ರಾಷ್ಟ್ರೋತ್ಥಾನ ಪರಿಷತ್ ವತಿಯಿಂದ ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಆಯ್ಕೆಯಾದ ವಿದ್ಯಾರ್ಥಿ ಗಳಿಗೆ ತಪಸ್ ಯೋಜನೆಯಡಿ ಉಚಿತ ಪಿಯುಸಿ ಶಿಕ್ಷಣದೊಂದಿಗೆ ಐಐಟಿ ಪ್ರವೇಶಕ್ಕೆ ವಿಶೇಷ ತರಬೇತಿ ಹಾಗೂ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಪಿಯುಸಿ ಹಾಗೂ ಪ್ರತಿಷ್ಠಿತ ಎನ್ಇಇಟಿ, ಕೆವಿಪಿವೈ, ಸಿಇಟಿ, ಜೆಇಇ ತರಬೇತಿ ನೀಡಲಾಗುತ್ತದೆ.
ರಾಷ್ಟ್ರೋತ್ಥಾನ ಪರಿಷತ್: ಉಚಿತ ಶಿಕ್ಷಣ ಬಾಲಕರಿಗಾಗಿ ‘ತಪಸ್’ ಮತ್ತು ಬಾಲಕಿಯರಿಗಾಗಿ ‘ಸಾಧನೆ’ ಯೋಜನೆಯಡಿ ಹಾಸ್ಟೆಲ್ಸಹಿತ ಪಿಯುಸಿ ಶಿಕ್ಷಣ ಮತ್ತು ಪ್ರವೇಶಾತಿ ಪರೀಕ್ಷೆಗೆ ಅಣಿಗೊಳಿಸಲು ತರಬೇತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸಲು ಅರ್ಹತೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಕಳೆದ ಸಾಲಿನಲ್ಲಿ ನಡೆದ 9ನೇ ತರಗತಿಯಲ್ಲಿ ಶೇ. 80ಕ್ಕಿಂತ ಅಧಿಕ ಅಂಕ ಗಳಿಸಿರಬೇಕು. ಕುಟುಂಬದ ವಾರ್ಷಿಕ ಆದಾಯ 1.50 ಲಕ್ಷ ರೂ. ಮೀರಿರಬಾರದು. ಎಸ್ಸೆಸ್ಸೆಲ್ಲಿ ಪರೀಕ್ಷೆಯಲ್ಲಿ ಕನಿಷ್ಠ 90 ಕ್ಕಿಂತ ಹೆಚ್ಚು ಅಂಕಗಳಿಸಿರಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30.2017 ಲಿಖಿತ ಪರೀಕ್ಷೆ ಡಿಸೆಂಬರ್ 25 ರಂದು ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರ ಮತ್ತು ಕೆಲವು ನಗರಗಳಲ್ಲಿ ನಡೆಯಲಿದೆ. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ. ಆಯ್ಕೆಯಾದವರು ಪಿಯುಸಿ ಶಿಕ್ಷಣವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆಯಲು ಸಿದ್ಧರಿರಬೇಕು.
ಬಾಲಕರು (www.tapasedu.org), ಬಾಲಕಿಯರು (www.rpsaadhana.org) ಮೂಲಕ ಅರ್ಜಿ ಪಡೆದು, ಭರ್ತಿ ಮಾಡಿ ಸಂಯೋಜಕರು, ತಪಸ್ ಪ್ರಕಲ್ಪ/ ಸಾಧನಾ ಪ್ರಕಲ್ಪ, ರಾಷ್ಟ್ರೋತ್ಥಾನ ಪರಿಷತ್, ಕೇಶವಶಿಲ್ಪ, ಕೆಂಪೇಗೌಡನಗರ, ಬೆಂಗಳೂರು-19 ಇಲ್ಲಿಗೆ ಸಲ್ಲಿಸಬೇಕು. ವಿವರಕ್ಕೆ ದೂ: 080- 26612730, 94812 01144 ಸಂಪರ್ಕಿಸಿ.