Satwadhara News

Category: Local News

  • ಸ್ಕೂಟರ್ ಡಿಕ್ಕಿ – ವೃದ್ಧೆಗೆ ಗಾಯ : ಕುಡಿದ ನಶೆಯಲ್ಲಿಬಾವಿಯಲ್ಲಿ ಬಿದ್ದು ಸಾವು

    ಸ್ಕೂಟರ್ ಡಿಕ್ಕಿ – ವೃದ್ಧೆಗೆ ಗಾಯ : ಕುಡಿದ ನಶೆಯಲ್ಲಿಬಾವಿಯಲ್ಲಿ ಬಿದ್ದು ಸಾವು


    ಕಾರವಾರ: ಮೀನು ವ್ಯಾಪಾರ ಮಾಡುವ ಇಲ್ಲಿನ ಎಲ್.ಐ.ಸಿ ಆಫೀಸ್ ಹತ್ತಿರದ ಖಾರ್ವಿವಾಡ ನಿವಾಸಿ ಸುಮಿತ್ರಾ ವಿಠಲ ಮಾಳಶೇಖರ(70) ಎನ್ನುವವರು ಶಿವಾಜಿ ಸರ್ಕಲ್ ಹತ್ತಿರ ರಸ್ತೆಯನ್ನು ದಾಟಿ ಹೋಗಲು ರಸ್ತೆಯ ಎಡಬದಿಯಲ್ಲಿ ನಿಂತು ಕಾಯುತ್ತಿರುವಾಗ ಕಾಜುಭಾಗ, ಯೂನಿಟಿ ಕಾಲೋನಿ ನಿವಾಸಿ ಸಲ್ಮಾ ಎನ್ನುವವರು ತಮ್ಮ ಸ್ಕೂಟರ್‌ನಲ್ಲಿ ಬಂದು ಸುಮಿತ್ರಾ ಇವರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದಾರೆ ಎಂದು ಸಂಚಾರ ಪೊಲೀಸ್ಠಾ ಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಿತ್ರಾ ಅವರ ಪುತ್ರ ಅನೀಲ್ ವಿಠಲ ಮಾಳಶೇಖರ ದೂರು ನೀಡಿದ್ದಾರೆ.

    ಕುಡಿದ ನಶೆಯಲ್ಲಿ ಬಾವಿಯಲ್ಲಿ ಬಿದ್ದು ಸಾವು.


    ಕಾರವಾರ :ತಾಲೂಕಿನ ಕೃಷ್ಣಾಪುರ, ಕೊಳಗೆ ನಿವಾಸಿ, ಕೂಲಿ ವೃತ್ತಿಯ ರಮೇಶ ಶ್ರೀಕಾಂತ ಕೋಠಾರಕರ(57) ಎನ್ನುವವರು ಕುಡಿದ ನಶೆಯಲ್ಲಿ ಸಾರ್ವಜನಿಕ ಬಾವಿಯ ಕಟ್ಟೆಯ ಮೇಲೆ ಕುಳಿತವರು ಆಯ ತಪ್ಪಿ ಬಿದ್ದು ಮೃತ ಪಟ್ಟಿದ್ದಾರೆ. ಈ ಬಗ್ಗೆ ಮೃತರ ಸಹೋದರ ಶ್ರೀಕಾಂತ ಕೋಠಾರಕರ ಚಿತ್ತಾಕುಲಾ ಪೊಲೀಸ್
    ಉದಯ ಠಾಣೆಯಲ್ಲಿ ದೂರು ನೀಡಿದ್ದಾರೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ನವಿಲಗಾರಿನ ನಾರಾಯಣ ಹೆಗಡೆ ನಿಧನ
    ಶಿರಸಿ: ತಾಲೂಕಿನ ಹೊಸ್ತೋಟ ಗ್ರಾಮದ
    ನವಿಲಗಾರಿನ ನಾರಾಯಣ ಹೆಗಡೆ (91) ಶುಕ್ರವಾರ ರಾತ್ರಿ ನಿಧನರಾದರು. ಉತ್ತಮ ಕೃಷಿಕರಾಗಿ ಗುರುತಿಸಿಕೊಂಡಿದ್ದ ಅವರು, ಊರಿನ ಪಟೇಲರಾಗಿ ಕೂಡಾ ಕಾರ್ಯನಿರ್ವಹಿಸಿದ್ದರು. ಮೂರು ಪುತ್ರಿಯರನ್ನು, ಎಂಟು ಪುತ್ರರನ್ನು ಅಗಲಿದ್ದಾರೆ. ಗ್ರಾಮಸ್ಥರು ಸಂತಾಪ ಸೂಚಿಸಿದ್ದಾರೆ.

    ಐಐಟಿಯಲ್ಲಿ ಉನ್ನತ ವ್ಯಾಸಂಗಕ್ಕೆ ಪಾರ್ಥ ಪೈ ಆಯ್ಕೆ.

    ಭಟ್ಕಳ ಬಂದರ್ ರಸ್ತೆಯ ಮೈಸೂರ್ ಕೆಫೆ
    ನಿವಾಸಿಯಾಗಿರುವ ಪಾರ್ಥ ಪೈ, ಮುಂಬೈ ಐಐಟಿಯಲ್ಲಿ ಉನ್ನತ ವ್ಯಾಸಂಗಕ್ಕೆ ಪಟ್ಟಣದಿಂದ ಪ್ರಪ್ರಥಮವಾಗಿ ಆಯ್ಕೆ ಆಗಿದ್ದಾರೆ. ಅಂಜನಿ ಪೈ ಹಾಗೂ ಪುಂಡಲೀಕ ಪೈ ಇವರ ಸುಪುತ್ರರಾಗಿರುವ ಪಾರ್ಥ, ಸದ್ಯ ಮಂಗಳೂರಿನ ಸಿಫಲ್ ಕಾಲೇಜನಲ್ಲಿ ಕಲಿತು ಈ ವರ್ಷ ನಡೆದ ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 372ನೇ ಕ್ಯಾಟಗರಿ ಬ್ಯಾಂಕ್ ಪಡೆದಿದ್ದರು. ಅಲ್ಲದೇ ಈ ವರ್ಷ ನಡೆದ ಸಿಇಟಿ ಪರೀಕ್ಷೆಯಲ್ಲೂ ರಾಜ್ಯಕ್ಕೆ 46ನೇ ಬ್ಯಾಂಕ್ ಗಳಿಸಿದ್ದು,ಇವರ ಸಾಧನೆಗೆ ಸಮಾಜದ ಗುರು- ಹಿರಿಯರು ಆಶೀರ್ವದಿಸಿ ಅಭಿನಂದಿಸಿದ್ದಾರೆ.

    ಎಂಜಿನಿಯರಿಂಗ್ ಡಿಸೈನ್ ವಿಷಯಕ್ಕೆ ತೇಜಸ್ ಭಟ್ಟ ಆಯ್ಕೆ.

    ಪಟ್ಟಣದ ನಾಯ್ಕನಕೆರೆ ನಿವಾಸಿ ತೇಜಸ್ ಭಟ್ಟ ಐಐಟಿಯಲ್ಲಿ ಪ್ರಮುಖ ಶ್ರೇಣಿಯ ಅಂಕ ಪಡೆದು ಎಂಜಿನಿಯರಿಂಗ್ ಡಿಸೈನ್ ವಿಷಯಕ್ಕೆ ಮದ್ರಾಸ್ ಐಐಟಿಯಲ್ಲಿ(ಐದು ವರ್ಷದ ಬಿಟೆಕ್ ಎಂಡ್ ಎಂಟೆಕ್ ಇಂಟಿಗ್ರೇಟೆಡ್ ಕೋರ್ಸ್) ಪ್ರವೇಶ ಪಡೆದಿದ್ದಾನೆ. ವೈಟಿಎಸ್‌ಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ತೇಜಸ್ ಮನೆಯಲ್ಲಿಯೇ ಐಐಟಿ ಬಗ್ಗೆ ಅಧ್ಯಯನ ನಡೆಸಿ ಸಾಧನೆ ಮೆರೆದಿದ್ದಾನೆ. ಇವನು ಯಲ್ಲಾಪುರದಲ್ಲಿಯ ಪಶು ವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಸುಬ್ರಾಯ ಭಟ್ಟ ಹಾಗೂ ದೀಪಾ ಭಟ್ ಇವರ ಪುತ್ರ.

  • ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್

    ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ: ರಾಧಾ ಹಿರೇಗೌಡರ್

    ಕುಮಟಾ; ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಕನ್ನಡ ನಿಂತ ನೀರಲ್ಲ. ಅದು ನಿರಂತರ ಹರಿಯುವ ಪರಿಶುದ್ಧ ಜಲ. ತಾಯಿಯನ್ನು ಕಡೆಗಣಿಸಲು ಸಾಧ್ಯವಿಲ್ಲ ಎಂದು ಪತ್ರಕರ್ತೆ ಶ್ರೀಮತಿ ರಾಧಾ ಹಿರೇಗೌಡರ್ ಹೇಳಿದರು. ಪಟ್ಟಣದ ನಾಮಧಾರಿ ಸಭಾ ಭವನದಲ್ಲಿ ಕುಮಟಾ ಕನ್ನಡ ಸಂಘ ಆಯೋಜಿಸಿದ್ದ “ಸಂವಾದ” ಆಧುನಿಕ ಬದುಕು ಮತ್ತು ಕನ್ನಡದ ಕಡೆಗಣನೆ ಹಾಗೂ “ಗೌರವಾರ್ಪಣೆ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.


    ಭಾಷೆ, ಜಲ, ನೆಲದ ಬಗ್ಗೆ ಸ್ವಾಭಿಮಾನ ಇರಬೇಕು. ಆದಾಗ ಮಾತ್ರ ನಿರೀಕ್ಷಿತ ಪ್ರಗತಿ ಸಾಧ್ಯ.ತ್ಯಾಗದ ಹಿನ್ನಲೆಯುಳ್ಳ
    ಜಿಲ್ಲೆಯಲ್ಲಿ ಇಷ್ಟೊಂದು ಆಧುನಿಕತೆ ಬೆಳೆದರೂ ಜಿಲ್ಲೆಯಲ್ಲೊಂದು ವಿಶ್ವ ವಿಧ್ಯಾಲಯವಿಲ್ಲ. ತುರ್ತು ಜೀವ ಉಳಿಸಬೇಕೆಂದರೆ.


    ಸೂಪರ್ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆ ಇಲ್ಲ. ಜನರು ಹಲವು ವ್ರತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅರ್ಹತೆಗೆ
    ತಕ್ಕಂತೆ ವೇತನ ಪಡೆಯುತ್ತಾರೆ. ಆದರೆ ಸಾಮಾಜಿಕ ಜವಾಬ್ದಾರಿ ನಿರ್ವಹಿಸದಿದ್ದರೆ ಜನರಿಂದ ಮನ್ನಣೆ ಪಡೆಯಲು ಸಾಧ್ಯವಿಲ್ಲ ಎಂದರು.


    ಕೆಡಿಸಿಸಿ ಬ್ಯಾಂಕ ನಿರ್ದೇಶಕ ಶಿವಾನಂದ ಹೆಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕನ್ನಡದ ನಿರಂತರ ಚಟುವಟಿಕೆಗಳಿಂದ ಭಾಷೆ ಬೆಳೆಸಬಹುದು. ಕನ್ನಡವೇ ಎಲ್ಲೆಲ್ಲೂ ಹರಿದಾಡಬೇಕು. ಕನ್ನಡ ಭಾಷೆ ಕಡೆಗಣನೆ ಸಲ್ಲದು. ಕನ್ನಡ ಭಾಷೆ ಇನ್ನಷ್ಟು ಎತ್ತರಕ್ಕೆ ಬೆಳೆಸಲು ಕನ್ನಡ ಪರ ಸಂಘಟನೆಗಳು ಇನ್ನಷ್ಟು ಸಕ್ರೀಯಗೊಳ್ಳಬೇಕು. ಈ ನಿಟ್ಟಿನಲ್ಲಿ ಕುಮಟಾ ಕನ್ನಡ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದರು.


    ಬೆಳಕು ಗ್ರಾಮೀಣಾಭಿವ್ರದ್ಧಿ ಟ್ರಸ್ಟ ಅಧ್ಯಕ್ಷ ನಾಗರಾಜ ನಾಯಕ ಸೂಪರ್ ಮಲ್ಟಿ ಸ್ಪೆಷ್ಯಾಲಿಟಿ ಆಸ್ಪತ್ರೆಗೆ ನನ್ನೆಲ್ಲ
    ಸಹಕಾರವಿದೆ ಎಂದರು. ನ್ಯಾಯವಾದಿ ಆರ್ ಜಿ ನಾಯ್ಕ ಮಾತನಾಡಿ ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಆಸ್ಪತ್ರೆ ನಿರ್ಮಾಣಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಅಕ್ಟೋಬರ ತಿಂಗಳಲ್ಲಿ 15 ಸಾವಿರ ಜನರನ್ನು ಸೇರಿಸಿ ಮಾಡು ಇಲ್ಲವೆ ಮಡಿ ಹೋರಾಟ ಹಮ್ಮಿಕೊಳ್ಳಲಿವೆ ಎಂದರು.


    ಕುಮಟಾ ಕನ್ನಡ ಸಂಘದ ಅಧ್ಯಕ್ಷ ಸದಾನಂದ ದೇಶಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಆರ್ ಎನ್ ಹೆಗಡೆ ಆಶಯ
    ನುಡಿಗಳನ್ನಾಡಿದರು. ಕನ್ನಡ ರಕ್ಷಣಾ ವೇದಿಕೆ ಸ್ವಾಭಿಮಾನ ಬಳಗದ ಅಧ್ಯಕ್ಷ ರಾಜು ಮಾಸ್ತಿಹಳ್ಳ , ಕುಮಟಾ ಕನ್ನಡ
    ಸಂಘದ ಪದಾಧಿಕಾರಿಗಳು, ಸದಸ್ಯರು ಇನ್ನಿತರರು ಇದ್ದರು. ಪ್ರಶಾಂತ ಹೆಗಡೆ ಮೂಡಲಮನೆ ನಿರೂಪಿಸಿದರು. ಸಂಘದ
    ಕಾರ್ಯದರ್ಶಿ ದಯಾನಂದ ದೇಶಭಂಡಾರಿ ಸ್ವಾಗತಿಸಿದರು. ಕುಮಟಾ ಕನ್ನಡ ಸಂಘದ ಉಪಾಧ್ಯಕ್ಷ ಮಂಗಲದಾಸ ನಾಯ್ಕ, ಶ್ರೀಲಕ್ಷ್ಮಿ ಭಟ್ಟ ಸಂಗಡಿಗರು ಪ್ರಾರ್ಥಿಸಿದರು.

  • ಗುರುವಾಗಬೇಕಾದರೆ ಜ್ಞಾನ, ಕರುಣೆ ಅಗತ್ಯ: ರಾಘವೇಶ್ವರ ಶ್ರೀ

    ಗುರುವಾಗಬೇಕಾದರೆ ಜ್ಞಾನ, ಕರುಣೆ ಅಗತ್ಯ: ರಾಘವೇಶ್ವರ ಶ್ರೀ

    ಗೋಕರ್ಣ: ಗುರು ಎಂಬ ಪಂಚಾಮೃತಕ್ಕೆ ಜ್ಞಾನ ಮತ್ತು ಕರುಣೆ ಅಗತ್ಯ. ಸುಜ್ಞಾನ ಹಾಗೂ ಕಾರುಣ್ಯ ಇಲ್ಲದ ವ್ಯಕ್ತಿ ಗುರುವಾಗಲಾರ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ಹೇಳಿದರು.
    ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಕೈಗೊಂಡಿರುವ ಗುರುಕುಲ ಚಾತುರ್ಮಾಸ್ಯದ ಅಂಗವಾಗಿ ಗುರುವಾರ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು, ಮನುಷ್ಯಕೋಟಿಯಲ್ಲಿ ಗುರುಗಳಿಗೆ ಸರ್ವಶ್ರೇಷ್ಠ ಸ್ಥಾನವಿದೆ. ಜೀವಕೋಟಿಗಳಲ್ಲಿ ಮನುಷ್ಯ ಶ್ರೇಷ್ಠ, ಮನುಷ್ಯರಲ್ಲಿ ಅನೇಕ ಮಹಾತ್ಮರು ಇರುತ್ತಾರೆ. ಆದರೆ ಗುರುಗಳು ಅವರೆಲ್ಲರಿಗಿಂತ ಮೇಲು. ದೇವರಿಗಿಂತಲೂ ಗುರು ಶ್ರೇಷ್ಠ. ಎಲ್ಲ ದೇವರಲ್ಲಿರುವ ಪರಾತ್ಪರ ತತ್ವ ಗುರು ಎಂದು ಪ್ರಾಜ್ಞರು ಹೇಳಿದ್ದಾರೆ. ಗುರು ಎಂಬ ಪಂಚಾಮೃತದಲ್ಲಿ ಪ್ರಮುಖವಾಗಿ ಸುಜ್ಞಾನ ಹಾಗೂ ಕಾರುಣ್ಯ ಇರಬೇಕು. ಇವೆರಡೂ ಇರುವವರು ಗುರು ಎನಿಸಿಕೊಳ್ಳುತ್ತಾರೆ ಎಂದು ವಿಶ್ಲೇಷಿಸಿದರು.
    ಎರಡು ಮಹಾಗುಣಗಳು ಇಲ್ಲದಿದ್ದರೆ ಆತ ಗುರುವಾಗಲಾರ. ಇವಿಲ್ಲದೇ ಗುರುತ್ವ ಪೂರ್ಣವಾಗುವುದಿಲ್ಲ. ಹಸುವಿನ ಕೆಚ್ಚಲಲ್ಲಿ ಇರುವ ಹಾಲು ಕರುವಿಗೆ ದೊರಕಬೇಕಾದರೆ, ಗೋವಿಗೆ ವಾತ್ಸಲ್ಯ ಬೇಕು. ಕರುವಿನ ಬಗೆಗಿನ ವಾತ್ಸಲ್ಯದ ಭಾವ ಇದ್ದಾಗ ಮಾತ್ರ ಅದು ಹಾಲು ಸ್ರವಿಸುತ್ತದೆ. ಅಂತೆಯೇ ಗುರುವಿನ ಹೃದಯದಲ್ಲಿರುವ ಜ್ಞಾನ ಗುರುವಿನಿಂದ ಶಿಷ್ಯರೆಡೆಗೆ ಹರಿಯುವುದು ಕಾರುಣ್ಯದ ಪ್ರಭಾವದಿಂದ ಎಂದು ಹೇಳಿದರು.

    ವಾತ್ಸಲ್ಯ ಇಲ್ಲದವರು ಹೇಗೆ ತಾಯಿಯಾಗಲಾರರೋ ಹಾಗೆ ಕರುಣೆ ಇಲ್ಲದವರು ಗುರುವಾಗಲಾರರು. ಗುರುವಿಗೆ ದೇಶಿಕಾ ಎಂಬ ಹೆಸರೂ ಇದೆ. ದೇ ಎಂದರೆ ದೇವಾನುಗ್ರಹಧಾರಿ. ಶಿ ಎಂದರೆ ಶಿಷ್ಯಾನುಗ್ರಹ ಕಾರಣ. ಅಂತೆಯೇ ಕಾ ಎಂದರೆ ಶಿಷ್ಯರ ಬಗೆಗಿನ ಕಾರುಣ್ಯ. ತನ್ನಲ್ಲಿರುವ ಶುಭವನ್ನು ಶಿಷ್ಯರಿಗೆ ಹರಿಸುತ್ತಾನೆ. ಇದಕ್ಕೆ ಕರುಣೆ ಕಾರಣ. ಕರುಣೆಯೇ ಮನುಷ್ಯರೂಪ ತಾಳಿ ಗುರುವಾಗಿ ಪ್ರಕಟವಾಗುತ್ತದೆ ಎಂದು ಬಣ್ಣಿಸಿದರು.

    ಶಂಕರರು ಗುರುಶ್ರೇಷ್ಠರು. ಅವರು ಗುರುವಿನ ಮಹತ್ವವನ್ನು ಅದ್ಭುತವಾಗಿ ವಿವರಿಸಿದ್ದಾರೆ. ತೋಟಕಾಚಾರ್ಯರು ಶಂಕರರಲ್ಲಿ ತಮ್ಮನ್ನು ಉದ್ಧರಿಸುವಂತೆ ಕೋರುವಾಗ ಗುರುವನ್ನು ಕರುಣಾ ವರುಣಾಲಯ ಎಂದು ಬಣ್ಣಿಸಿದ್ದಾರೆ ಎಂದು ಉಲ್ಲೇಖಿಸಿದರು. ಶಿವ ಶಂಕರಾಚಾರ್ಯರ ಅವತಾರವೆತ್ತಿ ಭೂಮಿಗೆ ಬಂದಿರುವುದು ಕೂಡಾ ಕಾರುಣ್ಯದ ಕಾರಣದಿಂದಲೇ. ಅಜ್ಞಾನವೆಂಬ ಗಾಢಾಂಧಕಾರವನ್ನು ತೊಲಗಿಸಲು ಕರುಣೆಯಿಂದ ಶಂಕರಾಚಾರ್ಯರ ರೂಪ ತಾಳಿ ಜೀವಿಗಳನ್ನು ರಕ್ಷಿಸುವ ಸಲುವಾಗಿ ಭೂಮಿಯಲ್ಲಿ ಪ್ರಕಟವಾದರು ಎಂದು ವಿವರಿಸಿದರು.
    ಗುರು ಪರಮಾನದಂದ ಮೂರ್ತಿಯಾಗಿದ್ದರೆ, ಶಿಷ್ಯ ಸಂಸಾರ ಸಾಗರದ ದುಃಖದಲ್ಲಿ ಮುಳುಗಿದವನು. ಇಂಥ ಗುರು- ಶಿಷ್ಯರನ್ನು ಬೆಸೆಯುವುದು ಕಾರುಣ್ಯ. ಗುರುವಿನ ಕರುಣೆಯ ಹರಿವು ನಿರಂತರ. ಗುರುವಿಗೆ ಇರುವುದು ಅತಿಶಯ ಕಾರುಣ್ಯವೇ ಹೊರತು ಕಾಠಿಣ್ಯ ಅಲ್ಲ ಎಂದು ಸ್ಪಷ್ಟಪಡಿಸಿದರು.

    ಪತಂಜಲಿ ಮುನಿಗಳು ಲೋಕಕ್ಕೆ ಯೋಗವನ್ನು ಕೊಟ್ಟದ್ದು, ಜೈಮಿನಿಗಳು ಮೀಮಾಂಸ ಶಾಸ್ತ್ರವನ್ನು ನೀಡಿದ್ದು, ಬಾದರಾಯಣ ಸೂತ್ರಗಳನ್ನು ವ್ಯಾಸರು ನೀಡಿದ್ದು ಅತಿಶಯ ಕಾರುಣ್ಯದ ಕಾರಣದಿಂದ. ಜೀವಿಗಳ ಉದ್ಧಾರಕ್ಕಾಗಿ ಬುದ್ಧನವರೆಗೆ ಹಲವು ಮಂದಿ ಕರುಣೆ ಹರಿಸಿದ್ದನ್ನು ನಾವು ಕಾಣಬಹುದು ಎಂದರು.

    ಭವದ ಮರುಭೂಮಿಯಲ್ಲಿ ಮರೀಚಿಕೆ ಅರಿಸಿ ತೊಳಲಾಡುವ ಮನುಷ್ಯಕೋಟಿಯನ್ನು ಉದ್ಧರಿಸುವುದು ಗುರುಕೃಪೆಯೆಂಬ ದಿವ್ಯನದಿ ಎಂದು ಬಣ್ಣಿಸಿದರು. ಸಾಗರ ಶಾಸಕ ಹರತಾಳು ಹಾಲಪ್ಪ ಗುರುವಾರ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಕರ್ನಾಟಕ ಕಲಾಶ್ರೀ, ಗಮಕಿ ತೆಕ್ಕೆಕೆರೆ ಸುಬ್ರಹ್ಮಣ್ಯ ಭಟ್ ಅವರ ಪುರಾಣ ಪ್ರಪಂಚ- ಭಾಗ 1 ಕೃತಿಯನ್ನು ಶ್ರೀಗಳು ಈ ಸಂದರ್ಭ ಬಿಡುಗಡೆ ಮಾಡಿದರು.

    ಧಾರ್ಮಿಕ ಕಾರ್ಯಕ್ರಮಗಳಲ್ಲಿ ರುದ್ರಹವನ, ರಾಮತಾರಕ ಹವನ, ಚಂಡೀ ಪಾರಾಯಣ, ಗಣಪತಿ ಹವನ, ಕರಿಕಾನ ಪರಮೇಶ್ವರಿ ದೇವಾಲಯದ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಸಾಮವೇದ ಪಾರಾಯಣ ನಡೆಯಿತು. ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸುಳ್ಯದ ಅಕ್ಷಯ್ ಭಟ್ ಮತ್ತು ಸಂಗಡಿಗರು ಕರ್ನಾಟಕ ಸಂಗೀತ ಮತ್ತು ದಾಸರ ಪದಗಳನ್ನು ಹಾಡಿದರು.

  • ಕರಡಿ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ ಮನೆಗೆ ಕಾಗೇರಿ ಭೇಟಿ

    ಕರಡಿ ದಾಳಿಯಿಂದ ಸಾವನ್ನಪ್ಪಿದ ವ್ಯಕ್ತಿ ಮನೆಗೆ ಕಾಗೇರಿ ಭೇಟಿ

    ಶಿರಸಿ: ಆರು ದಿನಗಳ ಹಿಂದೆ ಕರಡಿ ದಾಳಿಗೆ ತುತ್ತಾಗಿದ್ದ ತಾಲೂಕಿನ ದೇವನಳ್ಳಿ ಸಮೀಪದ ಸುಂಡಳ್ಳಿಯ ಮೃತ ಓಂಕಾರ ಜೈನ್ ಅವರ ಮನೆಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ವೇಳೆ ಅರಣ್ಯ ಇಲಾಖೆಯಿಂದ ಬಿಡುಗಡೆಯಾದ 7.50 ಲಕ್ಷ ರೂ. ಪರಿಹಾರಧನದ ನೆರವಿನ ಆದೇಶ ಪ್ರತಿ ಹಸ್ತಾಂತರಿಸಿ ಕುಟುಂಬದವರಿಗೆ ಧೈರ್ಯ ತುಂಬಿದರು.

  • ಉತ್ತರಕನ್ನಡದ ಸ್ಥಳೀಯ ಸುದ್ದಿಗಳು.

    ಉತ್ತರಕನ್ನಡದ ಸ್ಥಳೀಯ ಸುದ್ದಿಗಳು.

    ಜೋಯ್ಡಾ : ತಾಲೂಕಿನ ಅವಮೋಡ್ ಬಳಿ
    ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹಳ್ಳಕ್ಕೆ ಬಿದ್ದ ಘಟನೆ ನಡೆದಿದೆ, ಕಾರಿನಲ್ಲಿ ನಾಲ್ವರು ಇದ್ದು ನಾಲ್ವರೂ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಗೋವಾದಿಂದ ಅನಮೋಡ್ ಮಾರ್ಗವಾಗಿ ರಾಮನಗರಕ್ಕೆ ತೆರಳುತ್ತಿತ್ತು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಕಾರು ಬಿದ್ದ ರೀತಿ ನೋಡಿದ್ರೆ, ಕಾರಿನಲ್ಲಿ ಇದ್ದವರು ಬದುಕಿದ್ದೆ ಪವಾಡ ಎಂಬoತಿದೆ.

    ಕಾರವಾರದಲ್ಲಿ ಓರ್ವ ಸಾವು

    ಕಾರವಾರ: ರೋಡ್ ಕ್ರಾಸ್ ಮಾಡುವ ವೇಳೆ ಬೈಕಿನ ಹಿಂಭಾಗಕ್ಕೆ ಕಾರೊಂದು ಡಿಕ್ಕಿಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಬಿಗಣಾದಲ್ಲಿ ನಡೆದಿದೆ. ಬಾಡದ ಪಾದ್ರಿಭಾಗದ ನಿವಾಸಿ ಇಜಾಕ್ ಲೂಯಿಸ್ ಫರ್ನಾಂಡೀಸ್ ಮೃತಪಟ್ಟ ಸವಾರ. ಈತ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಕೂರಿಸಿಕೊಂಡು ಅಂಕೋಲಾ ಕಡೆಗೆ ತೆರಳುತ್ತಿದ್ದಾಗ , ರೋಡ್ ಕ್ರಾಸ್ ಮಾಡುವ ವೇಳೆ, ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ.

  • ಪಿಯುಸಿ ಪರೀಕ್ಷೆ ; ಕ್ಯಾನ್ಸರ್ ಪೀಡಿತ ತಾಯಿಯ ತೀವ್ರ ಅನಾರೋಗ್ಯದ ನಡುವೆಯೂ ಅತ್ಯುತ್ತಮ ಸಾಧನೆಗೈದ ಪುತ್ರ ಕಾರ್ತಿಕ್

    ಪಿಯುಸಿ ಪರೀಕ್ಷೆ ; ಕ್ಯಾನ್ಸರ್ ಪೀಡಿತ ತಾಯಿಯ ತೀವ್ರ ಅನಾರೋಗ್ಯದ ನಡುವೆಯೂ ಅತ್ಯುತ್ತಮ ಸಾಧನೆಗೈದ ಪುತ್ರ ಕಾರ್ತಿಕ್

    ಉಡುಪಿ : ಉಡುಪಿಯ ಪ್ರತಿಷ್ಠಿತ ಎಂಜಿಎಂ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾರ್ತಿಕ್ ಶೆಣೈ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾನೆ. 584 (97.33)ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾನೆ. ಕಾರ್ತಿಕ್ ಅವರ ತಾಯಿ ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಾಂತರ ₹ ವೆಚ್ಚವಾಗಿದೆ. ಕ್ಯಾನ್ಸರ್ ಪೀಡಿತ ತಾಯಿಯ ನೋವು ಒಂದೆಡೆಯಾದರೆ, ಹಣಕಾಸಿನ ತೀವ್ರ ತೊಂದರೆ ನಡುವೆಯೂ ಇದೀಗ ಶ್ರೇಷ್ಠ ಸಾಧನೆ ಮಾಡಿರುವುದು ಗಮನಾರ್ಹ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಹಲವೆಡೆ ವರುಣನ ಅಬ್ಬರ.

    ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕಾರವಾರದಲ್ಲಿ ಬುಧವಾರ ಸಂಜೆ ಭಾರೀ ಮಳೆ ಸುರಿದಿದೆ. ಎರಡು ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿಗಳು ತುಂಬಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದ ದೃಶ್ಯ ಕಂಡುಬಂದಿದೆ. ಸಂಜೆ ವೇಳೆ ವಾಹನಗಳಿಂದ ತುಂಬಿರುತ್ತಿದ್ದ ರಸ್ತೆಗಳು ಖಾಲಿಯಾಗಿದ್ದವು. ಗ್ರಾಮೀಣ ಭಾಗದಲ್ಲಿಯೂ ಮಳೆಯಾಗಿದ್ದು, ಕೆಂಗ್ರೆ ಹೊಳೆ, ಶಾಲ್ಮಲಾ ನದಿ ಸೇರಿದಂತೆ ಎಲ್ಲ ಹಳ್ಳಕೊಳ್ಳ ಬಹುತೇಕ ಉಕ್ಕಿ ಹರಿದವು. ಭಾಳೆ ಮಳೆ ಸುರಿದರೂ ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ ಎನ್ನಲಾಗಿದೆ. ವಾರದಿಂದ ಕಡಿಮೆಯಾಗಿದ್ದ ಮಳೆ ಏಕಾಏಕಿ ಸುರಿದ ಪರಿಣಾಮ ನಾಗರಿಕರು ಕಿರಿಕಿರಿ ಅನುಭವಿಸಿದರು.

    ಕಾಲಿಗೆ ಗ್ಯಾಂಗ್ರೀನ್ ಆದವನಿಗೆ ಮಾಧವ ನಾಯಕ ನೆರವು

    ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಅಂಕೋಲಾ ತಾಲೂಕಿನ ಕೇಣಿಯ ಮಹೇಶ ತಾಂಡೇಲ್ ಇವರಿಗೆ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಇಂದು ವಾಕರ್‌ ನೀಡಿ ನೆರವಿನ ಹಸ್ತ ಚಾಚಿದ್ದಾರೆ. ಮೀನುಗಾರಿಕೆ ಸಂದರ್ಭದಲ್ಲಿ ಇವರ ಕಾಲಿಗೆ ಗಾಯವಾಗಿದ್ದು, ಇದು ಗುಣವಾಗದೇ ಗ್ಯಾಂಗ್ರೀನ್ ಆಗಿತ್ತು. ಈ ಕಾರಣಕ್ಕಾಗಿ ಇವರ ಒಂದು ಕಾಲನ್ನು ಕತ್ತರಿಸಿ ತೆಗೆಯಲಾಗಿದೆ. ಈ ಸಂದರ್ಭದಲ್ಲಿ ರಾಮಾ ನಾಯ್ಕ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಕಾಲಿಗೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದನೆಲ್ಸನ್ ಎಂಬ ಅನಾಥ ವ್ಯಕ್ತಿಗೆ ಕೂಡ ಮಾಧವ ನಾಯಕನೆರವಾಗಿದ್ದಾರೆ. ಈ ವ್ಯಕ್ತಿ ಬಡವನಾಗಿದ್ದರೂ, ಬಿಪಿಎಲ್ ಕಾರ್ಡ್ ಹೊಂದಿರಲಿಲ್ಲ. ಹೀಗಾಗಿ 4500 ಬಿಲ್ ನೀಡಲಾಗಿತ್ತು. ಆದರೆ ಈ ವ್ಯಕ್ತಿ ಬಡವನಿದ್ದು, ಅನಾಥನಾಗಿರುವ ಬಗ್ಗೆ ಮಾಧವ ನಾಯಕ ಅವರು ಕ್ರಿಮ್ಸ್‌ನ ವೈದ್ಯರ ಗಮನಕ್ಕೆ ತಂದು ಯಾವುದೇ ಹಣ ಪಡೆಯದೇ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ದೊರಕುವಂತೆ ನೋಡಿಕೊಂಡಿದ್ದಾರಲ್ಲದೇ ಆತನಿಗೆ ಶಿರಸಿಗೆ ತೆರಳಲು ಕೂಡ ಹಣಕಾಸಿನ ಸಹಾಯ ಮಾಡಿದ್ದಾರೆ.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು.

    ಉತ್ತರಕನ್ನಡದ ಪ್ರಮುಖ ಸುದ್ದಿಗಳು.

    ಕಾಲುಜಾರಿ ತೋಟದ ಬಾವಿಗೆ ಬಿದ್ದು ವ್ಯಕ್ತಿ ಸಾವು.

    ಕುಮಟಾ : ಆಕಸ್ಮಿಕವಾಗಿ ತೋಟದ ಬಾವಿಗೆ ಬಿದ್ದು ವೃದ್ದನೋರ್ವ ಮೃತಪಟ್ಟ ಘಟನೆ ಗೋಕರ್ಣದಲ್ಲಿ ಸಂಭವಿಸಿದೆ. ಗೋಕರ್ಣ ಪೊಲೀಸ್ ಠಾಣೆಯಲ್ಲಿ ಮಂಗಳವಾರ ರಾತ್ರಿ ಪ್ರಕರಣ ದಾಖಲಾಗಿದೆ. ಮೂಲತಃ ಕುಮಟಾ ತಾಲೂಕಿನ ಹಾರು ಮಾಸ್ಟೇರಿ ನಿವಾಸಿ ಪೀಟರ್‌ ಫರ್ನಾಂಡಿಸ್ ಮೃತ ವ್ಯಕ್ತಿ.

    ಈತ ತೋಟದಲ್ಲಿ ಕೃಷಿ ಕೆಲಸ ನಿರ್ವಹಿಸುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಗೋಕರ್ಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳಕ್ಕೆ ಪಿ.ಎಸ್.ಐ. ನವೀನ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಈ ಕುರಿತು ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

    ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 17 ಕೊರೊನಾ ಕೇಸ್ ಪತ್ತೆಯಾಗಿದೆ. ಅದರಂತೆ 29 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 55,706 ಕೊರೊನಾ ಕೇಸ್ ಪತ್ತೆಯಾಗಿದೆ. ಇದರಲ್ಲಿ 54,743 ಜನರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಒಟ್ಟೂ 778 ಜನರು ಮೃತಪಟ್ಟಿದ್ದು ಈವರೆಗೆ 185 ಪ್ರಕರಣ ಸಕ್ರಿಯವಾಗಿದೆ. ಇದರಲ್ಲಿ 119 ಜನರು ಹೋಮ್ ಐಸೊಲೇಶನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 66 ಜನರು ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಶೇ.0.89 ರಷ್ಟು ಕೊರೊನಾ ಪಾಸಿಟಿವಿಟಿ ಪ್ರಮಾಣ ದಾಖಲಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅದರಂತೆ ಕಳೆದ ಎರಡು ದಿನದ ಅವಧಿಯ ಮಗಳವಾರದಂದು ಶೇ.0.92 ಹಾಗೂ ಸೋಮವಾರ ಶೇ. 0.85 ರಷ್ಟು ಪಾಸಿಟಿವಿಟಿ ದಾಖಲಾಗಿತ್ತು.

  • ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಉತ್ತರಕನ್ನಡದ ಪ್ರಮುಖ ಸುದ್ದಿಗಳು

    ಕಾಳಿಂಗ ನಾವಡ ಪ್ರಶಸ್ತಿಗೆ ಮದ್ದಳೆ ಕಲಾವಿದ ಶಂಕರ ಭಾಗವತ ಆಯ್ಕೆ

    ಯಲ್ಲಾಪುರದ ಕಲಾ ಕದಂಬ ಆರ್ಟ್ ಸೆಂಟರ್ ಸಂಸ್ಥೆಯು 11 ವರ್ಷಗಳಿಂದ ಯಕ್ಷಲೋಕದ ಹಿಮ್ಮೇಳ ಕಲಾವಿದರಿರೆ ನೀಡುವ ಕಾಳಿಂಗ ನಾವಡ ಪ್ರಶಸ್ತಿಗೆ ಮದ್ದಳೆ ಕಲಾವಿದ, ಯಲ್ಲಾಪುರದ ಶಂಕರ ಭಾಗವತ ಆಯ್ಕೆಯಾಗಿದ್ದಾರೆ. ಅಂಬರೀಷ್ ಭಟ್, ದೇವರಾಜ ಕರಬ, ವಿಶ್ವನಾಥ ಉರಾಳ, ಮಮತಾ ಆರ್. ಕೆ. , ಮುರಳೀಧರ ನಾವಡ ಅವರ ಉಪಸ್ಥಿತಿಯಲ್ಲಿ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ರೂ. 10 ಸಾವಿರ ನಗದು ಹಾಗೂ ಬೆಳ್ಳಿತಟ್ಟೆ ಒಳಗೊಂಡಿದೆ.

    ಶ್ರೀಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗ ಸ್ಪರ್ಶ ದರ್ಶನ ಪುನಃ ಆರಂಭ

    ಕೋವಿಡ್ ಸೋಂಕು ಹರಡುವ ಭೀತಿಯಿಂದ ಪುರಾಣ ಪ್ರಸಿದ್ಧ ಇಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿ ಕಳೆದ ಆರು ತಿಂಗಳ ಹಿಂದೆ ಆತ್ಮಲಿಂಗ ಸ್ಪರ್ಶ ದರ್ಶನ‌‌ ನಿಲ್ಲಿಸಲಾಗಿತ್ತು. ಇದೀಗ ಶ್ರೀಕ್ಷೇತ್ರ ಗೋಕರ್ಣದಲ್ಲಿ ಆತ್ಮಲಿಂಗ ಸ್ಪರ್ಶ ದರ್ಶನ ಪುನಃ ಆರಂಭ ಮಾಡಲಾಗಿದೆ. ಹೀಗಾಗಿ ಇದೀಗ ಪ್ರವಾಸಿಗರ ಆಗಮನವೂ ಹೆಚ್ಚತೊಡಗಿದೆ. ರಾಜ್ಯದ ವಿವಿಧೆಡೆ ಮತ್ತು ಹೊರ ರಾಜ್ಯದಿಂದ ಸಹ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ, ದೇವರ ದರ್ಶನ ಪಡೆದಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲನೆ ಕಡ್ಡಾಯ ಮಾಡಲಾಗಿದೆ.

    ಕಾರಿನ ಚಕ್ರ ಸ್ಫೋಟ : ಗೋಕರ್ಣದ ಮೇಲಿನಕೇರಿ ಬಳಿ ಘಟನೆ

    ಚಲಿಸುತ್ತಿದ್ದ ಕಾರಿನ ಚಕ್ರ ಸ್ಫೋಟಗೊಂಡ ಘಟನೆ ಗೋಕರ್ಣದ ಮೇಲಿನಕೇರಿಯ ಆಚಾರಿ ಕಟ್ಟೆ ಬಳಿ ಇಂದು ನಡೆದಿದೆ. ಹಾಸನ ಮೂಲದ ಪ್ರವಾಸಿಗರ ವಾಹನ ಇದಾಗಿದ್ದು, ಕಾರಿನ ಚಾಲಕನಿಗೆ ಚಿಕ್ಕಪುಟ್ಟ ಗಾಯಗಳಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಸದಾ ವಾಹನ ಸಂಚಾರವಿರುವ ಈ ರಸ್ತೆಯಲ್ಲಿ ಈ ಅವಘಡ ನಡೆದಿದ್ದು, ಅದಷ್ಟವಶಾತ್ ಯಾರಿಗೂ ಯಾವುದೇ ಅಪಾಯವಾಗಿಲ್ಲ.