ಆಕೆಯ ಹೆಸರು ಶ್ರುತಿ ಭಟ್. ಕಾಸರಗೋಡಿನ ಪೆರ್ಲದ ಯುವತಿ. ಆಕೆಯ ಬಾಲ್ಯ ಎಲ್ಲರಂತೆ ಸಾಮಾನ್ಯವಾಗಿತ್ತು. ಆದರೆ ಕಾಸರಗೋಡಿನ ಕಾಲೇಜಿಗೆ ಸೇರುತ್ತಿದ್ದಂತೆ ಶ್ರುತಿ ಭಟ್ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚೆಚ್ಚು ಆಸಕ್ತಿಯನ್ನು ತಳೆಯಲು ಶುರು ಮಾಡುತ್ತಾಳೆ. ಅದಕ್ಕೆ ಕಾರಣ ಅಲ್ಲಿರುವ ವಾತಾವರಣ.
ಕಾಸರಗೋಡಿನ ಕಾಲೇಜುಗಳಲ್ಲಿ ದಿನದ ಒಂದು ತರಗತಿಯನ್ನು ಇಸ್ಲಾಂ ಧರ್ಮ ಭೋದನೆಗೆಂದೇ ಇಡಲಾಗುತ್ತದೆ ಎನ್ನುವ ಮೂಲಕ ಮಾತು ಪ್ರಾರಂಭಿಸುವ ಶ್ರುತಿ ಭಟ್ ಗೆ ಅದರಲ್ಲಿ ಅಂತಹ ಆಸಕ್ತಿ ಯಾವುದೂ ಇರಲಿಲ್ಲ. ಯಾಕೆಂದರೆ ಆ ತರಗತಿಗೆ ಎಲ್ಲ ಧರ್ಮದವರು ಹೋಗಬೇಕೆನ್ನುವ ಕಡ್ಡಾಯವಿರಲಿಲ್ಲ. ಅದು ದಿನದಲ್ಲಿ ಬೆಳಿಗ್ಗೆ ಪ್ರಾರಂಭವಾಗುತ್ತಿದ್ದ ತರಗತಿಯಾದ್ದರಿಂದ ಮತ್ತು ಅದರಲ್ಲಿ ಇಸ್ಲಾಂ ಧರ್ಮವನ್ನು ಭೋದಿಸುತ್ತಿದ್ದ ಕಾರಣ ಹವ್ಯಕ ಮನೆತನದವಳಾಗಿ ಶ್ರುತಿ ಭಟ್ ಮೊದಲಿಗೆ ಆ ತರಗತಿಯ ಕಡೆಗೆ ಕಣ್ಣೇತ್ತಿ ಕೂಡ ನೋಡುತ್ತಿರಲಿಲ್ಲ. ಆದರೆ ಅವಳು ಕಲಿಯುವ ಕಾಲೇಜಿನಲ್ಲಿ ಮತ್ತೊಂದು ತರಗತಿ ಕೂಡ ಇತ್ತು. ಅದಕ್ಕೆ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಭಾಗವಹಿಸಬೇಕಿತ್ತು. ಆ ತರಗತಿಯ ಹೆಸರು ಜನರಲ್ ನಾಲ್ಲೆಡ್ಜ್ ಕ್ಲಾಸ್. ಸಾಮಾನ್ಯ ಜ್ಞಾನವನ್ನು ಕಲಿಸುವ ತರಗತಿಯಾದರೂ ಇಲ್ಲಿ ಕಲಿಸುತ್ತಿದ್ದದ್ದು ಕುರಾನ್ ಗ್ರಂಥದ ಬಗ್ಗೆ. ಅಲ್ಲಿ ಬೇರೆ ಯಾವುದೇ ರೀತಿಯ ವಿಷಯಗಳಿಗೆ ಆಸ್ಪದವಿರಲಿಲ್ಲ. ಕಲಿಸುವ ಶಿಕ್ಷಕರು ಕೂಡ ಮದರಸಾಗಳಿಂದ ಬರುತ್ತಿದ್ದರು. ಶ್ರುತಿ ಭಟ್ ಗೆ ಮೊದಮೊದಲು ಇಂತಹ ತರಗತಿಯಲ್ಲಿ ಕುಳಿತುಕೊಳ್ಳುವುದು ಕಷ್ಟವೆನಿಸುತ್ತಿತ್ತು. ಆದರೆ ಸಹಪಾಠಿಗಳು ವಿದ್ಯಾರ್ಥಿನಿಯರು ಇವಳನ್ನು ನಿಧಾನವಾಗಿ ತಮ್ಮ ಧರ್ಮದ ಮಹತ್ವದ ಬಗ್ಗೆ ತಿಳಿಸಲು ಶುರುಮಾಡಿದರು.

ನಿನ್ನ ಧರ್ಮದಲ್ಲಿ ಎಷ್ಟೊಂದು ದೇವರುಗಳಿದ್ದಾರೆ. ಅಷ್ಟು ದೇವರು ಯಾಕೆ ಇದ್ದಾರೆ ಎಂದು ಗೊತ್ತಿದೆಯಾ ಎಂದು ಕೇಳುತ್ತಿದ್ದರು. ಶ್ರುತಿ ಭಟ್ ಮನೆಗೆ ಬಂದು ಆ ಪ್ರಶ್ನೆಯನ್ನು ತಾಯಿಯಲ್ಲಿ ಕೇಳಿದರೆ “ಮಗಳೇ, ಹಾಗೆಲ್ಲ ಧರ್ಮವನ್ನು ಪ್ರಶ್ನಿಸಬಾರದು” ಎಂದು ಹೇಳುತ್ತಿದ್ದರು. ಮರುದಿನ ಶ್ರುತಿ ಭಟ್ ಅದನ್ನು ಸಹಪಾಠಿಗಳಿಗೆ ಹೇಳಿದರೆ ಅವರು ನಗುತ್ತಿದ್ದರು. ನಿಮ್ಮ ಧರ್ಮದಲ್ಲಿ ಮಂತ್ರ ಕಲಿಯಲು ಹೆಣ್ಣುಮಕ್ಕಳಿಗೆ ಅವಕಾಶ ಇದೆಯಾ ಎಂದು ಕೇಳಿ ಬಾ ಎಂದು ಒಮ್ಮೆ ಸಹಪಾಠಿಯೊಬ್ಬಳು ಶ್ರುತಿಗೆ ಕೇಳುತ್ತಾಳೆ. ನಾನು ಮಂತ್ರ ಕಲಿಯಬೇಕು, ಯಾವುದೇ ಕಾರಣಕ್ಕೂ ನಮ್ಮ ಧರ್ಮದಲ್ಲಿ ಹೆಣ್ಣುಮಕ್ಕಳಿಗೆ ಮಂತ್ರ ಕಲಿಯಲು ಅವಕಾಶ ಇಲ್ಲ ಎಂದು ಯಾರೂ ಅಂದುಕೊಳ್ಳಬಾರದು ಎಂದು ನಿರ್ಧರಿಸಿದ ಶ್ರುತಿ ಮಧೂರು ದೇವಸ್ಥಾನಕ್ಕೆ ಹೋಗಿ ಅಲ್ಲಿ ಮಂತ್ರ ಕಲಿಸಿ ಎಂದು ವಿನಂತಿಸಿಕೊಳ್ಳುತ್ತಾಳೆ. ಆದರೆ ಅವಳಿಗೆ ಪುರುಷರಿಗೆ ಕಲಿಸುವ ಹಾಗೆ ಕಲಿಸಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಇದರ ನಂತರ ಶ್ರುತಿಗೆ ತನ್ನ ಧರ್ಮದಲ್ಲಿ ಏನೋ ಕೊರತೆ ಇದೆ ಎಂದು ಅನಿಸಲು ಶುರುವಾಗುತ್ತದೆ. ಅದಕ್ಕೆ ಸರಿಯಾಗಿ ಆಕೆಯ ಸಹಪಾಠಿಗಳು ತಮ್ಮ ಧರ್ಮದ ಬಗ್ಗೆ ಅವಳಿಗೆ ಹೇಳಲು ಶುರು ಮಾಡುತ್ತಾರೆ. ಟಾಯ್ಲೆಟಿಗೆ ಹೋಗುವಾಗ ಮೊದಲು ಕೆಮ್ಮಿದಂತೆ ಮಾಡಿ ನಂತರ ಬಾಗಿಲು ಬಡಿದು ಯಾರೂ ಇಲ್ಲ ಎಂದು ಖಾತ್ರಿ ಪಡಿಸಿಕೊಂಡು ನಂತರ ಹೋಗಬೇಕು ಎನ್ನುವುದರಿಂದ ಹಿಡಿದು ಪ್ರತಿಯೊಂದು ವಿಷಯಗಳನ್ನು ಅವಳಿಗೆ ಕಳಿಸಿಕೊಡಲಾಗುತ್ತದೆ. ಮಗಳೇಕೆ ಟಾಯ್ಲೆಟಿನಲ್ಲಿ ಯಾರೂ ಇಲ್ಲ ಎಂದು ಗೊತ್ತಿದರೂ ಹಾಗೇಕೆ ಮಾಡುತ್ತಿದ್ದಾಳೆ ಎನ್ನುವ ಸಂಶಯ ತಾಯಿಗೆ ಬರುತ್ತದೆ.

RELATED ARTICLES  ಸುಪಾರಿ ಪ್ರಕರಣ: ರವಿ ಬೆಳಗೆರೆಗೆ ಜೈಲಾ? ಬೇಲಾ? ಇಂದು ನಿರ್ಧಾರ

ನಂತರ ಒಂದು ದಿನ ಶ್ರುತಿಗೆ ಒಂದು ಚಾಕ್ಲೇಟನ್ನು ಆಕೆಯ ಸಹಪಾಠಿಯೊಬ್ಬಳು ನೀಡುತ್ತಾರೆ. ಅದನ್ನು ಸಹಜವಾಗಿ ಸ್ವೀಕರಿಸಿ ತಿಂದ ನಂತರ ಶ್ರುತಿಯ ದೇಹದಲ್ಲಿ ಒಂದು ರೀತಿಯ ಚಿತ್ತಚಂಚಲತೆ ಕಂಡು ಬರುತ್ತದೆ. ಏನೋ ಒಂದು ರೀತಿಯ ಉನ್ಮಾದ ಆವರಿಸಿಕೊಳ್ಳುತ್ತದೆ. ನಂತರ ಆಕೆಗೆ ಅದೇ ಚಾಕ್ಲೆಟನ್ನು ಮತ್ತೆ ಮತ್ತೆ ತಿನ್ನಬೇಕೆನಿಸುತ್ತದೆ. ಆ ಚಾಕ್ಲೇಟ್ ಕೊಟ್ಟ ವ್ಯಕ್ತಿಗೆ ಅವಳು ಗೋಗರೆದು ಆ ಚಾಕ್ಲೇಟ್ ಪಡೆದುಕೊಳ್ಳುತ್ತಾಳೆ. ನಂತರ ಮೊದಲು ಚಾಕ್ಲೇಟ್ ಕಕೊಟ್ಟವಳು ಅದು ತನ್ನ ಹತ್ತಿರ ಇಲ್ಲ, ನೀನು ಆ ಹುಡುಗನ ಹತ್ತಿರ ಕೇಳು ಎನ್ನುತ್ತಾಳೆ. ಆ ಯುವಕನ ಹತ್ತಿರ ಕೇಳಿದ ನಂತರ ಅವನು ಕೊಡಲು ಶುರು ಮಾಡುತ್ತಾನೆ. ಅವನ ಬಳಿ ಚಾಕ್ಲೇಟ್ ತೆಗೆದುಕೊಳ್ಳುತ್ತಿದ್ದ ಶ್ರುತಿಗೆ ಅವನ ಮೇಲೆ ಒಲವು ಮೂಡುತ್ತದೆ.
ಆತ ಒಂದು ದಿನ ಶ್ರುತಿ ಭಟ್ ಗೆ ಒಂದು ಐಪ್ಯಾಡ್ ಗಿಫ್ಟ್ ಆಗಿ ನೀಡುತ್ತಾಳೆ. ಅದರಲ್ಲಿ ಕೇವಲ ಇಸ್ಲಾಂ ಧರ್ಮದ ಬಗ್ಗೆ ಬೋಧನೆ ಇರುತ್ತದೆ. ಶ್ರುತಿ ಅದನ್ನು ಮನೆಯಲ್ಲಿ ಕಿವಿಗೆ ಹಿಯರ್ ಫೋನ್ ಹಾಕಿ ಕೇಳುತ್ತಾಳೆ. ಪ್ರಾರಂಭದಲ್ಲಿ ಮಗಳು ಏನೋ ಹಾಡು ಕೇಳುತ್ತಿದ್ದಾಳೆ ಎಂದು ಅಂದುಕೊಳ್ಳುತ್ತಾರೆ. ನಂತರ ಒಂದು ದಿನ ಅಚಾನಕ್ ಆಗಿ ಶ್ರುತಿ ಭಟ್ ಮನೆಯಿಂದ ನಾಪತ್ತೆಯಾಗುತ್ತಾಳೆ.

ಶ್ರುತಿಯ ಪ್ರಯಾಣ ಪೊನ್ನಾನಿಯತ್ತ ಸಾಗುತ್ತದೆ. ಅವಳನ್ನು ಒಬ್ಬ ಏಜೆಂಟ್ ಅಲ್ಲಿಗೆ ಕರೆದುಕೊಂಡು ಹೋಗಲು ಆಕೆಯೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿರುತ್ತಾನೆ. ಆದರೆ ರೈಲಿನಲ್ಲಿ ಇಬ್ಬರಿಗೂ ಪ್ರತ್ಯೇಕ ಟಿಕೆಟ್ ಮಾಡಲಾಗಿರುತ್ತದೆ. ಏಕೆಂದರೆ ಒಂದು ವೇಳೆ ಯಾವುದಾದರೂ ಹಿಂದೂ ಸಂಘಟನೆಗಳ ಕೈಯಲ್ಲಿ ಸಿಕ್ಕಿಬೀಳದಿರಲಿ ಎನ್ನುವ ಕಾರಣಕ್ಕೆ ಆ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ವೇಳೆ ಯಾರಿಗಾದರೂ ಸಂಶಯ ಬಂದರೂ ತಾನು ಇಚ್ಚೆಯಿಂದ ಹಾಗೆ ಹೋಗುತ್ತಿರುವುದಾಗಿ ಅವಳು ಹೇಳಬೇಕು ಎಂದು ಅವಳಿಗೆ ತಾಕೀತು ಮಾಡಲಾಗಿರುತ್ತದೆ. ಶ್ರುತಿಯೇ ಹೇಳುವ ಹಾಗೆ ಪೊನ್ನಾನಿಗೆ ಹೋದ ಕೂಡಲೇ ಅವಳಿಗೆ ಅಲ್ಲಿನ ಧಾರ್ಮಿಕ ಕೇಂದ್ರದಲ್ಲಿ ಹೊರಗೆ ಒಂದು ಹಸಿರು ಬಣ್ಣದ ಪಾನೀಯವನ್ನು ನೀಡಲಾಯಿತು. ಅದನ್ನು ಕುಡಿದ ನಂತರ ಆಕೆಯನ್ನು ಒಂದು ಕತ್ತಲ ಕೋಣೆಗೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ಆಕೆಯನ್ನು ಹಲವು ದಿನಗಳ ತನಕ ಇಸ್ಲಾಂ ಧರ್ಮದ ಬಗ್ಗೆ ಬೇರೆ ಬೇರೆ ಬೋಧಕರು ಬಂದು ಬೋಧಿಸುತ್ತಿದ್ದರು. ಯಾರೊಂದಿಗೂ ಮಾತನಾಡುವಂತಿಲ್ಲ. ಯಾರೊಂದಿಗೂ ಏನೂ ಹೇಳುವಂತಿಲ್ಲ. ಆಕೆ ಅಲ್ಲಿ ತಲುಪುವಾಗ ಮಧ್ಯರಾತ್ರಿ ಆದ ಕಾರಣ ಅಲ್ಲಿ ಏನೂ ಗೊತ್ತಾಗಿರಲಿಲ್ಲ. ಅಲ್ಲಿದ್ದವರೆಲ್ಲಾ ಕಣ್ಣಿನ ಸನ್ನೆಯ ಮೂಲಕವೇ ಮಾತನಾಡುತ್ತಿದ್ದಂತೆ ಶ್ರುತಿಗೆ ಅನಿಸುತ್ತಿತ್ತು. ಅವಳು ಇದ್ದ ಕೋಣೆಯಲ್ಲಿ ಆಕಾಶ ಮಾತ್ರ ಕಾಣುತ್ತಿತ್ತು. ಇವಳಿಗೆ ಕೊಟ್ಟ ಬಟ್ಟೆಯಲ್ಲಿ ಇಡೀ ದೇಹ ಮುಚ್ಚಲ್ಪಡುತ್ತಿತ್ತು. ಕೇವಲ ಕಣ್ಣು ಮಾತ್ರ ಹೊರಗೆ ಕಾಣುವಂತೆ ಆ ಬುಖರ್ಾ ವಿನ್ಯಾಸಗೊಳಿಸಲಾಗಿತ್ತು. ಅಲ್ಲಿ ಹೋದ ಮೇಲೆ ಅವಳಿಗೆ ಅನಿಸಿತು. ಓರ್ವ ಹೆಣ್ಣುಮಗಳನ್ನು ಮತಾಂತರ ಮಾಡಿದರೆ ಹತ್ತು ಸಲ ಹಜ್ ಯಾತ್ರೆ ಮಾಡಿದ ಪುಣ್ಯ ಲಭಿಸುತ್ತದೆ ಎಂದು ಅಲ್ಲಿನವರು ಇವಳಿಗೆ ಹೇಳಿದ್ದು ಕೇಳಿ ಶ್ರುತಿಗೆ ಶಾಕ್ ಆಗಿತ್ತು.

RELATED ARTICLES  ಜಿ 20: ಪ್ರಧಾನಿ ಮೋದಿ ಸೌದಿ ರಾಜ ಪ್ರಭು ಭೇಟಿ: ಟ್ರಂಪ್, ಅಬೆ,ಕ್ಸಿ ಜಿನ್ಪಿಂಗ್ ಜೊತೆ ತ್ರಿಪಕ್ಷೀಯ ಮಾತುಕತೆ ನಡೆಸಲು ಸಾಧ್ಯತೆ.

ಶ್ರುತಿಯ ಸಿಮ್ ಕಾಡರ್್ ಗಳನ್ನು ತೆಗೆದುಕೊಳ್ಳಲಾಗಿತ್ತು. ಆಕೆ ಎಲ್ಲಿದ್ದಾಳೆ ಎಂದು ಯಾರಿಗೂ ಗೊತ್ತಾಗುತ್ತಿರಲಿಲ್ಲ. ಶ್ರುತಿ ರಹಮತ್ ಆಗಿ ಬದಲಾಗಿದ್ದಳು. ಮನೆಯವರು ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದರು. ಸಿಮ್ ಇಲ್ಲದೆ ಇದ್ದ ಕಾರಣ ಶ್ರುತಿಯ ಫೋನ್ ಕರೆ ಹೋಗುತ್ತಿರಲಿಲ್ಲ. ನಂತರ ಪೊಲೀಸರು ಶ್ರುತಿಯ ಮೊಬೈಲ್ ಐಪಿ ನಂಬ್ರವನ್ನು ಟ್ರೇಸ್ ಮಾಡಿ ಆಕೆ ಪೊನ್ನಾನಿಯಲ್ಲಿ ಇರುವುದಾಗಿ ಪತ್ತೆ ಹಚ್ಚಿದರು. ನಂತರ ಪೊಲೀಸರು ಶ್ರುತಿಯ ಪುತ್ತೂರಿನ ಸಂಬಂಧಿಕರನ್ನು ಕರೆದುಕೊಂಡು ಪೊನ್ನಾನಿಗೆ ಹೋದರು. ಅಲ್ಲಿ ಶ್ರುತಿ ಆಲಿಯಾಸ್ ರೆಹಮತ್ ಪತ್ತೆಯಾಗುತ್ತಾಳೆ. ಅಷ್ಟೇ ಅಲ್ಲ, ಅಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಯ ಸುಮಾರು 150 ಮಂದಿ ಹೆಣ್ಣು ಮಕ್ಕಳು ಕೂಡ ಇರುತ್ತಾರೆ. ನಂತರ ಶ್ರುತಿಯನ್ನು ಕರೆದುಕೊಂಡು ಏನರ್ಾಕುಲಂ ಮ್ಯಾಜಿಸ್ಟ್ರೇಟ್ ರ ಮುಂದೆ ಹಾಜರು ಪಡಿಸುತ್ತಾರೆ. ಅಲ್ಲಿ ನ್ಯಾಯಾಧೀಶರು ಶ್ರುತಿಗೆ ಎರಡುದಿನ ಸಮಯ ಕೊಡುತ್ತಾರೆ. ನ್ಯಾಯಾಲಯದಲ್ಲಿ ಶ್ರುತಿಗೆ ತಾಯಿ ಕಾಣಿಸುತ್ತಾರೆ. ತಾಯಿಯ ಕಣ್ಣೀರು ಧಾರಾಕಾರವಾಗಿ ಹರಿಯುತ್ತದೆ. ತಾನು ಈ ವಯಸ್ಸಿನಲ್ಲಿ ತಾಯಿಗೆ ಇಷ್ಟು ನೋವು ಕೊಡುವುದು ಸರಿಯಲ್ಲ ಎಂದು ಅಂದುಕೊಂಡ ಶ್ರುತಿ ತಾಯಿ, ತಂದೆಯೊಂದಿಗೆ ತೆರಳಲು ಸಮ್ಮತಿಸುತ್ತಾಳೆ.
ಅವಳನ್ನು ಅಲ್ಲಿಂದ ಪುತ್ತೂರಿನ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಸಂಬಂಧಿಕರು ಇವಳನ್ನು ಮತ್ತೆ ಹಿಂದೂ ಧರ್ಮಕ್ಕೆ ತರುವುದು ಹೇಗೆ ಎಂದು ಚಚರ್ಿಸುತ್ತಾರೆ. ಅದೆಲ್ಲ ಇವಳ ಕಿವಿಗೆ ಬೀಳುತ್ತದೆ. ಒಮ್ಮೆಲ್ಲೆ ಹಿಂದೂ ಧರ್ಮ ಶ್ರೇಷ್ಟ ಎಂದರೆ ಅವಳು ಕೋಪಿಸಿಕೊಂಡು ಹೋಗಿಬಿಟ್ಟಾಳು ಎಂದು ಹೆದರಿ ಅವರೆಲ್ಲ ಆತಂಕದಿಂದ ಇವಳ ಹತ್ತಿರ ಮಾತನಾಡಲು ಶುರು ಮಾಡುತ್ತಾರೆ. ಅಲ್ಲಿ ಅವಳಿಗೆ ಹಾಲು ಕೊಡಲು ಬಂದಾಗ ಇವಳು ನಿರಾಕರಿಸುತ್ತಾಳೆ. ನಂತರ ಒಂದು ಹಸಿರು ಜ್ಯೂಸ್ ತರಹದ್ದು ಕೊಡುತ್ತಾರೆ. ಹಸಿರು ಪಾನೀಯವನ್ನು ಕುಡಿದು ಅಭ್ಯಾಸವಾಗಿದ್ದ ಕಾರಣ ಮನೆಯವರು ಕೊಟ್ಟ ಹಸಿರು ಜ್ಯೂಸ್ ಕುಡಿಯುತ್ತಾಳೆ. ಎರಡು ಮೂರು ಗ್ಲಾಸು ಕುಡಿಯುತ್ತಿದ್ದಂತೆ ವಾಂತಿ ಆದಂತಾಗಿ ಕಫ ಹೊರಗೆ ಬರುತ್ತದೆ. ನಂತರ ಕಫದೊಂದಿಗೆ ಕಪ್ಪು ಬಣ್ಣದ ಒಂದು ಹೊರಗೆ ಬರುತ್ತದೆ. ತಕ್ಷಣ ಮನೆಯಲ್ಲಿದ್ದ ಕೆಲವರು ಅದರ ಫೋಟೋ ತೆಗೆಯುತ್ತಾರೆ. ಅದರ ಫೋಟೋ ಯಾಕೆ ತೆಗೆಯುತ್ತೀರಿ ಎಂದು ಕೇಳಿದಾಗ ನಿನ್ನ ದೇಹದಲ್ಲಿ ಹೊಕ್ಕಿದ ಮತಾಂತರದ ಅಮಲು ಹೊರಗೆ ಬಂತು ಎನ್ನುತ್ತಾರೆ. ಹೀಗೆ ಶ್ರುತಿ ಭಟ್ ಎನ್ನುವ ಹೆಣ್ಣುಮಗಳು ರೆಹಮತ್ ಆಗಿ ಮತ್ತೆ ಶ್ರುತಿ ಭಟ್ ಆಗಿ ಬದಲಾದ ಕಥೆ. ಅವಳೇ ಹೇಳುವ ಹಾಗೆ ತನ್ನ ಹಾಗೆ ಮತ್ತೆ ಮಾತೃಧರ್ಮಕ್ಕೆ ಮರಳುವ ಭಾಗ್ಯ ಎಲ್ಲರಿಗೂ ಇರುವುದಿಲ್ಲ. ಎಷ್ಟೋ ಮಂದಿ ಹೆಣ್ಣುಮಕ್ಕಳನ್ನು ಅವರ ಮನೆಯವರು ಪತ್ತೆ ಮಾಡಲು ಸಾಧ್ಯವಾಗದೇ ಆಸೆ ಕೈಬಿಟ್ಟಿರುತ್ತಾರೆ. ನಿಮ್ಮ ಆತ್ಮಪ್ರಜ್ಞೆ ಸ್ವಲ್ಪ ವೀಕ್ ಇದ್ದರೂ ನಿಮಗೆ ರೆಹಮತ್ ಆಗಿಯೇ ಮುಂದುವರೆಯೋಣ ಎಂದು ಅನಿಸುತ್ತದೆ ಎನ್ನುತ್ತಾಳೆ ಶ್ರುತಿ ಭಟ್