Home Health ಅನೇಕ ರೋಗಗಳಿಗೆ ಸರಳ ಪರಿಹಾರ ಬೆಳ್ಳುಳ್ಳಿಯಿಂದ ಸಿಗುವುದು!

ಅನೇಕ ರೋಗಗಳಿಗೆ ಸರಳ ಪರಿಹಾರ ಬೆಳ್ಳುಳ್ಳಿಯಿಂದ ಸಿಗುವುದು!

ನಾವು ಬಳಸುವ ಆಹಾರದಲ್ಲಿ ದೇಹದ ಆರೋಗ್ಯ ಕಾಪಾಡುವುದರಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು.ಪ್ರತಿದಿನ ಒಂದು ಆಪಲ್ ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ಪ್ರತಿದಿನವೊಂದು ಇಡೀ ಬೆಳ್ಳುಳ್ಳಿ ಬಳಸಿ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಿ ಎಂದು ಹೇಳುತ್ತದೆ ವೈದ್ಯಕೀಯ ಶಾಸ್ತ್ರ.

ಸಾಕಷ್ಟು ಜನರು ಬೆಳ್ಳುಳ್ಳಿಯಿಂದ ದೂರ ಇರ್ತಾರೆ, ಆದರೆ ಆರೋಗ್ಯದ ದೃಷ್ಟಿಯಿಂದ ಹಾಗೆ ಮಾಡುವುದು ಸರಿಯಲ್ಲ. ಪ್ರತಿದಿನ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಮೂರು ಎಸಳು ಬೆಳ್ಳುಳ್ಳಿಯನ್ನು ಖಾಲಿ ಹೊಟ್ಟೆ ಇರುವಾಗ ನುಂಗುವ ಅಭ್ಯಾಸ ಬೆಳೆಸಿ ಕೊಳ್ಳಿ. ಇಡೀ ಎಸಳು ನುಂಗಲು ಆಗದೆ ಇದ್ದಾರೆ ಅರ್ಧ ಮಾಡಿ ನುಂಗಿರಿ ಮಾತ್ರೆಯಂತೆ. ಹೀಗೆ ಮಾಡುವುದರಿಂದ ರಕ್ತ ಶುದ್ಧಿಯಾಗುತ್ತದೆ. ಮುಖದ ಮೇಲಿರುವ ಮೊಡವೆ, ಅದರ ಕಲೆಗಳು ದೂರವಾಗುತ್ತದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳುಹತ್ತಿರ ಬರದು. ಅಸಿಡಿಟಿ, ಅಳರ್ಜಿಯಂತಹ ಸಮಸ್ಯೆಗಳಿಗೆ ರಾಮಬಾಣ.ಆದರೆ ತುಂಬಾ ಬೆವರುವ ಗುಣ ಉಳ್ಳವರು ಕಡಿಮೆ ಪ್ರಮಾಣದ ಬೆಳ್ಳುಳ್ಳಿ ಬಳಸಿದರೆ ಒಳ್ಳೆಯದು. ಅತಿಯಾದ ಸೇವನೆಯಿಂದ ಬೆವರು ದುರ್ಗ೦ಧಮಯವಾಗುತ್ತದೆ.

ಬೆಳ್ಳುಳ್ಳಿಯಲ್ಲಿ ಪ್ರೋಟೀನ್, ವಿಟಮಿನ್ ಎ.ಬಿ ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳಿವೆ. ಮನೆ ಮದ್ದಿನಲ್ಲಿ ಬೆಳ್ಳುಳ್ಳಿಯ ಪಾತ್ರ ಹಿರಿದು. ಹಾಲಿನಲ್ಲಿ ಬೆಳ್ಳುಳ್ಳಿ ಹಾಕಿ ಕುದಿಸಿ ಬಾಣಂತಿಯರಿಗೆ ಕೊಟ್ಟರೆ ಮೊಲೆ ಹಾಲು ಹೆಚ್ಚಾಗುವುದು. ಬೆಳ್ಳುಳ್ಳಿ ಹಾಕಿ ಕುದಿಸಿದ ಎಣ್ಣೆ ಹಚ್ಚುವುದರಿಂದ ಸಾಧಾರಣವಾಗಿ ಬರುವ ಕಾಲು ನೋವು ಕಡಿಮೆಯಾಗುತ್ತದೆ. ರೋಗನಿರೋಧಕವಾಗಿ ಬೆಳ್ಳುಳ್ಳಿ ಉಪಯುಕ್ತ. ಕೊಲೆಸ್ಟ್ರಾಲ್ ಜಾಸ್ತಿಯಾಗಿದ್ದಾಗ ಬೆಳ್ಳುಳ್ಳಿಯುಕ್ತ ಮಾತ್ರೆಗಳ ಸೇವನೆ ಹಿತಕರ.

ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳಿಗೆ ಒಳ್ಳೆಯದು. ವಾತ ಸಂಬಂಧಿ ಕೀಲುನೋವು, ವಯಸ್ಸಾದಾಗ ಬರುವ ಸಂಧಿವಾತಗಳಿಗೂ ಬೆಳ್ಳುಳ್ಳಿ ಸೇವನೆ ಹಿತಕರ. ಚಳಿಗಾಲದಲ್ಲಿ ಕಾಲು ಸೇದುವುದು ಸಾಮಾನ್ಯವಾದ ವಿಚಾರವಾಗಿದೆ. ಎರಡು ಹಿಲುಕು ಬೆಳ್ಳುಳ್ಳಿ ಒಂದು ಬಾರಿ ಜಜ್ಜಿ ಹೆಬ್ಬೆರೆಳಿನ ತಳಭಾಗದಲ್ಲಿಟ್ಟು ಒಂದು ಬಟ್ಟೆ ಕಟ್ಟಿದರೆ ಕಾಲು ಸೇದುವುದು ಕಡಿಮೆಯಾಗುತ್ತದೆ.

ಬೆನ್ನು ನೋವಿಗೆ ಬೆಳ್ಳುಳ್ಳಿ ಉತ್ತಮ ಮನೆ ಔಷಧಿ. ಎರಡು ಅಥವಾ ಮೂರು ಕಾಳು ಲವಂಗವನ್ನು ಬೆಳಗ್ಗೆ ಸೇವಿಸಿದರೆ ಉತ್ತಮ. ಬೆಳ್ಳುಳ್ಳಿ ಎಣ್ಣೆಯಿಂದ ಬೆನ್ನು ನೋವಿರುವಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ನೋವು ಬೇಗನೆ ಶಮನವಾಗುವುದು.

ಬೆಳ್ಳುಳ್ಳಿಯ ಹತ್ತು ಎಸಳುಗಳನ್ನು ಜಜ್ಜಿ ಮೂರನೆ ಒಂದು ಕಪ್ ಹಾಲಿನಲ್ಲಿ ಕುದಿಸಿ ನಿತ್ಯ ಬೆಳಿಗ್ಗೆ ಕುಡಿಯುವುದರಿಂದ ಆರಂಭಿಕ ಹಂತದ ಅಸ್ತಮಾವನ್ನು ನಿಯಂತ್ರಿಸಬಹುದು.