ಬೆಂಗಳೂರು : ಬಿಜೆಪಿ ಪರಿವರ್ತನಾ ಯಾತ್ರೆ ವೇಳೆ ಶ್ರೀರಾಮುಲು ವೀರಾವೇಶದ ಭಾಷಣ ಮಾಡುತ್ತಾ, ಯಡವಟ್ಟು ಮಾಡಿಕೊಂಡಿದ್ದಾರೆ. ಏನೋ ಹೇಳಲು ಹೋಗಿ ಇನ್ನೇನೋ ಹೇಳಿ ಸಂಸದ ಶ್ರೀರಾಮಲು ಮುಜುಗರಕ್ಕೊಳಗಾಗಿದ್ದಾರೆ.

‘ಮೊನ್ನೆ ಮೊನ್ನೆ ಶೋಭಾ ಕರಂದ್ಲಾಜೆ , ಬಿಎಸ್​ವೈ, ಡಿವಿಎಸ್ ಹಿಂದೂ ಕಾರ್ಯಕರ್ತರನ್ನು ಹತ್ಯೆ ಮಾಡುವಂತ ಕೆಲಸ ಮಾಡಿದ್ದರು. ಇದನ್ನು ನೀವೆಲ್ಲರೂ ನೋಡಿದ್ದೀರಿ ಎಂದು ಭಾಷಣದ ವೇಳೆ ಸಂಸದ ಶ್ರೀರಾಮುಲು ಯಡವಟ್ಟು ಹೇಳಿಕೆ ನೀಡಿದ್ದಾರೆ.

RELATED ARTICLES  ಎರಡನೇ ಪಿಯು ತರಗತಿಗಳು ಇಂದಿನಿಂದ ಆರಂಭ.

ಶ್ರೀರಾಮುಲು ಮಾತು ಕೇಳಿದ ತಕ್ಷಣ ವೇದಿಕೆಯಲ್ಲಿದ್ದ ಬಿಜೆಪಿ ನಾಯಕರು ಕಂಗಾಲಾಗಿದ್ದಾರೆ. ಒಟ್ಟಿನಲ್ಲಿ ಶ್ರೀರಾಮುಲು ಏನೋ ಹೇಳಲು ಹೋಗಿ ಇನ್ನೇನೋ ಆಗಿ ಬಿಜೆಪಿಗೆ ಮುಜುಗರವಾಗುವಂತೆ ಮಾಡಿದ್ದಾರೆ.

RELATED ARTICLES  ಮಂಗಲವಾಯಿತು ಸಪರ್ಯಾ-ಗೋಪಾಷ್ಟಮೀ ಮಹೋತ್ಸವ.