ಕುಮಟಾ : ತಾಲೂಕಿನ ಖಾಸಗಿ ಹೊಟೇಲ್ ಒಂದರಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಗಲಭೆಗೆ ಸರ್ಕಾರದ ಬೇಜವಾಬ್ದಾರಿ ನಡೆಯೇ ಕಾರಣದ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಪಕ್ಷದ ಅಧಿಕಾರದ ಅವಧಿಯಲ್ಲಿ ಕರಾವಳಿಯಲ್ಲಿ ಯಾವುದೇ ಕೋಮು ಗಲಭೆಗಳು ನಡೆದಿಲ್ಲ, ನಡೆದಿರುವುದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾತ್ರ . ಒಮ್ಮೆ ವಿರಪ್ಪ ಮೋಯ್ಲಿ ಅವಧಿಯಲ್ಲಿ ಹಾಗೂ ಸಿದ್ದರಾಮಯ್ಯನವರ ಅವಧಿಯಲ್ಲಾಗಿದೆ ಎಂದರು. ರಾಜ್ಯದ,ಉತ್ತರ ಕನ್ನಡ ಜಿಲ್ಲೆಯ ಜನತೆ ಹಾಗೂ ಹಿಂದೂ ಸಂಘಟನೆ ಮತ್ತು ಭಾರತೀಯ ಜನತಾ ಪಕ್ಷದ ಒತ್ತಡದಿಂದ ಗೃಹಸಚಿವರು ಪರೇಶ ಮೇಸ್ತನ ಪ್ರಕರಣವನ್ನು ಸಿ,ಬಿ.ಐ ಗೆ ನೀಡಿದ್ದಾರೆ. ಆದ್ದರಿಂದ ನಾವು ಡಿ.18 ಕ್ಕೆ ಹಮ್ಮಿಕೊಂಡ ಪ್ರತಿಭಟನೆಯನ್ನು ಮುಂದುಡುತ್ತಿದ್ದೇವೆ. ಅಧಿಕೃತವಾಗಿ ನೀಡದೆ ಇದ್ದರೆ ಮತ್ತೆ ಹೋರಾಟ ಮುಂದುವರಿಸುತ್ತೆವೆ ಎಂದರು.

RELATED ARTICLES  ಅಮಾಯಕರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ.

ಪರೇಶ ಕುಟುಂಬಕ್ಕೆ 50 ಲಕ್ಷ ಸಹಾಯಧನ ನೀಡಬೇಕು,ಘಟನೆಯಲ್ಲಿ ಹಲ್ಲೆಗೊಳಗಾದವರಿಗು ಸಹಾಯಧನವಾಗಬೇಕು, ಅಮಾಯಕರ ಬಂದನ ಕೂಡ ನಿಲ್ಲಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

RELATED ARTICLES  ವೇದಿಕೆಯಲ್ಲಿನ ಆಶು ವೈಭವ ಯಕ್ಷಗಾನ ಕಲೆಯಲ್ಲಿ ಮಾತ್ರ ಕಾಣಸಿಗುತ್ತದೆ : ಡಾ ಜಿ.ಎಲ್ ಹೆಗಡೆ

ಜಿಲ್ಲೆಯಲ್ಲಿ ಬಿ.ಜೆ.ಪಿ ಪಕ್ಷದದಲ್ಲಿ ಟಕೇಟ್ ಅಕಾಂಕ್ಷಿಗಳು ಹೆಚ್ಚಾಗಿರುವ ಪ್ರಶ್ನೆಗೆ ಉತ್ತರಿಸುತ್ತಾ, ಎಲ್ಲಿ ಬಿ,ಜೆ,ಪಿ ಅಂಕಾಂಕ್ಷಿಗಳ ಪಟ್ಟಿ ಹೆಚ್ಚಾಗಿದೇಯೋ ಅಲ್ಲಿ ಬಿ.ಜೆ.ಪಿ ಬಲಿಷ್ಠವಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ವೇಳೆ ಬಿ,ಜೆ.ಪಿ ಜಿಲ್ಲಾಧ್ಯಕ್ಷ ಕೆ,ಜಿ,ನಾಯ್ಕ, ಮುಖಂಡರಾದ ಎಂ,ಜಿ,ನಾಯ್ಕ,ವಿಕ್ರಮಾಧಿತ್ಯ ತಿಂಗಲೆ ರಾಮು ರಾಯ್ಕರ್,ಸುನೀಲ್ ನಾಯ್ಕ, ಗಾಯತ್ರಿ ಗೌಡ,ಯಶೋಧರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು..