ನಮ್ಮ ನಿತ್ಯ ಜೀವನದಲ್ಲಿ ಕೆಲವೊಂದು ಸಮಸ್ಯೆಗಳಿಗೆ (ಕೆಲವೊಮ್ಮೆ ದುಬಾರಿ ಹಣಕೊಟ್ಟು ಕೂಡಾ) ಸಂತೃಪ್ತಿಯಾಗುವಂತಹ ಪರಿಹಾರ ಸಿಗದ ಅದೆಷ್ಟೋ ಉದಾಹರಣೆಗಳಿರುತ್ತವೆ. ಅಂತವುಗಳಲ್ಲಿ ಕೆಲವನ್ನು ಈ ರೀತಿಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಹೋಗಲಾಡಿಸ ಬಹುದಾದ ಮಾಹಿತಿಗಳು (ಟಿಪ್ಸ್) ಓದುಗರಿಗಾಗಿ ಇಲ್ಲಿ ಕೊಡಲಾಗಿದೆ.

life hack
ವಾಸನೆ ಭರಿತ ಶೂ:
ನಿತ್ಯ ಉಪಯೋಗಿಸುವ ಟಿ ಬ್ಯಾಗ್ ಗಳನ್ನು ಶೂ ಒಳಗೆ ಹಾಕಿ ಸ್ವಲ್ಪ ಕಾಲ ಇಡಿ. ಶೂ ಒದ್ದೆಯಾಗಿದ್ದರೆ ಅಕ್ಕಿ ಹಾಗೂ ಅಡುಗೆ ಸೋಡಾ ಹುಡಿಯನ್ನು ಮಿಕ್ಸ್ ಮಾಡಿ ಕೆಲವು ಕಾಲ ಇಡುವುದರಿಂದ ಶೂ ದುರ್ಗಂಧವನ್ನು ಹೋಗಲಾಡಿಸಬಹುದು.

ಹುಲುಸಾದ ಗುಲಾಬಿ ಹೂವುಗಳಿಗಾಗಿ:
ಮನೆಯಂಗಳದ ಸೌದರ್ಯ ಹೆಚ್ಚಿಸಲು ಗುಲಾಬಿ ಗಿಡಗಳನ್ನು ನೆಡುವ ಮೊದಲು ಒಂದು ಉತ್ತಮವಾದ ಬಟಾಟೆ ಗುಲಾಬಿ ಗಿಡದ ದಂಟನ್ನು ಚುಚ್ಚಿ ನಂತರ ಬಟಾಟೆ ಸಹಿತ ನೆಲದಲ್ಲಿ ಹುದುಗಿಸಿ ನೆಡಬೇಕು. ಬಟಾಟೆಯು ಗುಲಾಬಿ ಗಿಡ ಹುಲುಸಾಗಿ ಬೆಳೆಯಲು ಹಾಗೂ ಹೆಚ್ಚು ಹೂ ಗಳನ್ನು ಬಿಡಲು ಬೇಕಾದ ತೇವಾಂಶ ಹಾಗೂ ಪೌಷ್ಟಿಕಾಂಶವನ್ನು ನೀಡುತ್ತದೆ.

RELATED ARTICLES  ಅಸ್ತಮಾ ರೋಗವನ್ನು ನಿವಾರಿಸುವಂತಹ ಸರಳ ಯೋಗಾಸನಗಳು.!!

ಸಣ್ಣ ಸಣ್ಣ ವಸ್ತುಗಳನ್ನು ಹುಡುಕುವುದು:
ಮನೆಯೊಳಗೆ ಕಳೆದು ಹೋದ ಅತೀ ಸಣ್ಣ ವಸ್ತುಗಳನ್ನು ಹುಡುಕಲು ಹರಸಾಹಸ ಪಡುತ್ತೇವೆ. ಕೆಲವೊಮ್ಮೆ ಹಿಡಿಸೂಡಿಯನ್ನೂ ಬಳಸುತ್ತೇವೆ. ಇದಕ್ಕಿಂತಲೂ ಉತ್ತಮ್ ವಿಧಾನವೆಂದರೆ, ವ್ಯಾಕ್ಯೂಮ್ ಕ್ಲೀನರ್ ನ ಪೈಪ್ ನ ಮುಂಬಾಗದಲ್ಲಿ ತೆಳುವಾದ ಬಟ್ಟೆ ಸುತ್ತಿ ಕ್ಲೀನ್ ಮಾಡುವುದರಿಂದ ಸುಲಭವಾಗಿ ಕಳೆದು ಹೋದ ವಸ್ತುವನ್ನು ಪಡೆಯಬಹುದು.

RELATED ARTICLES  ನಿಮ್ಮ ತುಟಿಗಳು ಒಡೆದಿವೆಯೇ? ಮತ್ತೆ ಮೊದಲಿನಂತೆ ಮಾಡಲು ಈ ರೀತಿ ಆರೈಕೆ ಮಾಡಿ.

ಟಾಯ್ಲೆಟ್ ಕ್ಲೀನ್:
ಬಹುದಿನಗಳಿಂದ ತೊಳೆಯದೆ ಕಲೆಗಟ್ಟಿ ಹೋಗಿರುವ ಟಾಯ್ಲೆಟ್ ಕಾಂಬೋಡ್ ಮೇಲೆ ಕೋಕೊ ಕೋಲ ಸುರಿದು ಕೆಲವು ಹೊತ್ತು ಬಿಟ್ಟು ಸ್ವಚ್ಚ ಮಾಡಿ. ಇದು ಬಹಳ ಪರಿಣಾಮಕಾರಿಯಾಗಿದೆ.

ಬಾಯಿ ದುರ್ಗಂಧ:
ಆತುರದಲ್ಲಿರುವ ಕಾರಣ ಅಥವ ಟೂತ್ ಪೇಸ್ಟ್ ಮುಗಿದಿರುವ ಕಾರಣ ಬ್ರೆಶ್ ಮಾಡದೆ ಇದ್ದರೆ ಬಾಯಿ ದುರ್ಗಂಧ ಬೀರುತ್ತದೆ. ಅಂತಹ ಸಮಯದಲ್ಲಿ ಒಂದು Apple ಜಗಿದು ತಿಇನಿ ಅಥವ ದಾಲ್ಚಿನಿ (Cinnamon sticks) ಜಗಿಯುವುದರಿಂದ ದುರ್ವಾಸನೆ ದೂರವಾಗುತ್ತದೆ.