Home Health ಹೀಗಿದೆ ನೋಡಿ ಅರಿಶಿನ ಹಾಲಿನ ಕಮಾಲ್?

ಹೀಗಿದೆ ನೋಡಿ ಅರಿಶಿನ ಹಾಲಿನ ಕಮಾಲ್?

ಪ್ರತಿನಿತ್ಯ ಅಡುಗೆಗೆ ಬಳಸುವ ಸಾಂಬಾರ ಪದಾರ್ಥಗಳಲ್ಲಿ ಅಗಾಧ ಪ್ರಮಾಣದ ಔಷಧೀಯ ಗುಣಗಳು ಇವೆ ಎಂಬುದು ಹೆಚ್ಚಿನವರಿಗೆ ಗೊತ್ತಿರುವುದಿಲ್ಲ. ನಿಯಮಿತವಾಗಿ ಅವುಗಳನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯದು ಮತ್ತು ಆರೋಗ್ಯಕ್ಕೂ ಒಳ್ಳೆಯದು. ಅಂತಹ ಮನೆ ಮದ್ದಿನ ಸಾಲಿಗೆ ಸೇರಲ್ಪಟ್ಟಿದೆ ಅರಿಶಿನ.

ಅರಿಶಿನದಲ್ಲಿ ಕುರ್ಕುಮಿನ್ ಎಂಬ ಅಂಶವಿದೆ. ಇದೊಂದು ಪ್ರಾಕೃತಿಕ ನೋವು ನಿವಾರಕವಾಗಿದ್ದು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಓಡಿಸುವ ಶಕ್ತಿ ಇದೆ. ಶೀತದಿಂದ ಬರುವ ಮೂಗು ಕಟ್ಟುವುದು, ಎದೆ ಉರಿಯುವುದು, ಗಂಟಲು ಕೆರೆತ ಹೀಗೆ ಎಲ್ಲವನ್ನು ನಿರ್ವಹಿಸುವ ಅರಿಶಿನ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅಷ್ಟು ಮಾತ್ರವಲ್ಲದೆ ಸಂಧಿ ರೋಗ, ವಾತ ರೋಗವನ್ನು ನಿವಾರಿಸುವ ಇದು ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದ ಮೇಲೆ ಗಾಯಗಳಾದರೆ ಅದಕ್ಕೆ ಅರಿಶಿನದ ಪೇಸ್ಟ್ ಮಾಡಿ ಹಚ್ಚಿದರೆ ಕೀವು ಆಗದಂತೆ ತಡೆಗಟ್ಟಬಹುದು. ಅಲ್ಲದೇ ಗಾಯದ ಉರಿಯೂ ಕಡಿಮೆಯಾಗುತ್ತದೆ.

ಇಷ್ಟೆಲ್ಲಾ ಪ್ರಯೋಜನಗಳನ್ನು ಒಳಗೊಂಡ ಅರಿಶಿನವನ್ನು ಹಾಗೆ ಸೇವಿಸಲು ಅಸಾಧ್ಯ. ಆದುದರಿಂದ ಅರಿಶಿನವನ್ನು ಹಾಲಿನೊಂದಿಗೆ ಬೆರೆಸಿ ಕುಡಿಯಬೇಕಷ್ಟೇ. ಆಗಾಗ ಕಂಡುಬರುವ ಶೀತ, ಕೆಮ್ಮುವಿಗೆ ಅರಿಶಿನ ಹಾಲು ರಾಮಬಾಣ. ಒಂದು ಗ್ಲಾಸ್ ಹಾಲಿಗೆ ಚಿಟಿಕೆ ಅರಿಶಿನ ಸೇರಿಸಿ ಕಲಸಿ ಕುಡಿದರೆ ಮರುದಿನವೇ ಶೀತ, ಕೆಮ್ಮ ಮಾಯ. ಆರ್ಯುವೇದದಲ್ಲಿ ಪ್ರಮುಖ ಸ್ಥಾನ ವಹಿಸಿರುವ ಉತ್ತಮ ನಂಜು ನಿವಾರಕವೂ ಹೌದು. ದೇಹದಲ್ಲಿರುವ ಹಲವು ಖಾಯಿಲೆಗಳು ಮತ್ತು ಸೋಂಕುಗಳ ವಿರುದ್ಧ ಹೋರಾಡುವ ಅರಿಶಿನವನ್ನು ಸೌಂದರ್ಯವರ್ಧಕವನ್ನಾಗಿಯೂ ಉಪಯೋಗಿಸುತ್ತಾರೆ.

ಅರಿಶಿನ ಬೆರೆತ ಹಾಲಿನ ಸೇವನೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳನ್ನು ಹೊರಹಾಕಬಹುದು. ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುವ ಇದಕ್ಕೆ ಖಾಯಿಲೆ ಬಾರದಂತೆ ತಡೆಯುವ ಶಕ್ತಿ ಇದೆ. ಸಂಧಿವಾತವನ್ನು ನಿವಾರಿಸುವ ಅರಿಶಿನವು ರಕ್ತ ಶುದ್ಧಿಯನ್ನು ಮಾಡುವುದಲ್ಲದೇ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ.

ಮೂಳೆಗಳ ಧೃಡತೆಗೆ ಅರಿಶಿನ ಬೆರೆತ ಹಾಲು ಉತ್ತಮ ಮದ್ದು. ಅಷ್ಟು ಮಾತ್ರವಲ್ಲದೇ ಮಹಿಳೆಯರಿಗೆ ತಿಂಗಳ ಮುಟ್ಟಿನಲ್ಲಿ ಆಗುವ ಕೆಳಹೊಟ್ಟೆಯ ಬೇನೆಯನ್ನು ನಿವಾರಿಸುತ್ತದೆ.

ಇನ್ನೇಕೆ ತಡ? ಒಂದು ಲೋಟ ಬಿಸಿ ಹಾಲಿಗೆ ಒಂದ ಚಮಚ ಅರಿಶಿನ ಹುಡಿ ಹಾಕಿ ಕುಡಿಯಿರಿ, ಎಲ್ಲಾ ಕಾಯಿಲೆಗಳು ಮಾಯ. ಆರೋಗ್ಯವೂ ವೃದ್ಧಿಸುತ್ತದೆ.