Home Health ಕರ್ಪೂರವನ್ನು ದೇವರ ಪೂಜೆಗೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಳಸಬಹುದು ಗೊತ್ತೇ?

ಕರ್ಪೂರವನ್ನು ದೇವರ ಪೂಜೆಗೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಬಳಸಬಹುದು ಗೊತ್ತೇ?

ಕರ್ಪೂರ… ದೇವರ ಪೂಜೆಗೆ ಉಪಯೋಗಿಸುವ ಪದಾರ್ಥವಾಗಿಯೇ ಬಹಳಷ್ಟು ಮಂದಿಗೆ ಗೊತ್ತು. ಆದರೆ ಇದನ್ನು ಅನೇಕ ರೀತಿಯ ಲೋಷನ್ಸ್, ಸೋಪು, ಕ್ರೀಮುಗಳ ತಯಾರಿಯಲ್ಲೂ ಬಳಸುತ್ತಾರೆ. ಲಾರೆಲ್ ವುಡ್ ಎಂಬ ಒಂದು ವಿಷಿಷ್ಟವಾದ ವೃಕ್ಷ ಜಾತಿಗೆ ಸೇರಿದ ಕಾಂಡದಿಂದ ಇದನ್ನು ತಯಾರಿಸುತ್ತಾರೆ. ಆದರೆ ಮೊದಲು ಹೇಳಿದ ವಿಧದಲ್ಲಿ ಕರ್ಪೂರ ಕೇವಲ ಆಯಾ ಅಗತ್ಯಗಳಿಗಾಗಿ ಅಷ್ಟೇ ಅಲ್ಲದೆ, ನಮ್ಮ ದೇಹದ ಆರೋಗ್ಯ ಪರವಾಗಿಯೂ ಬಹಳಷ್ಟು ಒಳಿತು ಮಾಡುತ್ತದೆ. ಆದರೆ ಇದು ಚರ್ಮಕ್ಕೆ ತಾಗಿದರೆ ಚರ್ಮ ಇರಿಟೇಷನ್‌ಗೆ ಗುರಿಯಾಗುತ್ತದೆ. ಆದಕಾರಣ ಹೇಗೆ ಬಳಸಬೇಕು, ಅದರಿಂದ ಏನೆಲ್ಲಾ ನಮಗೆ ಲಾಭಗಳಿವೆ ಎಂಬುದನ್ನು ಈಗ ನೋಡೋಣ.

ಒಂದು ಚಿಕ್ಕದಾದಂತಹ ಕ್ಲಾತ್ ಬ್ಯಾಗ್‌ನಲ್ಲಿ ಕೆಲವು ಕರ್ಪೂರದ ಉಂಡೆಗಳನ್ನು ತೆಗೆದುಕೊಂಡು ಆ ಬ್ಯಾಗನ್ನು ಮೂಟೆ ಕಟ್ಟಿ ಅದಕ್ಕೆ ದಾರವನ್ನು ಸುತ್ತಿ ಆ ಬಳಿಕ ಆ ಬ್ಯಾಗನ್ನು ಚಿತ್ರದಲ್ಲಿ ತೋರಿಸಿದಂತೆ ಕುತ್ತಿಗೆಗೆ ಹಾಕಿಕೊಳ್ಳಬೇಕು. ಈ ರೀತಿ ರಾತಿಹೊತ್ತು ಮಾಡಬೇಕು. ಬೆಳಗ್ಗೆ ಆ ಬ್ಯಾಗನ್ನು ತೆಗೆಯಬೇಕು. ಇದರಿಂದ ನಮ್ಮ ದೇಹಕ್ಕೆ ಅನೇಕ ವಿಧದ ಆರೋಗ್ಯ ಪ್ರಯೋಜನಗಳು ಉಂಟಾಗುತ್ತವೆ. ಅವೇನೆಂದರೆ…

1. ಮೇಲೆ ತಿಳಿಸಿದಂತೆ ಕರ್ಪೂರವನ್ನು ಬ್ಯಾಗ್‌ನಲ್ಲಿ ಸುತ್ತಿ ಕೊರಳಿಗೆ ಹಾಕಿಕೊಂಡು ನಿದ್ರಿಸುವುದರಿಂದ ರಕ್ತ ಸಂಚಲನೆ ಉತ್ತಮಗೊಳ್ಳುತ್ತದೆ. ಗ್ಯಾಸ್ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ. ಜೀರ್ಣ ಶಕ್ತಿ ಹೆಚ್ಚುತ್ತದೆ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ. ಮಲಬದ್ಧತೆ, ಅಸಿಡಿಟಿಯಂತಹ ಸಮಸ್ಯೆಗಳು ಬರಲ್ಲ.

2. ಕೆಮ್ಮು, ನೆಗಡಿಯಂತಹ ಶ್ವಾಸಕೋಶ ಸಮಸ್ಯೆಗಳಿಂದ ಉಪಶಮನ ಲಭಿಸುತ್ತದೆ. ದೇಹದ ಜೀವಕ್ರಿಯೆ ಸಕ್ರಮವಾಗಿ ನಡೆಯುತ್ತದೆ.

3. ಆಂಟಿ ಇನ್‌ಫ್ಲಾಮೇಟರಿ, ಅನಾಲ್‌ಜೆಸಿಕ್‌ನಂತಹ ಗುಣಗಳು ಕರ್ಪೂರದಲ್ಲಿವೆ. ಸ್ನಾಯುಗಳ ಸೆಳೆತ, ಊತ ಕಡಿಮೆಯಾಗುತ್ತದೆ.

4. ಆಂಟಿ ಫಂಗಲ್, ಆಂಟಿ ಬ್ಯಾಕ್ಟೀರಿಯಾ ಗುಣಗಳು ಇದಲ್ಲಿವೆ. ಹಲವು ವಿಧದ ಸೋಂಕುಗಳು ಗುಣವಾಗುತ್ತವೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

5. ನರಗಳ ಸಂಬಂಧಿ ರೋಗಗಳು ದೂರವಾಗುತ್ತವೆ. ಯಾವಾಗಲೂ ಹುರುಪಿನಿಂದ ಇರುತ್ತೀರ. ಡಿಪ್ರೆಷನ್ ಹತ್ತಿರ ಸುಳಿಯಲ್ಲ.

ಆದರೆ ಕರ್ಪೂರ ಉಂಡೆಯ ರೂಪದಲ್ಲಷ್ಟೆ ಅಲ್ಲದೆ ಬಾರ್ ರೂಪದಲ್ಲೂ ಸಹ ನಮಗೆ ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಅವುಗಳನ್ನೂ ಸಹ ಮೇಲೆ ತಿಳಿಸಿದ ರೀತಿಯಲ್ಲಿ ಪ್ರಯತ್ನಿಸಬಹುದು..!