35 ವರ್ಷದ ಹಿಂದೆ ಎಸ್.ಆರ್.ಪುಟ್ಟಣ್ಣ ಕಣಗಾಲ್ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಮಾನಸ ಸರೋವರ ಮಗದೊಮ್ಮೆ ಬರಲಿದೆ! ಆದರೆ ಇದು ಕಿರುತೆರೆಯಲ್ಲಿ…

ಹೌದು. ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಮೊದಲ ಬಾರಿಗೆ ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ತಮ್ಮದೆಯಾದ ಶ್ರೀ ಮುತ್ತು ಸಿನಿ ಸರ್ವಿಸ್ ಬ್ಯಾನರ್ ಅಡಿ ಧಾರಾವಾಹಿ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ.

RELATED ARTICLES  ಗೌರಿ ಲಂಕೇಶ್ ಹತ್ಯೆ ಪ್ರಕರಣ: ತಾಹೀರ್ ವಿಚಾರಣೆ…?

ಈ ಧಾರಾವಾಹಿಯ ಹೆಸರು `ಮಾನಸ ಸರೋವರ’. ಇಂದು ಬೆಂಗಳೂರಿನ ಕಂಠಿರವ ಸ್ಟೂಡಿಯೋದಲ್ಲಿ ಈ ಧಾರಾಹಿಯ ಮುಹೂರ್ತ ನೆರವೇರಿದೆ. ಸಿರಿಯಲ್ ಕಥೆ ಮಾನಸ ಸರೋವರದ ಮುಂದುವರೆದ ಭಾಗವಾಗಿದೆ. ಪ್ರಣಯ ರಾಜ ಶ್ರೀನಾಥ್, ಪದ್ಮವಸಂತಿ ಹಾಗೂ ರಾಮಕೃಷ್ಣ ನಟರು ಈ ಧಾರಾವಾಹಿಯಲ್ಲಿ ಮತ್ತೊಮ್ಮೆ ಜೊತೆಯಾಗಿ ಬಣ್ಣಹಚ್ಚುತ್ತಿದ್ದಾರೆ.

RELATED ARTICLES  ಉತ್ತರಕನ್ನಡದ ಜನರೇ ಎಚ್ಚರವಹಿಸಿ : ಇಂದು ಬರೋಬ್ಬರಿ 44 ಜನರಿಗೆ ಕೊರೋನಾ ಪಾಸಿಟಿವ್

ಶಿವಣ್ಣರ ದ್ವಿತಿಯ ಪುತ್ರಿ ನಿವೇದಿತಾ ಮಾನಸ ಸರೋವರಕ್ಕೆ ನಿರ್ಮಾಪಕಿಯಾಗಿದ್ದಾರೆ.