Home Health ಅಸ್ತಮಾ ರೋಗವನ್ನು ನಿವಾರಿಸುವಂತಹ ಸರಳ ಯೋಗಾಸನಗಳು.!!

ಅಸ್ತಮಾ ರೋಗವನ್ನು ನಿವಾರಿಸುವಂತಹ ಸರಳ ಯೋಗಾಸನಗಳು.!!

 ಮಳೆಗಾಲ, ಚಳಿಗಾಲ ಸಮೀಪಿಸುತ್ತಿದ್ದಂತೆ ಅಸ್ತಮಾ ಖಾಯಿಲೆ ಉಲ್ಬಣಗೊಳ್ಳುವ ಸಂಭವತೆ ಹೆಚ್ಚು. ಧೂಳು, ಗಾಳಿ, ವಾತಾವರಣದಲ್ಲಾಗುವ ಬದಲಾವಣೆಗಳಿಂದಾಗಿ ಶೀತ, ನೆಗಡಿ, ಕಫಕಟ್ಟುವುದು ಇಂತಹ ಸಮಸ್ಯೆಗಳು ಕಾಡುತ್ತವೆ. ಇದು ನಿಧಾನವಾಗಿ ಅಸ್ತಮವಾಗಿ ಪರಿವರ್ತನೆಗೊಳ್ಳುತ್ತದೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಇದನ್ನು ನಿವಾರಿಸಲು ಪ್ರಕೃತಿಚಿಕಿತ್ಸೆಗಳು ಬಹಳ ಸಹಾಯಮಾಡುತ್ತದೆ.

 ಅಸ್ತಮಾ ಇರುವವರಿಗೆ ಸರಿಯಾಗಿ ಉಸಿರಾಡಲು ಕಷ್ಟವಾಗುತ್ತದೆ ಮತ್ತು ಕೆಲವೊಂದು ಸಂದರ್ಭದಲ್ಲಿ ಇದರಿಂದ ತುಂಬಾ ಅಪಾಯ ಎದುರಿಸಬೇಕಾಗುತ್ತದೆ. ಆದರೆ ಅಸ್ತಮಾವನ್ನು ಯೋಗಾಸನಗಳ ಮೂಲಕ ಪರಿಹರಿಸಬಹುದು ಎಂದು ಅಧ್ಯಯನಗಳು ಹೇಳಿವೆ. ಹೆಚ್ಚಿನ ಅಸ್ತಮಾ ರೋಗಿಗಳು ಇನ್ ಹೇಲರ್ ಉಪಯೋಗಿಸುತ್ತಾರೆ. ಆದರೆ ಅಸ್ತಮಾ ರೋಗವನ್ನು ಯೋಗಾಸನಗಳ ಮೂಲಕ ಪರಿಹಾರ ಪಡೆಯಬಹುದು. ಯೋಗದ ಕೆಲವೊಂದು ಆಸನಗಳಿಂದ ಅಸ್ತಮಾವನ್ನು ಹೇಗೆ ನಿವಾರಿಸಬಹುದು  ಹಾಗಾದರೆ ಬನ್ನಿ ತಿಳಿದುಕೊಳ್ಳೋಣ….

ಪ್ರಾಣಾಯಾಮ:

ಇದು ತುಂಬಾ ಸರಳ ಆಸನವಾಗಿದೆ. ಎರಡು ಕಾಲುಗಳನ್ನು ಮಡಚಿಕೊಂಡು ಕುಳಿತುಕೊಳ್ಳಿ. ತಲೆ, ಕುತ್ತಿಗೆ ಮತ್ತು ಬೆನ್ನು ತುಂಬಾ ನೇರವಾಗಿರಲಿ. ಕಣ್ಣುಗಳನ್ನು ಮುಚ್ಚಿಕೊಂಡು ಉಸಿರಾಟದ ಕಡೆ ಗಮನಹರಿಸಿ. ಹೊಟ್ಟೆಯನ್ನು ಬಳಸಿಕೊಂಡು ಸತತವಾಗಿ ಉಸಿರಾಡಿ. 2-3 ನಿಮಿಷ ಹೀಗೆ ಮಾಡಿ ಬಳಿಕ ವಿಶ್ರಾಂತಿ ಪಡೆಯಿರಿ. ಇದನ್ನೇ ಪುನಾರವರ್ತಿಸಿ…. 

ಶವಾಸನ:

ನೆಲದ ಮೇಲೆ ಬೆನ್ನು ಬಳಸಿ ನೇರವಾಗಿ ಮಲಗಿ, ಕೈಗಳು ನೇರವಾಗಿರಲಿ. ಅಂಗೈ ನೆಲವನ್ನು ಮುಟ್ಟಲಿ. ಪಾದಗಳು ಆಕಾಶವನ್ನು ನೋಡುತ್ತಿರಲಿ. ದೇಹವನ್ನು ಹಗುರವಾಗಿಸಿ ಉಸಿರಾಟದ ಕಡೆ ಗಮನಹರಿಸಿ. ನಿಮ್ಮ ಕಡೆ ಗಮನ ಕೇಂದ್ರೀಕರಿಸಿ ಮತ್ತು ದೇಹದ ಎಲ್ಲಾ ಭಾಗಗಳು ಆರಾಮವಾಗಿರಲಿ. 5-10 ನಿಮಿಷ ಕಾಲ ಈ ಆಸನವನ್ನು ಮಾಡಿ. 

ಪತಂಗ ಆಸನ:

ಪಾದಗಳು ಜತೆಯಾಗಿ ಇರುವಂತೆ ಮೊಣಕಾಲುಗಳು ಎದುರಿಗೆ ಇರುವಂತೆ ಕುಳಿತುಕೊಳ್ಳಿ. ಇದು ಪತಂಗದ ರೆಕ್ಕೆಯಂತಿರಲಿ. ಹಿಂಗಾಲುಗಳನ್ನು ಕೈಯಿಂದ ಹಿಡಿದುಕೊಂಡು ಪಾದಗಳನ್ನು ಸೊಂಟದ ಕಡೆ ತನ್ನಿ. ಉಸಿರಾಟದ ಕಡೆ ಗಮನಹರಿಸಿ ದೇಹವನ್ನು ಮುಂದಕ್ಕೆ ಬಾಗಿಸಿ. ಇದೇ ಭಂಗಿಯಲ್ಲಿ ಹತ್ತರ ತನಕ ಎಣಿಕೆ ಮಾಡಿ.

ಸೇತುವೆ ಆಸನ :

ಬೆನ್ನನ್ನು ನೆಲಕ್ಕೆ ಮಾಡಿಕೊಂಡು ನೇರವಾಗಿ ಮಲಗಿ ಕೈಗಳು ದೇಹಕ್ಕೆ ಅಂಟಿಕೊಂಡಿರಲಿ. ಈಗ ಕಾಲುಗಳನ್ನು ಬಗ್ಗಿಸಿ ಪೃಷ್ಠದ ಹತ್ತಿರಕ್ಕೆ ತನ್ನಿ. ಪಾದಗಳು ಮೊಣಕಾಲಿನ ಅಡಿಯಲ್ಲಿರುತ್ತದೆ. ಬೆನ್ನಿನ ಕೆಲ ಭಾಗದೊಂದಿಗೆ ಪೃಷ್ಠವನ್ನು ಮೇಲಕ್ಕೆ ಎತ್ತಿ. ಕೈಗಳು ನೇರವಾಗಿರಲಿ ಮತ್ತು ಎದೆಯು ಅಗಲವಾಗಬೇಕು. 30 ಸೆಕೆಂಡಿನಿಂದ 1 ನಿಮಿಷ ತನಕ ಹಾಗೆ ಇರಲಿ. ಉಸಿರಾಟದ ಕಡೆ ಗಮನಹರಿಸಿ. ಮೊದಲಿನ ಸ್ಥಿತಿಗೆ ನಿಧಾನವಾಗಿ ಬನ್ನಿ. ಪೃಷ್ಠ ಮತ್ತು ಬೆನ್ನಿನ ಕಡೆ ಗಮನಹರಿಸಿ….