ನಾವೆಲ್ಲ ತಿಳಿದಂತೆ ಇಂದು ವಿಶ್ವ ಪರಿಸರ ದಿನ. ಬೆಳಿಗ್ಗೆಯಿಂದ ಈವರೆಗೆ ಅದೆಷ್ಟೋ ಜನರಿಗೆ ಶುಭಾಶಯ ಕೋರಿದ್ದೇವೆ. ವಾಟ್ಸಪ್ ಫೇಸ್ಬುಕ್ಗಳಲ್ಲಿ ಅದೆಷ್ಟೋ ಮೆಸೇಜ್ಗಳನ್ನು ಹರಿಬಿಟ್ಟಿದ್ದೇವೆ. ನಮ್ಮ ಲೇಖನಗಳಲ್ಲಿ ಮಾನವರೇ ಪರಿಸರವನ್ನು ಕಾಂಕ್ರೀಟ್ ಕಾಡಾಗಿಸುತ್ತಿದ್ದ ಬಗ್ಗೆ ವಿಷಯ ಮಂಡಿಸಿಯೂ ಆಗಿದೆ. ಆದರೆ ಪರಿಸರ ಉಳಿಸಿ ಬೆಳೆಸಲು ನಾವೇನು ಮಾಡಬಹುದು? ನಮ್ಮಿಂದ ಪರಿಸರಕ್ಕೆ ಕೊಡುಗೆ ನೀಡಲು ಸಾಧ್ಯವೇ ಇಲ್ಲವೇ? ಪರಿಸರಕ್ಕೆ ಪ್ರತೀ ಹಂತದಲ್ಲಿ ಕೊಡಬೇಕಾದ ಕೊಡುಗೆಯನ್ನೂ ಬೇರೆಯವರಿಂದಲೇ ನಿರೀಕ್ಷಿಸುವುದೇ? ನನ್ನಿಂದ ಕಿಂಚಿತ್ತೂ ಕೊಡುಗೆ ನೀಡಲು ಸಾಧ್ಯವೇ ಇಲ್ಲವೇ? ಹೀಗೆ ನಮ್ಮ ಆಲೋಚನೆಯನ್ನು ಹರಿಬಿಟ್ಟಾಗ ಮನಕ್ಕೆ ಬರುವ ಎಲ್ಲ ಯೋಚನೆ-ಯೋಜನೆಗಳನ್ನು ಟಿಪ್ಪಣಿ ಮಾಡೋಣ.ಬೇರೆಯವರನ್ನು ದೂರುತ್ತಿರುವುದಕ್ಕಿಂತ ನಮ್ಮ ಪರಿಸರಕ್ಕೆ ನಾವೇನು ಮಾಡಬಹುದು ಎಂಬ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಇಲ್ಲಿ ದಾಖಲಿಸಿ. ಇದು ಓದುಗರಿಗೂ ಮಾಹಿತಿಯಾಗಲಿ ಮುಂದೆ ಸಂಗ್ರಹವಾಗಲಿ ಎಂಬುದು ನಮ್ಮ ಅಪೇಕ್ಷೆ. ಇದು ಕೇವಲ ಈ ದಿನಾಚರಣೆಗೆ ಮಾತ್ರ ಸೀಮಿತವಲ್ಲ ಸದಾ ಪರಿಸರ ಜಾಗ್ರತಿಗೆ.
ನಿಮಗಿದೋ ಈ ವೇದಿಕೆ-ಬನ್ನಿ ಪಾತ್ರಧಾರಿಗಳಾಗಿ.