ದಾಂಡೇಲಿ: ಪ್ರಯಾಣಿಕರ ರಿಕ್ಷಾದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸೀಸಂ ಕಟ್ಟಿಗೆಯನ್ನು ರಿಕ್ಷಾ ಸಹಿತ ವಶಪಡಿಸಿಕೊಳ್ಳುವ ಮೂಲಕ ಅರಣ್ಯ ಇಲಾಖೆಯವರು ಇಬ್ಬರು ಆರೋಪಿಗಳನ್ನು ಬಂದಿಸಿದ್ದಾರೆ.
ಜನತಾ ಕಾಲೋನಿಯ ಆನಂದ ಮಹಾರಾಜ ಮೇದಾರ ಹಾಗೂ ರವೀಂದ್ರ ಸಿದ್ದಪ್ಪ ಮೇದಾರ ಎಂಬವರೇ ಬಂದಿತ ಆರೋಪಿಗಳಾಗಿದ್ದು, ಸಂದೀಪ ಮತ್ತು ಪರಶುರಾಮ ಎಂಬ ಇರ್ವರು ತಲೆ ಮರೆಸಿಕೊಂಡಿದ್ದಾರೆಂದು ಅರಣ್ಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸಿ.ಕೆ. ಗಾರವಾಡೆ, ವಲಯ ಅರಣ್ಯಧಿಕಾರಿ ವಿಜಯಕುಮಾರ ಗಿರಿತಮಣ್ಣನವರ ನೇತೃತ್ವದಲ್ಲಿ ಉಪ ವಲಯ ಅರಣ್ಯಧಿಕಾರಿ ಎ.ಎಸ್. ಬೈಲಾ, ಶಾಂತಾರಾಮ ಕೆಂದೂಳ್ಕರ, ಶ್ರೀಶೈಲ ಕೆಂಪೇಗೌಡ್ರ, ವಿನಾಯಕ ಕೊಡಾಳ್ಕರ ಮುಂತಾವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.