Home Information ಒಎನ್’ಜಿಸಿಯಲ್ಲಿ ನೇಮಕಾತಿ.

ಒಎನ್’ಜಿಸಿಯಲ್ಲಿ ನೇಮಕಾತಿ.

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಷನ್ ಲಿಮಿಟೆಡ್ ಇಂಜಿನಿಯರಿಂಗ್ ಮತ್ತು ಜಿಯೋ ಸೈನ್ಸ್ ಹುದ್ದೆಗಳಿಗೆ ಗೇಟ್ ಪರೀಕ್ಷೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ಸಂಖ್ಯೆ : 1032
ಹುದ್ದೆಗಳ ವಿವರ
1ಎ. ಎಇಇ (ಸಿಮೆಂಟಿಂಗ್) ಯಾಂತ್ರಿಕ –
1ಬಿ. ಎಇಇ (ಸಿಮೆಂಟಿಂಗ್) ಪೆಟ್ರೋಲಿಯಂ –
2. ಎಇಇ (ಸಿವಿಲ್)
3ಎ. ಎಇಇ (ಡ್ರಿಲ್ಲಿಂಗ್) ಯಾಂತ್ರಿಕ –
3ಬಿ. ಎಇಇ (ಡ್ರಿಲ್ಲಿಂಗ್) ಪೆಟ್ರೋಲಿಯಂ –
4. ಎಇಇ (ಎಲೆಕ್ಟ್ರಿಕಲ್) –
5. ಎಇಇ (ಎಲೆಕ್ಟ್ರಾನಿಕ್ಸ್) –
6. ಎಇಇ (ಇನ್ಟ್ರುಮೆಂಟೇಷನ್) –
7. ಎಇಇ (ಯಾಂತ್ರಿಕ) –
8ಎ. ಎಇಇ (ಉತ್ಪಾದನೆ) ಯಾಂತ್ರಿಕ –
8ಬಿ. ಎಇಇ (ಉತ್ಪಾದನೆ) ಪೆಟ್ರೋಲಿಯಂ –
8ಸಿ. ಎಇಇ (ಉತ್ಪಾದನೆ) ರಾಸಾಯನಿಕ –
9. ಎಇಇ (ಜಲಾಶಯ)
10. ರಸಾಯನ ಶಾಸ್ತ್ರಜ್ಞ
11. ಭೂವಿಜ್ಞಾನ ಶಾಸ್ತ್ರಜ್ಞ
12. ಭೂ ಭೌತಶಾಸ್ತ್ರಜ್ಞ (ಬಾಹ್ಯರೂಪ)
13. ಭೂ ಭೌತಶಾಸ್ತ್ರಜ್ಞ (ಕೊಳವೆ ಬಾವಿ)
14. ಸರಕುಗಳ ನಿರ್ವಹಣಾ ಅಧಿಕಾರಿ
15. ಪ್ರೊಗ್ರಾಮಿಂಗ್ ಆಫೀಸರ್
16. ಸಾರಿಗೆ ಅಧಿಕಾರಿ
ವಿದ್ಯಾರ್ಹತೆ : ಕ್ರ ಸಂ 1ಎ ಯಿಂದ 8ಸಿ ಮತ್ತು 14 ರಿಂದ 16 ರ ವರೆಗಿನ ವರೆಗಿನ ಹುದ್ದೆಗಳಿಗೆÉ ಸಂಬಂಧಿಸಿದ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಕ್ರ. ಸಂ 9 ರಿಂದ 13ರ ವರೆಗಿನ ಹುದ್ದೆಗಳಿಗೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.
ವಯೋಮಿತಿ : ಸಾಮಾನ್ಯ ವರ್ಗದವರಿಗೆ 30 ವರ್ಷ, ಹಿಂದುಳಿದ ವರ್ಗದವರಿಗೆ 33 ವರ್ಷ, ಪ,ಜಾ, ಪ.ಪಂ ದವರಿಗೆ 35 ವರ್ಷ, ವಿಕಲಚೇತನರಿಗೆ 40 ವರ್ಷದವರೆಗೆ ವಯೋಮಿತಿ ನಿಗದಿ ಮಾಡಲಾಗಿದೆ.
ಶುಲ್ಕ : ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದವರಿಗೆ 299 + 11 + 60 = 370 ರೂ ನಿಗದಿ ಮಾಡಲಾಗಿದೆ. ಪ.ಜಾ, ಪ.ಪಂ ಮತ್ತು ವಿಕಲಚೇತನರಿಗೆ ಶುಲ್ಕದಿಂದ ವಿನಾಯ್ತಿ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03-05-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.ongcindia.com ಗೆ ಭೇಟಿ ನೀಡಿ.