇ ಬೆವೆತಿದ್ದರು. ಹಾಗಾದರೆ ಶ್ರೀಗಳ ಇಂತ ದೃಢ ಚಿತ್ತಕ್ಕೆ ಕಾರಣವೇನು..ಅದುವೇ ಸತ್ಯ..ಶ್ರೀಗಳು ನಡೆದ ದಾರಿ ಸತ್ಯ ಮಾರ್ಗ .ಹೀಗಾಗಿಯೇ ಅವರು ಸ್ವಲ್ಪವೂ ಅಳುಕುತ್ತಿಲ್ಲ.ಅಳುಕಿಲ್ಲದ ನಗು ಮೊಗದ ಶ್ರೀಗಳ ವದನಗಳೇ ಹೇಳುತ್ತಿವೆ ಮುಂಬರಲಿರುವ ಸಂತಸದ ದಿನಗಳನ್ನು.

ಗಣೇಶ ಜೋಶಿ