Satwadhara News

Category: KARWAR

ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದ ತನಿಖೆ.

    ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣದ ತನಿಖೆ.

    ಕಾರವಾರ: ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಉಪ ಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಉತ್ತರಕನ್ನಡ ಜಿಲ್ಲೆಗ ಸಂಬಂಧಪಟ್ಟಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ದಾಖಲಾಗಿರುವ (ಗೌರವಾನ್ವಿತ ಉಪಲೋಕಾಯುಕ್ತರ ಕಾರ್ಯವ್ಯಾಪ್ತಿಗೆ ಒಳಪಡುವ ಪ್ರಕರಣಗಳಲ್ಲಿ) ತನಿಖೆ ಅಥವಾ ವಿಚಾರಣೆಗೆ ಬಾಕಿಯಿರುವ ಪ್ರಕರಣಗಳಿಗ ಸಂಬಂಧಿಸಿದ ದೂರುದಾರರು ಹಾಗೂ ಎದುರುದಾರರ ಸಮ್ಮುಖದಲ್ಲಿ ಕಾನೂನು ರೀತಿಯಲ್ಲಿ ವಿಚಾರಣೆ ನಡೆಸಿದರು.

    ಈ ಸಂದರ್ಭದಲ್ಲಿ ಕರ್ನಾಟಕ ಲೋಕಾಯುಕ್ತ ಹೆಚ್ಚುವರಿ ನಿಬಂಧಕರು ಉಪನಿಬಂಧಕರು, ಜಿಲ್ಲಾ ಪಂಚಾಯತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಪೋಲಿಸ್ ಅಧೀಕ್ಷಕರು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

  • ನಿವೃತ್ತ ಉಪನ್ಯಾಸಕಿ ಜಯಶ್ರೀ ಎಂ. ನಾಯ್ಕ ಇನ್ನಿಲ್ಲ.

    ನಿವೃತ್ತ ಉಪನ್ಯಾಸಕಿ ಜಯಶ್ರೀ ಎಂ. ನಾಯ್ಕ ಇನ್ನಿಲ್ಲ.

    ಕಾರವಾರ : ನಗರದ ಕೋಡಿಬಾಗ ಸಾಯಿಕಟ್ಟಾದ ನಿವಾಸಿ, ನಿವೃತ್ತ ಉಪನ್ಯಾಸಕಿ ಜಯಶ್ರೀ ಎಂ. ನಾಯ್ಕ (77) ಅವರು ಮಾ.4, ಸೋಮವಾರ ನಿಧನರಾದರು. ಬಾಡ ಶಿವಾಜಿ ಕಾಲೇಜಿನಲ್ಲಿ పింది ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದ ಇವರು ಖ್ಯಾತ ನ್ಯಾಯವಾದಿ ದಿ. ಎಂ. ಆರ್. ನಾಯ್ಕ ಅವರ ಪತ್ನಿ. ಜಯಶ್ರೀ ಎಂ. ನಾಯ್ಕ ಅವರು ತಮ್ಮ ಪುತ್ರ ನಗರದ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ವಿಶ್ವನಾಥ ಎಂ. ನಾಯ್ಕ ಹಾಗೂ ಪುತ್ರಿ ಶಿವಾಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನುರಾಧಾ ಎಂ. ನಾಯ್ಕ ಅವರನ್ನು ಅಗಲಿದ್ದಾರೆ. ಜಯಶ್ರೀ ಅವರ ನಿಧನಕ್ಕೆ ಹಲವಾರು ಗಣ್ಯರು, ಜನಪ್ರತಿನಿಧಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

  • ಆಮೆಯ ದೇಹದೊಳಗೆ ಸಿಕ್ತು ಪಾರ್ಲೇಜಿ ಬಿಸ್ಕತ್ ಪ್ಯಾಕ್..!

    ಆಮೆಯ ದೇಹದೊಳಗೆ ಸಿಕ್ತು ಪಾರ್ಲೇಜಿ ಬಿಸ್ಕತ್ ಪ್ಯಾಕ್..!

    ಕಾರವಾರ : ತಾಲೂಕಿನ ದೇವಬಾಗ ಕಡಲ ತೀರದಲ್ಲಿ ಸಿಕ್ಕ ಆಮೆಯ ಮೃತ ದೇಹದಲ್ಲಿ ಪಾರ್ಲೇಜಿ ಬಿಸ್ಕತ್ ಪ್ಯಾಕೇಟು ಸಿಕ್ಕಿದೆ. ಹಾಕ್ಸ್ ಬಿಲ್‌ ಪ್ರಭೇದಕ್ಕೆ ಸೇರಿದ ಆಮೆ ಇದಾಗಿದ್ದು ಸುಮಾರು 30 ವರ್ಷದ್ದಾಗಿರಬಹುದು ಎಂದು ಅಂದಾಜಿಸಲಾಗಿದೆ. ಅರಣ್ಯ ಇಲಾಖೆಯ ಮರೈನ್ ಇಕೋ ಸಿಸ್ಟಂ ವಿಭಾಗದ ಅಧಿಕಾರಿಗಳು ಮೃತ ಆಮೆಯ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ಉದರದಲ್ಲಿ ಈ ಬಿಸ್ಕತ್ ಪ್ಯಾಕ್ ಇರುವುದು ಕಂಡುಬಂದಿದೆ.

  • ಚೀನಾ ಬೋಟ್ ಪತ್ತೆ ವಿಚಾರವಾಗಿ ಹರಿದಾಡಿದ ಮಾಹಿತಿ ಸುಳ್ಳು : ರಕ್ಷಣಾ ವ್ಯವಸ್ಥೆಗೂ ಯಾವುದೇ ಸಮಸ್ಯೆ ಇಲ್ಲ.

    ಚೀನಾ ಬೋಟ್ ಪತ್ತೆ ವಿಚಾರವಾಗಿ ಹರಿದಾಡಿದ ಮಾಹಿತಿ ಸುಳ್ಳು : ರಕ್ಷಣಾ ವ್ಯವಸ್ಥೆಗೂ ಯಾವುದೇ ಸಮಸ್ಯೆ ಇಲ್ಲ.

    ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಬಳಿಯ ಆಳ ಸಮುದ್ರದಲ್ಲಿ ಚೀನಾ ಬೋಟ್ ಪತ್ತೆಯಾಗಿದೆ ಎಂಬ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದು ಇದೊಂದು ಶುದ್ಧ ಸುಳ್ಳು ಸುದ್ದಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಜ್ಯದ ಕರಾವಳಿಯ ಸಮುದ್ರ ವ್ಯಾಪ್ತಿಯಲ್ಲಿ ಚೀನಾ ಮೂಲದ ಬೋಟ್ ಪತ್ತೆಯಾಗಿ, ಮಂಗಳೂರಿನ ಮೀನುಗಾರರು ಆ ಬೋಟ್‌ನ ಫೋಟೊ, ವಿಡಿಯೋ ಸೆರೆಹಿಡಿದಿದ್ದು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ಎಂಬೆಲ್ಲಾ ಮಾಹಿತಿ ನಿನ್ನೆ ಹರಿದಾಡುತ್ತಿತ್ತು.

    BVKVS ಹೆಸರಿನ ಬೋಟ್ ಇದಾಗಿದ್ದು, ಚೀನಾದ ಬಾವುಟವನ್ನು ಬೋಟ್‌ನಲ್ಲಿ ಹಾರಾಡುತ್ತಿದೆ. ಕುಮಟಾ‌‌ ಸಮೀಪ ಆಳ ಸಮುದ್ರದಲ್ಲಿ ಬೇರೊಂದು ಬೋಟನಲ್ಲಿ ಮೀನುಗಾರಿಕೆ ಮಾಡುತ್ತಿದ್ದ‌ ಮಂಗಳೂರಿನ ಮೀನುಗಾರರು ಚೀನಾ ಬೋಟ್ ಎಂಬ ಶಂಕೆಯಲ್ಲಿ ಫೋಟೋ ತೆಗೆದಿದ್ದಾರೆ. ಚೀನಾ ಬೋಟ್‌ ಕಾಣಿಸಿಕೊಂಡಿರುವ ಬಗ್ಗೆ, ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯ ಗಮನಕ್ಕೆ ತಂದಿದ್ದಾರೆ ಎಂದು ವರದಿಯಾಗಿತ್ತು.

    ಈ ಬಗ್ಗೆ ಸ್ಪಷ್ಟನೆ ನೀಡಿರುವ ಕರಾವಳಿ ಕಾವಲುಪಡೆಯ ಅಧಿಕಾರಿಗಳು ಅಂತಹ ಘಟನೆ ಏನು ನಡೆದಿಲ್ಲ. ಹೊನ್ನಾವರದ ಮೀನುಗಾರರು ವಿಡಿಯೋ ಮಾಡಿದ್ದು ಅವರಿಂದ ಕುಲಂಕುಶವಾಗಿ ಮಾಹಿತಿ ಪಡೆಯಲಾಗಿದೆ. ಈ ಮೀನುಗಾರರು ತಮ್ಮ ವ್ಯಾಪ್ತಿಯ ಹೊರ ಹೋಗಿದ್ದು 200 ನಾಟಿಕಲ್ ಮೈಲಿ ಗಿಂತ ಹೆಚ್ಚಿನ ದೂರ ಸಾಗಿದ್ದಾರೆ. ಇದು ಯಾವುದೇ ನಿರ್ಬಂಧ ವಿಲ್ಲದ ಸ್ಥಳವಾಗಿದ್ದು ಇಲ್ಲಿ ಯಾವುದೇ ದೇಶದ ಯಾವುದೇ ರೀತಿಯ ಬೋಟ್ಗಳು ಓಡಾಡಬಹುದಾಗಿದೆ. ಯಾರು ಬೇಕಾದರೂ ಓಡಾಡಬಹುದಾದ ಸ್ಥಳದಲ್ಲಿ ಮಾಡಿದ ವಿಡಿಯೋ ಇದಾಗಿದ್ದು ಈ ಬಗ್ಗೆ ಗೊಂದಲ ಪಡುವ ಅವಶ್ಯಕತೆ ಇಲ್ಲ. ಅದಲ್ಲದೆ ಯಾವುದೇ ರೀತಿಯ ರಕ್ಷಣಾ ವ್ಯವಸ್ಥೆಯ ಉಲ್ಲಂಘನೆ ಆಗಲಿ ಭಾರತೀಯ ರಕ್ಷಣಾ ವ್ಯವಸ್ಥೆಗೆ ಸಮಸ್ಯೆ ಆಗುವ ಘಟನೆಗಳಾಗಲಿ ನಡೆದಿಲ್ಲ ಎಂದು ಪಿ.ಎಸ್.ಐ ಅನೂಪ ನಾಯಕ ಮಾಹಿತಿ ನೀಡಿದ್ದಾರೆ.

    ಮೀನುಗಾರರೂ ಇದನ್ನು ಕುಮಟಾದಿಂದ ಅಂದಾಜು 200ಕಿಮೀ ದೂರದ ಆಳ ಸಮುದ್ರದಲ್ಲಿ ಸೆರೆಹಿಡಿಯಲಾಗಿದೆ. ಚೀನಾ ಬೋಟಿನವರು ರಾತ್ರಿ ವೇಳೆ ನಿಷೇಧಿತ ಲೈಟ್ ಫಿಶಿಂಗನ್ನೂ ನಡೆಸುತ್ತಿದ್ದರು ಎಂದು ತಿಳಿಸಿದ್ದರು. ಆದರೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡಿದ್ದು ಯಾವುದೇ ರೀತಿಯ ಸಮಸ್ಯೆಯಾಗಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

  • ಎಲ್ಲೆ ತಪ್ಪಿಸಲು ಹೋಗಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿಯಾದ ಅಂಬುಲೆನ್ಸ್.

    ಎಲ್ಲೆ ತಪ್ಪಿಸಲು ಹೋಗಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿಯಾದ ಅಂಬುಲೆನ್ಸ್.

    ಅಂಕೋಲಾ : ರಸ್ತೆಗೆ ಅಡ್ಡಬಂದ ಎಮ್ಮೆಗಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ವಾಹನ ಜಕಂ ಗೋಳಿಸಿದ ಕುರಿತು ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

    ಇಲ್ಲಿನ ತಾಲೂಕ ಆಸ್ಪತ್ರೆಯ ಹೊರ ರೋಗಿಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬಿಟ್ಟು ಪುನಃ ಅಂಕೋಲಾಕ್ಕೆ ಬರುತ್ತಿದ್ದ ವೇಳೆ ಹಾರವಾಡ ರೇಲ್ವೆ ಬ್ರಿಡ್ಜ್ ಹತ್ತಿರ ರಸ್ತೆಗೆ ಅಡ್ಡ ಬಂದ ಎಮ್ಮೆಗಳನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿತು. ಈ ಕುರಿತು ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ರಾವ್ ,ಚಾಲಕ ಜೀವನ ಆಗೇರ ವಿರುದ ಪೊಲೀಸ್ ದೂರು ನೀಡಿದಾರೆ.

  • ವಾಹನ ಓಡಿಸಿದ ಅಪ್ರಾಪ್ತ ಬಾಲಕನಿಗೆ 6,500 ರೂ. ಹಾಗೂ ಬೈಕ್ ಮಾಲೀಕನಿಗೆ 30,000 ದಂಡ.

    ವಾಹನ ಓಡಿಸಿದ ಅಪ್ರಾಪ್ತ ಬಾಲಕನಿಗೆ 6,500 ರೂ. ಹಾಗೂ ಬೈಕ್ ಮಾಲೀಕನಿಗೆ 30,000 ದಂಡ.

    ಕಾರವಾರ: ಇಲ್ಲಿನ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ ನ್ಯಾಯಾಲಯವು ಅಪ್ರಾಪ್ತ ಬಾಲಕನೋರ್ವ ಮೋಟಾರ ಸ್ಕೂಟರ್ ಚಲಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಆರ್.ಸಿ ಮಾಲೀಕಳಿಗೆ 30 ಸಾವಿರ ರೂ ದಂಡ ವಿಧಿಸಿದೆ. ನಗರದ ಸಂಚಾರ ಪೊಲೀಸ ಠಾಣಾ ವ್ಯಾಪ್ತಿಯ ಮುರಳೀಧರ ಮಠ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ರಸ್ತೆ ಅಪಘಾತ ನಡೆದಿತ್ತು. ಅಪಘಾತ ನಡೆದ ಸಂದರ್ಭದಲ್ಲಿ ಮೋಟಾರ ಸ್ಕೂಟರ ಸವಾರ ಇನ್ನೂ ಅಪ್ರಾಪ್ತನಾಗಿದ್ದ ಕಾರಣ ಪ್ರಕರಣವನ್ನು ಬಾಲ ನ್ಯಾಯಮಂಡಳಿಗೆ ವರ್ಗಾಯಿಸಲಾಗಿತ್ತು, ಬಾಲ ನ್ಯಾಯ ಮಂಡಳಿಯು ಅಪ್ರಾಪ್ತ ವಯಸ್ಸಿನ ಬಾಲಕನಿಗೆ 6,500 ರೂ. ದಂಡ ವಿಧಿಸಿದೆ.


    ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಮೋಟಾರ ಸ್ಕೂಟರ ಚಲಾಯಿಸಲು ನೀಡಿದ ಕಾರಣ ವಾಹನದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ ಹಿರಿಯ ಸಿವಿಲ್ ಹಾಗೂ ಸಿ.ಜೆ.ಎಂ.‌ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಮೋಟಾರ ಸ್ಕೂಟರಿನ ಮಾಲೀಕರಿಗೆ 30,000 ರೂಗಳನ್ನು ದಂಡ ವಿಧಿಸಿದೆ.

  • ಫೆ. 11ರಂದು ಮುಕ್ತ ಚೆಸ್‌ ಪಂದ್ಯಾವಳಿ

    ಫೆ. 11ರಂದು ಮುಕ್ತ ಚೆಸ್‌ ಪಂದ್ಯಾವಳಿ

    ಕಾರವಾರ: ಸ್ಥಳೀಯ ಪ್ರತಿಭೆಯನ್ನು ಚದುರಂಗದತ್ತ ಹೆಚ್ಚಿನ ಆಸಕ್ತಿ ವಹಿಸುವ ನಿಟ್ಟಿನಲ್ಲಿ ಫೆ. 11ರಂದು ಮುಕ್ತ ಚೆಸ್‌ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಚೆಸ್ ತರಬೇತುದಾರ ಓಂ ಚೆಸ್ ಕೋಚಿಂಗ್ ಕೇಂದ್ರದ ತರಬೇತುದಾರ ಮದನ್ ತಳೇಕರ ಹೇಳಿದ್ದಾರೆ.

    ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸವಿತಾ ವೃತ್ತದ ಸಮೀಪದಲ್ಲಿರುವ ತ್ರಿಮೂರ್ತಿ ಪಂದ್ಯಾವಳಿ ಬಿಲ್ಡಿಂಗ್‌ನಲ್ಲಿ ಶಕ ನಡೆಯಲಿದೆ. 10, 12, 14 33 16 ವರ್ಷದೊಳಗಿನವರಿಗೆ ಮತ್ತು 16 ವರ್ಷ ಮೇಲ್ಪಟ್ಟವರಿಗೆ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗಿದೆ ಎಂದರು. ನೋಂದಣಿಗೆ ಫೆ.10 ಕೊನೆಯ ದಿನವಾಗಿದೆ. ಮೊದಲ 150 ನೋಂದಣಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತಿದೆ. ನೋಂದಣಿಗೆ ಮದನ ತಳೇಕರ (7676802833), ನೀಲಂ ಕಾಂಬ್ಳೆ (9448406892) ಸಂಪರ್ಕಿಸಬಹುದು ಎಂದರು. ಕ್ಷಮಾ ಬಾಡಕರ, ಶ್ವೇತಾ ಹೇಮಗಿರಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

  • ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ : ದಿನಕರ ಶೆಟ್ಟಿ.

    ಲಯನ್ಸ್ ಕ್ಲಬ್ ಕಾರ್ಯ ಶ್ಲಾಘನೀಯ : ದಿನಕರ ಶೆಟ್ಟಿ.

    ಕುಮಟಾ : ಲಯನ್ಸ್ ಕ್ಲಬ್ ಕುಮಟಾ ಅತ್ಯುತ್ತಮ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಸಮಾಜಕ್ಕೆ ಬಹುಪಯುಕ್ತವಾದ ಆರೋಗ್ಯ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಂಡು ಅರ್ಥಪೂರ್ಣವಾಗಿ ಈ ಕಾರ್ಯಕ್ರಮವನ್ನು ರೂಪಿಸಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಲಯನ್ಸ್ ಸೇವಾ ಭವನದಲ್ಲಿ ನಡೆದ ಅನುಭವಿ ಮಾನಸಿಕ ರೋಗ ತಜ್ಞರಾದ ಡಾ. ಕೆ.ಆರ್ ಶ್ರೀಧರ ಶಿವಮೊಗ್ಗ ಇವರಿಗೆ ಲಯನ್ಸ್ ಕ್ಲಬ್ ಕುಮಟಾ ಹಾಗೂ ಊರನಾಗರಿಕರಿಂದ ಸನ್ಮಾನ ಕಾರ್ಯಕ್ರಮ ಹಾಗೂ ೭೨ ನೇ ಉಚಿತ ಗ್ರಾಮೀಣ ಮಾನಸಿಕ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

    ನನ್ನ ಕ್ಷೇತ್ರದಲ್ಲಿ ನಾನು ಆರೋಗ್ಯ ಸಂಬಂಧಿ ಅನೇಕ ಕಾರ್ಯಗಳಿಗೆ ಮಹತ್ವ ನೀಡುತ್ತಾ ಬಂದಿದ್ದು, ಶಿಕ್ಷಣ ಹಾಗೂ ಆರೋಗ್ಯಕ್ಕೆ ಮಹತ್ವ ನೀಡುವುದರಿಂದ ಕ್ಷೇತ್ರದ ಅಭಿವೃದ್ಧಿಯಾಗುತ್ತದೆ ಎಂಬುದನ್ನು ನಂಬಿಕೊಂಡಿದ್ದೇನೆ. ಲಯನ್ಸ್ ಕ್ಲಬ್ ಇಂತಹ ಕಾರ್ಯಗಳಲ್ಲಿ ತೊಡಗಿಕೊಂಡು ಸಮಾಜಕ್ಕೆ ಹೊಸ ದಾರಿ ತೋರುತ್ತದೆ ಎಂದರು.

    ಲಯನ್ಸ್ ಕ್ಲಬ್ ಕುಮಟಾ ಹಾಗೂ ಶ್ರೀ ರಾಮ ಮೆಡಿಕಲ್ಸ್ ಇವರ ಆಶ್ರಯದಲ್ಲಿ ಕ್ಷೇಮಾ ಟ್ರಸ್ಟ್ ಶಿವಮೊಗ್ಗ  ಇವರ ಸಹಯೊಗದೊಂದಿಗೆ ದಿವಂಗತ ಗೋವಿಂದರಾಯ ರಾಮಚಂದ್ರ ನಾಯಕ ಇವರ ಸ್ಮರಣಾರ್ಥ ಮೂಡ್ಲಗಿರಿ ಗೋವಿಂದರಾಯ ನಾಯಕ ಹಾಗೂ ಶ್ರೀಮತಿ ಅಕ್ಷತಾ ಗೋವಿಂದರಾಯ ನಾಯಕ ಇವರ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು.

    ಅನುಭವಿ ಮಾನಸಿಕ ರೋಗ ತಜ್ಞರಾದ ಡಾ. ಕೆ.ಆರ್ ಶ್ರೀಧರ ಶಿವಮೊಗ್ಗ ಇವರಿಗೆ ಲಯನ್ಸ್ ಕ್ಲಬ್ ಕುಮಟಾ ಹಾಗೂ ಊರನಾಗರಿಕರಿಂದ ಸನ್ಮಾನ ಮಾಡಲಾಯಿತು. ಪ್ರಾರಂಭದಲ್ಲಿ ರಕ್ಷಾ ರಾಧಾಕೃಷ್ಣ ಶಾನಭಾಗ ಇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಲಯನ್ಸ್ ಕ್ಲಬಿನ ಅಧ್ಯಕ್ಷ ಎಂ.ಜೆ.ಎಫ್ ಲಾಯನ್ ದಾಮೋದರ ವಿ.ಭಟ್ಟ ಬಂದ ಅತಿಥಿಗಳನ್ನು ಸ್ವಾಗತಿಸಿದರು. ಮಾನಸಿಕ ಆರೋಗ್ಯ ತಪಾಸಣಾ ಶಿಬಿರ ಚೇರಮನ್ನರಾದ ಲಾಯನ್ ಡಾ. ಜಿ.ಜಿ.ಹೆಗಡೆ. ಪ್ರಾಸ್ತಾವಿಕವಾಗಿ ಮಾತನಾಡಿ ಬಂದ ಅತಿಥಿಗಳನ್ನು ಪರಿಚಯ ಮಾಡಿದರು ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಲಯನ್ಸ್ ಕಾರ್ಯದರ್ಶಿ ಎಂ.ಕೆ.ಶಾನಭಾಗ ಸನ್ಮಾನಪತ್ರ ವಾಚಿಸಿದರು. ಪ್ರಮೋದ ಟಿ.ಎಸ್ ಫಾಯ್ದೆ ಹಾಗೂ ಮೂಡ್ಲಗಿರಿ ಗೋವಿಂದರಾಯ ನಾಯಕ ಹಾಗೂ  ಜೋನ್ ಚೇರ್ಮನ್ ವಿನಯಾ ಎಸ್ ಹೆಗಡೆ  ಶುಭ ಹಾರೈಸಿದರು.

    ಡಾ. ಕೆ.ಆರ್ ಶ್ರೀಧರ ಮಾತನಾಡಿ ಲಯನ್ಸ್ ಕ್ಮಬ್, ಮೆ. ಶ್ರೀ ರಾಮ ಮೆಡಿಕಲ್ಸ್ ಇವರು ತಮ್ಮನ್ನ ನಡೆಸಿಕೊಂಡು ಬಂದ ದಾರಿಯನ್ನು ಹಾಗೂ ಸನ್ಮಾನದಿಂದ ನನಗೆ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ ಎಂದು ಹೇಳಿದರಲ್ಲದೇ ನಾನು ತಮಗೆ ಯಾವತ್ತೂ ಚಿರಋಣಿ ಎಂದು ಹೇಳಿದರು. ಬಿ ರಾಮಚಂದ್ರ ಭಟ್ಟ ವಂದಿಸಿದರು. ಎಂ.ಎನ್.ಹೆಗಡೆ ಕಾರ್ಯಕ್ರಮ ನಿರೂಪಣೆ ಮಾಡಿದರು. ನೂರಾರು ಜನರು ಶಿಬಿರದ ಪ್ರಯೋಜನ ಪಡೆದರು.

  • ಬಸ್ ಪಲ್ಟಿಯಾಗಿ ಹಲವು ಕಾರ್ಮಿಕರಿಗೆ ಗಾಯ.

    ಬಸ್ ಪಲ್ಟಿಯಾಗಿ ಹಲವು ಕಾರ್ಮಿಕರಿಗೆ ಗಾಯ.

    ಕಾರವಾರ : ಬಿಣಗಾದ ಸಂಕ್ರುಬಾಗ್ ರಾಷ್ಟೀಯ ಹೆದ್ದಾರಿ 66ರಲ್ಲಿ ಬಸ್ ಮೂಲಕ ಕಾರ್ಮಿಕರನ್ನ ಕರೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬಸ್ ಪಲ್ಟಿಯಾಗಿ ಇದರಲ್ಲಿ ಇದ್ದ ಹಲವು ಕಾರ್ಮಿಕರು ಗಾಯಗೊಂಡಿರುವ ಘಟನೆ ನಡೆದಿದೆ.

    ಅರಗಾರದಲ್ಲಿರುವ ಸಿರ್ಬಡ್ ನೌಕಾನೆಲೆಗೆ ಪ್ರತಿನಿತ್ಯ ನೂರಾರು ಮಂದಿ ಕಾರ್ಮಿಕರು ಕೆಲಸಕ್ಕೆ ಹೋಗುತ್ತಿದ್ದು, ಕೆಲಸಕ್ಕೆ ಹೋಗುವ ಕಾರ್ಮಿಕರನ್ನ ಸಾರಿಗೆ ಬಸ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿದ್ದು, ಇಂದು ಸಹ ಬೆಳಿಗ್ಗೆ ಕಾರವಾರ ಹಾಗೂ ಬಿಣಗಾದಿಂದ ಕಾರ್ಮಿಕರನ್ನ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದ ಕೆಎಸ್ಆರ್‌ಸಿ ಬಸ್ ಹೆದ್ದಾರಿ ಪಕ್ಕದ ಕಂಕದಕ್ಕೆ ಉರುಳಿ ಬಿದ್ದಿದೆ.

    ಇದರಿಂದಾಗಿ ಬಸ್ ನಲ್ಲಿ ಇದ್ದ ಹೆಚ್ಚಿನ ಕಾರ್ಮಿಕರಿಗೆ ಗಾಯವಾಗಿದ್ದು ಗಾಯಗೊಂಡ ಎಲ್ಲರನ್ನು ಕಾರವಾರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ನಲ್ಲಿ 30ಕ್ಕೂ ಹೆಚ್ಚು ಕಾರ್ಮಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.

  • ಕೆ.ಎಸ್.ಆರ್‌.ಟಿ.ಸಿ. ಬಸ್‌ ಚಲಿಸುವಾಗಲೇ ನಡೆಯಿತು ಅವಘಡ :

    ಕೆ.ಎಸ್.ಆರ್‌.ಟಿ.ಸಿ. ಬಸ್‌ ಚಲಿಸುವಾಗಲೇ ನಡೆಯಿತು ಅವಘಡ :

    ಕಾರವಾರ : ಕೆ.ಎಸ್.ಆರ್‌.ಟಿ.ಸಿ. ಬಸ್‌ನ ಹಿಂಬದಿಯ ಎಕ್ಸೆಲ್ ತುಂಡಾಗಿ ಬಿದ್ದ ಘಟನೆ ಇಲ್ಲಿನ ಹಬ್ಬುವಾಡ ರಸ್ತೆಯಲ್ಲಿ ನಡೆದಿದೆ. ಈ ಘಟನೆಯಿಂದ ಕೆಲ ಕಾಲ ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

    ಕಾರವಾರದಿಂದ ಕೆರವಡಿ ಗ್ರಾಮಕ್ಕೆ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತು ತೆರಳುತ್ತಿದ್ದ ಬಸ್‌ನ ಹಿಂಬದಿಯ ಆಕ್ಸಲ್ ಏಕಾಏಕಿ ತುಂಡಾಗಿ, ಪಲ್ಟಿಯಾಗುವ ಹಂತದಲ್ಲಿದ್ದ ಬಸ್‌ನ್ನು ಸಾರ್ವಜನಿಕರು ಹಿಡಿದು ನಿಲ್ಲಿಸಲು ಹರಸಾಹಸ ಪಟ್ಟಿದ್ದಾರೆ. ಬಸ್‌ನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ವಿಡಿಯೋ

    ಈ ಘಟನೆಯಿಂದ ಕೆಲಕಾಲ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಇನ್ನು ಸುಸ್ಥಿತಿಯಲ್ಲಿರದ ಬಸ್‌ನ್ನು ಬಿಟ್ಟ ಅಧಿಕಾರಿಗಳ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿದ್ದಾರೆ.