Home KARWAR ಎಲ್ಲೆ ತಪ್ಪಿಸಲು ಹೋಗಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿಯಾದ ಅಂಬುಲೆನ್ಸ್.

ಎಲ್ಲೆ ತಪ್ಪಿಸಲು ಹೋಗಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿಯಾದ ಅಂಬುಲೆನ್ಸ್.

ಅಂಕೋಲಾ : ರಸ್ತೆಗೆ ಅಡ್ಡಬಂದ ಎಮ್ಮೆಗಳನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರೇಲ್ವೆ ಬ್ರಿಡ್ಜ್ ಗೋಡೆಗೆ ಡಿಕ್ಕಿ ಹೊಡೆದು ಅಂಬುಲೆನ್ಸ್ ವಾಹನ ಜಕಂ ಗೋಳಿಸಿದ ಕುರಿತು ಇಲ್ಲಿಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಇಲ್ಲಿನ ತಾಲೂಕ ಆಸ್ಪತ್ರೆಯ ಹೊರ ರೋಗಿಯನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಬಿಟ್ಟು ಪುನಃ ಅಂಕೋಲಾಕ್ಕೆ ಬರುತ್ತಿದ್ದ ವೇಳೆ ಹಾರವಾಡ ರೇಲ್ವೆ ಬ್ರಿಡ್ಜ್ ಹತ್ತಿರ ರಸ್ತೆಗೆ ಅಡ್ಡ ಬಂದ ಎಮ್ಮೆಗಳನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ಸಂಭವಿಸಿತು. ಈ ಕುರಿತು ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸಂತೋಷಕುಮಾರ ರಾವ್ ,ಚಾಲಕ ಜೀವನ ಆಗೇರ ವಿರುದ ಪೊಲೀಸ್ ದೂರು ನೀಡಿದಾರೆ.