FB IMG 1496813182689

ಲೇಖಕರು :- ರಾಮಪ್ರಸಾದ ಜೋಶಿ

ಈ ಬದುಕಿನ ಪಯಣವೇ ಹಾಗೆ.. ಹೇಗೆ ಬಂದೆ,ಯಾಕಾಗಿ ಬಂದೆ, ಯಾರಿಗಾಗಿ ಬಂದೆ ಎಂಬುದು ರಹಸ್ಯವಾಗಿಯೇ ಇರುತ್ತದೆ. ಇವರು ನಮ್ಮವರು ಎಂದು ತಿಳಿದು ವ್ಯವಹರಿಸಿದ ಮರು ಘಳಿಗೆಯೇ ನಮ್ಮವರು ಇವರಲ್ಲ ಎಂದೆನಿಸಲೂ ಬಹುದು. ಇವರ ಹಂಗು ನಮಗೇನು ಎಂದಾಲೋಚಿಸಿದರೆ ಅವರೇ ನಮಗೆ ಅತ್ಯವಷ್ಯ ಎಂಬ ಪರಿಸ್ಥಿತಿಯೂ ಎದುರಾಗಬಹುದು.
ವಸ್ತುಗಳ ವಿಚಾರದಲ್ಲೂ ಹಾಗೆಯೇ ತೃಪ್ತರಲ್ಲ ನಾವು. ನಮಗೆ ಸಿಕ್ಕಿದ್ದರಲ್ಲಿ, ನಮ್ಮ ಬಳಿ ಇರುವುದರಲ್ಲಿ ನಮಗೆ ಸಮಾಧಾನ ಬಹಳ ಕಡಿಮೆ. ಅವರ ಬಳಿ ಇರುವುದು ನಮ್ಮಲ್ಲಿ ಇರಬಹುದಿತ್ತು ಎನ್ನುತ್ತಾ ಕೊರಗುವ ಮನೋಭಾವವೇ ಹೆಚ್ವು.
ಯವುದೂ ಶಾಶ್ವತವಲ್ಲಬೆಂಬುದು ತಿಳಿದಿದ್ದರೂ ಮಕ್ಕಳಿಗಾಗಿ, ಅವರ ಮಕ್ಕಳಿಗಾಗಿ ದುಡಿದೂ ದುಡಿದೂ ಸಂಗೃಹಿಸುತ್ತೇವೆ,ಬಚ್ಚಿಡುತ್ತೇವೆ.
ಒಟ್ಟಿನಲ್ಲಿ
ಎಲ್ಲಾ ನಂದೇ ನಂದೇ ನಂದೇ ಎನ್ನುತ್ತಾ ಕೊನೆಗೆ ಎಲ್ಲಾ ನಂದೇ? ಎನ್ನುವಲ್ಲಿಗೆ ಮುಗಿದಿರುತ್ತದೆ ನಮ್ಮ ಪಯಣ..
ಜನನವಾಗೆ ಮರಣ ನಿಶ್ಛಿತ
ನಡುವೆ ತಿಳಿಯೆ ಯಾವುದು ಹಿತ…
ಹಾಗಾಗಿಯೇ ನಮ್ಮದೆಲ್ಲ
ಪುನರಪಿ ಜನನಂ ಪುನರಪಿ ಮರಣಮ್….

RELATED ARTICLES  ರಾಜ್ಯ ಪ್ರಶಸ್ತಿ ಪುರಸ್ಕೃತ ಗಾಯಕ ಉಮೇಶಮುಂಡಳ್ಳಿ ಸಂಯೋಜನೆಯಲ್ಲಿನ ಕಂಚಿನ ದುರ್ಗಾಪರಮೇಶ್ವರಿ ಅಮ್ಮನವರ ಭಕ್ತಿ ಗೀತೆ ಧ್ವನಿಸುರುಳಿ ಬಿಡುಗಡೆ