ಸ್ನೇಹವೆಂದರೆ ಸ್ನೇಹ
ಸರಿಸಾಟಿ ಮತ್ತೊಂದಿಲ್ಲ
ಅದು ನಮ್ಮದೇ ಮನಸ್ಸಿನ ಕಿಂಡಿ
ವ್ಯಕ್ತಿತ್ವದ ಕನ್ನಡಿ
ಭಾವಗಳ ಹೂರಣ
ಹಿಡಿದಿಟ್ಟ ಪದಗಳ ಪುಂಜ

ಸ್ನೇಹವೆಂದರೆ ಅದು ಸ್ನೇಹ
ಬಾಗಿಲಿಗೆ ಭದ್ರವಾಗಿ ಹಾಕಿದ ಕೊಂಡಿ
ಬೆಳಗುವ ದೀಪದ ಮುನ್ನುಡಿ
ಅನ್ನಕ್ಕೆ ಹಾಕಿದ ಸಾರು
ನೆತ್ತಿಗೇರಿದಾಗ ಕುಡಿದ ನೀರು

RELATED ARTICLES  ಮೂರನೇ ವರ್ಗಕ್ಕೆ ಸೇರದ ಹೆಣ್ಣು

ಸ್ನೇಹವೆಂದರೆ ಅದು ಸ್ನೇಹ
ಎಡವುವಾಗ ಮಾಡಿದ ಸಮತೋಲನ
ತಪ್ಪಿದಾಗ ಆದ ಮನವರಿಕೆ
ಜೀವನಕ್ಕೆ ಬೇಕಾದ ತಿಳುವಳಿಕೆ
ಬದುಕಲು ಆಗುವ ಸ್ಪೂರ್ತಿ
ಮನಕ್ಕೆ ಮುದ ನೀಡುವ ನೆಮ್ಮದಿ

RELATED ARTICLES  ಕುಮಾರಿ ನಾಗಶ್ರೀ ಉದಯ ಭಟ್ಟ ಕಿಬ್ಬಳ್ಳಿ ರಾಜ್ಯಮಟ್ಟಕ್ಕೆ ಆಯ್ಕೆ

ಸ್ನೇಹವೆಂದರೆ ಅದು ಸ್ನೇಹ
ಪ್ರತಿ ದಿನದ ಸೂರ್ಯೋದಯ
ಮುಂಜಾನೆಯ ಇಬ್ಬನಿ
ಮುಸ್ಸಂಜೆಯ ತಂಗಾಳಿ
ನಿನ್ನೊಳಗೆ ಒಂದಾದ ಉಸಿರು
ಆ ಉಸಿರಲ್ಲಿ ಇರುವ ನಾನು

ಬಸವರಾಜ ಕಾಸೆ