ಭಟ್ಕಳ: ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜ ಬಾಂಧವರಿಗಾಗಿ ಕೊಂಕಣಿ ಖಾರ್ವಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನದ ಉದ್ಘಾಟನಾ ಕಾರ್ಯಕ್ರಮವು ನವೆಂಬರ್ 21 ಮಂಗಳವಾರದಂದು ಕುಂದಾಪುರದ ತ್ರಾಸಿ ಖಾರ್ವಿ ಜಂಕ್ಷನನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆಂದು ಭಟ್ಕಳ ಕೊಂಕಣಿ ಖಾರ್ವಿ ಸಮಾಜದ ಹಿರಿಯ ಮುಖಂಡ ವಸಂತ ಖಾರ್ವಿ ಖಾಸಗಿ ಹೋಟೆಲ್‍ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

“1958ರಲ್ಲಿ ಖಾರ್ವಿ ಸಮಾಜದ ಪ್ರಮುಖರಾದ ಕುಂದಾಪುರದ ಕನ್ಯಾನ ಕೋಡಿಯ ದಿ. ನರಸಿಂಹ ಆರ್ಕಾಟಿಯವರು ಸಂಘವನ್ನು ಸ್ಥಾಪಿಸಿದ್ದು, ಅಂದಿನಿಂದ 2011ರವೆಗೆ ಸುಮಾರು 53 ವರ್ಷಗಳ ಕಾಳ ಸೇವೆ ಸಲ್ಲಿಸುತ್ತಾ ಬಂದಿದೆ. ಮೂಲದಲ್ಲಿ ನಮ್ಮ ಸಮಾಜದ ಸಂಖ್ಯೆ ಕಡಿಮೆಯಿದ್ದು, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿದೆ ಹಿಂದುಳಿದ ಸಮಾಜವಾಗಿದೆ. 2011ರ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ಟಿ.ವಿ.ಮೋಹನದಾಸ ಪೈರವನ್ನು ಭೇಟಿ ಮಾಡಿ ಕೊಂಕಣಿ ಖಾರ್ವಿ ಸಮಾಜದ ಮಾರ್ಗದರ್ಶನಕ್ಕೆ ಕೇಳಿದಾಗ ಸಮಾಜದ ಎಲ್ಲಾ ವಿಭಾಗ ಏಳಿಗೆಗಾಗಿ 2 ಕೋಟಿ ರೂ. ಸ್ಕಾಲರ್ ಶೀಪ್ ನೀಡಿ ಸಮಾಜದ ಅಭಿವೃದ್ಧಿಯತ್ತ ಸಾಗಲು ಸಹಕಾರ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಂದಾಪುರದ ತ್ರಾಸಿಯಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಸಮಾಜದವರಿಗಾಗಿ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭವನ ತಲೆಎತ್ತಿದ್ದು ಉದ್ಘಾಟನಾ ಕಾರ್ಯಕ್ರಮವೂ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಸಭಾಭವನ ಉದ್ಘಾಟನೆಯನ್ನು ಡಿ.ವಿ.ಸದಾನಂದ ಗೌಡ ನೆರವೆರಿಸಲಿದ್ದಾರೆ. ಹಾಗೂ ಮುಖ್ಯ ಅತಿಥಿಯಾಗಿ ಟಿ.ವಿ.ಮೋಹನದಾಸ ಪೈ, ರಾಜ್ಯ ಸಚಿವ ಕೇಂದ್ರಸರಕಾರ ಅನಂತಕುಮಾರ ಹೆಗಡೆ, ಬಿ.ಎಸ್.ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ವೀರಪ್ಪ ಮೊಯ್ಲಿ, ಆಸ್ಕರ್ ಫನಾಂಡೀಸ್, ಆರ್.ವಿ.ದೇಶಪಾಂಡೆ ಸೇರಿದಂತೆ ರಾಜ್ಯ ಸರಕಾರ ಸಚಿವರು ಉಪಸ್ಥಿತರಿರಲಿದ್ದಾರೆ.” ಎಂದು ಹೇಳಿದರು.

RELATED ARTICLES  ಕಾರಾವಾರದಲ್ಲಿ ಇಂದು ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ : ಉತ್ತರ ಕನ್ನಡದಲ್ಲಿ ಇಂದು 23 ಮಂದಿಗೆ ಕೋವಿಡ್..!

ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಹಿರಿಯ ಉಪಾಧ್ಯಕ್ಷ ಮೋಹನ ಬಾನಾವಳಿಕರ ಮಾತನಾಡಿದ್ದು ಭಾರತ 40 ಕಡೆಗಳಲ್ಲಿ ವಾಸವಿದ್ದು, ಮೂಲದಲ್ಲಿ ಪಶ್ಛಿಮದಿಂದ ಇಲ್ಲಿಗೆ ವಲಸೆ ಬಂದವರಾಗಿದ್ದು ಎಂದು ಅವರು ಇಲ್ಲಿನ ತನಕ ನಮ್ಮ ವಾಸಸ್ಥಳವೂ ಸರ್ಕಾರದ ಜಾಗದಲ್ಲಿಯೇ ಇದ್ದು, ಶೇ.90 ರಷ್ಟು ಜನರು ಅರಣ್ಯ ಅಥವಾ ಬಂದರ ಜಾಗದಲ್ಲಿ ನೆಲೆನಿಂತಿದ್ದೇವೆ. ಸರ್ಕಾರದಿಂದ ಸಿಗಬೇಕಾದ ಯಾವುದೇ ಯೋಜನೆ, ಸವಲತ್ತುಗಳು ಅಥವಾ ಸೌಲಭ್ಯಗಳು ನಮಗೆ ಸಿಗುತ್ತಿಲ್ಲ ಎಂದು ಹೇಳಿದ ಅವರು ಹಿಂದಿನ ಸದಾನಂದ ಗೌಡರ ಮುಖ್ಯಮಂತ್ರಿಯಾಗಿದ್ದ ಸಂಧರ್ಬದಲ್ಲಿ ಸಮಾಜಕ್ಕೆ 1 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಬಳಿಕ ಸದ್ಯ ರಾಜ್ಯ ಸರಕಾರ ಇನ್ನು 1 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ. ಹಲವು ವರ್ಷಗಳ ದಿ. ನರಸಿಂಹ ಆರ್ಕಾಟಿಯವರ ಕನಸು ನನಸಾಗಿದ್ದು, ಸಮಾಜದ ಏಳಿಗಾಗಿ ಒಂದು ಸಮಾಜ ಭವನವನ್ನು ಸ್ಥಾಪಿತವಾಗಿದೆ ಎಂದರು.

RELATED ARTICLES  ಶಿರಸಿಯ ಶ್ರೀಮತಿ ದಿವ್ಯಾ ಹೆಗಡೆಗೆ ಒಲಿದ ಡಾಕ್ಟರ್ ಆಫ್ ಫಿಲಾಸಪಿ (ಪಿಎಚ್‍ಡಿ) ಪದವಿ.

ಈ ಸಂದರ್ಭದಲ್ಲಿ ಖಾರ್ವಿ ಸಮಾಜದ ಪ್ರಮುಖರಾದ ಸೂರ್ಯಕಾಂತ ಸಾರಂಗ, ತಿಮ್ಮಪ್ಪ ಖಾರ್ವಿ, ಭಟ್ಕಳ ಖಾರ್ವಿ ಸಮಾಜದ ಅಧ್ಯಕ್ಷ ಎನ್.ಡಿ.ಖಾರ್ವಿ, ಕೃಷ್ಣ ತಾಂಡೇಲ ಕುಮಟಾ, ಶೇಷಗೀರಿ ತಾಂಡೇಲ್ ಹಾಗೂ ವೆಂಕಟೇಶ ಮೇಸ್ತಾ ಹೊನ್ನಾವರ ಉಪಸ್ಥಿತರಿದ್ದರು.