ಕಾರವಾರ: ಕರ್ನಾಟಕ ಲೋಕಾಯುಕ್ತ ಕಾರವಾರ ಘಟಕ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧೆಡೆಗಳಲ್ಲಿ ಡಿ.23 ರಿಂದ 28 ರವರೆಗೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ.

ಡಿಸೆಂಬರ 23 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಜೊಯಿಡಾ, ಸಿದ್ದಾಪುರ ಪ್ರವಾಸಿ ಮಂದಿರದಲ್ಲಿ, ಮದ್ಯಾಹ್ನ 3 ರಿಂದ 4.30 ರವರೆಗೆ ಹಳಿಯಾಳ, ಶಿರಸಿ ಪ್ರವಾಸಿ ಮಂದಿರದಲ್ಲಿ. ಡಿಸೆಂಬರ 26 ರಂದು ಬೆಳಗ್ಗೆ 11.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಮುಂಡಗೋಡ, ಹೊನ್ನಾವರ ಪ್ರವಾಸಿ ಮಂದಿರದಲ್ಲಿ, ಮದ್ಯಾಹ್ನ 3 ರಿಂದ 4.30 ರವರೆಗೆ ಯಲ್ಲಾಪುರ, ಕುಮಟಾ ಪ್ರವಾಸಿ ಮಂದಿರದಲ್ಲಿ, ಡಿಸೆಂಬರ 27 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭಟ್ಕಳ ಪ್ರವಾಸಿ ಮಂದಿರದಲ್ಲಿ ಹಾಗೂ ಡಿಸೆಂಬರ 28 ರಂದು ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಕಾರವಾರದ ಪೊಲೀಸ್ ಅಧಿಕ್ಷಕರ ಕಚೇರಿಯಲ್ಲಿ ಮತ್ತು ್ಲ ಬೆಳಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ ಅಕೋಲಾ ಪ್ರವಾಸಿ ಮಂದಿರದಲ್ಲಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಲಾಗುವುದು.

RELATED ARTICLES  ಗ್ರಾಹಕ-ಸಂವಾದ ಸಭೆ ನಾಳೆ

ದೂರು ನೀಡುವವರು ಸಿವಿಲ್ ಮತ್ತು ನ್ಯಾಯಲಯಗಳಲ್ಲಿ ನಡೆಯುತ್ತಿರುವ ಪ್ರಕರಣಗಳನ್ನು ಹೊರತು ಪಡಿಸಿ ಸಾರ್ವಜನಿಕ/ ಸರ್ಕಾರಿ ನೌಕಕರ ಕತರ್Àವ್ಯ ಲೋಪಕ್ಕೆ ಸಂಬಂದಿಸಿದಂತೆ ಅರ್ಜಿ ನಮೂನೆ | ಮತ್ತು || ರಲ್ಲಿ ಭರ್ತಿ ಮಾಡಿ ನೋಟರಿಯಿಂದ ಆಫಿಡೆವಿಟ್ ಮಾಡಿ ಸಂಬಂದ ಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ದೂರು ಅರ್ಜಿಗಳನ್ನು ಕಚೇರಿಗೆ ಅಥವಾ ನೇರವಾಗಿ ನಿಬಂಧಕರು, ಕರ್ನಾಟಕ ಲೋಕಾಯುಕ್ತ ಬಹುಮಡಿಗಳ ಕಟ್ಟಡ, ಡಾ. ಬಿ.ಆರ್.ಅಂಬೇಡ್ಕರ್ ವೀದಿ ಬೆಂಗಳೂರ ರವರಿಗೆ ಸಲ್ಲಿಸಬಹುದಾಗಿದೆ. ಅನಾಮದೇಯ ಅರ್ಜಿಗಳು ಬಂದಲ್ಲಿ ಯಾವದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಅರ್ಜಿದಾರರು ತಮ್ಮ ಹೆಸರು, ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ತಪ್ಪದೇ ನೀಡಬೇಕು.

RELATED ARTICLES  ಒಎನ್'ಜಿಸಿಯಲ್ಲಿ ನೇಮಕಾತಿ.

ಲೋಕಾಯುಕ್ತ ಕಚೇರಿಯ ದೂರವಾಣಿ ಸಂಖ್ಯೆ 08382-222202, 222250, 222022,220198 ಸಂಪರ್ಕಿಸಬಹುದು ಎಂದು ಲೋಕಾಯುಕ್ತÀ ಪೊಲೀಸ್ ಉಪಾಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.