ಕುಮಟಾ :ಇಂದು ಸರಕಾರ ಆಚರಿಸಲು ನಿರ್ದೇಶಿಸಿದ್ದ ಟಿಪ್ಪು ಜಯಂತಿಗೆ ಕುಮಟಾದಲ್ಲಿ ವಿರೋಧ ವ್ಯಕ್ತವಾಗಿದೆ. ಹಿಂದೂ ಸಂಘಟನೆ ಮತ್ತು ಬಿಜೆಪಿ ಕಾರ್ಯಕರ್ತರಿಂದ ಟಿಪ್ಪು ಜಯಂತಿಗೆ ಪ್ರಭಲ ವಿರೋದ ಮೊದಲಿನಿಂದಲೂ ಇದ್ದು ಇಂದು ಈ ವಿರೋಧ ಸ್ಪೋಟಗೊಂಡಂತೆ ಭಾಸವಾಗಿದೆ.
ಇಂದು ಬೆಳಿಗ್ಗೆ ಕುಮಟಾದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರು ಟಿಪ್ಪು ಜಯಂತಿ ಗೆ ವಿರೋಧಿಸಿ ಕುಮಟಾದ ಗಿಬ್ ಸರ್ಕಲ್ ನಿಂದ ತಶೀಲ್ದಾರ್ ಕಚೇರಿವರೆಗೆ ರ್ಯಾಲಿ ನಡೆಸಿದರು. ಕಾಂಗ್ರೇಸ್ ಸರಕಾರದ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಟಿಪ್ಪು ವಿರುದ್ಧ ಹರಿ ಹಾಯ್ದರು.
ಟಿಪ್ಪು ಹೆಣ್ಣುಬಾಕ, ಮತಾಂಧ ಟಿಪ್ಪು ಆಚರಣೆ ಸರಿಯಲ್ಲ, ಇಸ್ಲಾಂಧರ್ಮಕ್ಕೆ ಜನರನ್ನು ಮತಾಂತರಿಸಿದ ಟಿಪ್ಪು ಯಾವ ಆದರ್ಶ ಎಂಬಿತ್ಯಾದಿ ಫಲಕಗಳನ್ನು ಹಿಡಿದ ಕಾರ್ಯಕರ್ತರು ಘೋಷಣೆ ಕೂಗಿದರು.
ಪೊಲೀಸರು ರ್ಯಾಲಿ ತಡೆದು ಪ್ರಮುಖರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಸೂರಜ ನಾಯ್ಕ ಸೋನಿ, ಡಾ ಜಿ.ಜಿ ಹೆಗಡೆ. ನಾಗರಾಜ ನಾಯಕ, ವಿಶ್ವ ಹಿಂದೂ ಪರಿಷತ್ ಪ್ರಮುಖರು, ಹಿಂದೂ ಜಾಗರಾಣಾ ವೇದಿಕೆಯ ಭಾಸ್ಕರ ನಾಯ್ಕ ಇನ್ನಿತರರು ಇದ್ದರು.