ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ವೇಳೆ ಎಸ್‌ಐಟಿ ಅಧಿಕಾರಿಗಳು ಇನ್ನೊಂದು ಸ್ಫೋಟಕ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪತ್ರಕರ್ತ ರವಿ ಬೆಳಗೆರೆ ಸಹದ್ಯೋಗಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟಿರುವುದು ಬಯಲಾಗಿದೆ. ವಿಜಯಪುರ ಮೂಲದ ಸುಪಾರಿ ಕಿಲ್ಲರ್ ಶಶಿಧರ ಮುಂಡೇವಾಡಗಿಗೆ ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಅವರನ್ನು ಹತ್ಯೆ ಮಾಡುವಂತೆ ಸುಪಾರಿ ನೀಡಿದ್ದಾರೆ. ಶಾರ್ಪ್‌ ಶೂಟರ್‌ ಶಶಿ ಮುಂಡೇವಾಡಗಿ ಎಂಬಾತನಿಗೆ 30 ಲಕ್ಷ ರೂಪಾಯಿ ಸುಪಾರಿ ನೀಡಿರುವುದು ತನಿಖೆ ವೇಳೆ ಬಯಲಾಗಿದೆ.

RELATED ARTICLES  ಇಂದು ಮಧ್ಯರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿ ವಿಜಯೋತ್ಸವಕ್ಕೆ ಬಿತ್ತು ಬ್ರೇಕ್!

ಗೌರಿ ಹತ್ಯೆ ಪ್ರಕರಣದ ತನಿಖೆಯ ವೇಳೆ ಸಂಶಯದಲ್ಲಿ ತಾಹೀರ್ ಹುಸೇನನ್ನು ವಶಕ್ಕೆ ಪಡೆಯಲಾಗಿತ್ತು. ತೀವ್ರ ವಿಚಾರಣೆ ವೇಳೆ ಶಶಿಧರ ಮುಂಡೇವಾಡಗಿ ಹೆಸರನ್ನು ತಾಹೀರ್ ಹುಸೇನ ಬಾಯ್ಬಿಟ್ಟಿದ್ದ. ಶಶಿ ಮುಂಡೇವಾಡಗಿಯನ್ನು ವಿಚಾರಣೆಗೆ ಒಳಪಡಿಸಿದಾಗ ರವಿ ಬೆಳೆಗೆರೆ ನೀಡಿದ್ದ ಸುಪಾರಿ ವಿಚಾರ ಬಯಲಾಗಿದೆ. ಅಗಸ್ಟ್‌ 28 ರಂದು ಸುನೀಲ್‌ರನ್ನು ಉತ್ತರ ಹಳ್ಳಿಯಲ್ಲಿರುವ ಅಪಾರ್ಟ್‌ ಮೆಂಟ್‌ನಲ್ಲಿ ಶೂಟ್‌ ಮಾಡಲು ನಿರ್ಧರಿಸಿದ್ದೆ. ಆದರೆ ಸಿಸಿಟಿವಿ ಕಣ್ಗಾವಲು ನೋಡಿ ವಾಪಾಸಾಗಿದ್ದೆ ಎನ್ನುವ ವಿಚಾರವನ್ನು ಶಶಿ ಮುಂಡೇವಾಡಗಿ ಬಾಯ್ಬಿಟ್ಟಿದ್ದಾನೆ.

RELATED ARTICLES  ಜನತೆಯ ಒತ್ತಡಕ್ಕೆ ಮತ್ತೆ ಅದೇ ಕ್ಷೇತ್ರಕ್ಕೆ ಬಿ ಎಸ್ ಯಡಿಯೂರಪ್ಪ!

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಸುನೀಲ್ ಹೆಗ್ಗರವಳ್ಳಿ ಸುಪಾರಿ ನೀಡಿದ್ದರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ರವಿ ಬೆಳಗೆರೆ ತನ್ನೊಂದಿಗೆ ಚೆನ್ನಾಗೇ ಇದ್ದರು ಎಂದಿದ್ದರು. ಸುಪಾರಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ, ವೈಯಕ್ತಿಕ ಕಾರಣವಿರಬಹುದು ಎಂದು ಶಂಕಿಸಲಾಗುತ್ತಿದೆ. ಬೆಳಗೆರೆ ವಿರುದ್ಧ ಎಫ್ಐಆರ್‌ ದಾಖಲಾಗಿದ್ದು, ಕೋರ್ಟ್‌ಗೆ ಹಾಜರು ಪಡಿಸಲಾಗುತ್ತಿದೆ. ಹಕ್ಕುಚ್ಯುತಿ ಆರೋಪದ ಮೇಲೆ ಪತ್ರಕರ್ತ ರವಿ ಬೆಳಗೆರೆಗೆ ಈಗಾಗಲೆ 1 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.