Home Article ಮತ್ತೊಮ್ಮೆ ಅನಂತಕುಮಾರ ಹೆಗಡೆಯೇ ಅಭ್ಯರ್ಥಿ ?

ಮತ್ತೊಮ್ಮೆ ಅನಂತಕುಮಾರ ಹೆಗಡೆಯೇ ಅಭ್ಯರ್ಥಿ ?


ಆರು ಬಾರಿ ಗೆದ್ದು ಬೀಗಿದ ಗೆಲುವಿನ ಸರದಾರ
ಚುನಾವಣಾ ಕಣದಲ್ಲಿ ಎದುರಾಳಿಯ ಅರ್ಧ ಶಕ್ತಿ ಹೀರಬಲ್ಲ ಅನಂತಕುಮಾರ ಹೆಗಡೆ ಅವರ‌ನ್ನೇ ಮತ್ತೊಮ್ಮೆ ಕಣಕಕಿಳಿಸಲು ಬಿಜೆಪಿ ಹೈ ಕಮಾಂಡ ಯೋಚಿಸಿದ್ದು
ಈಗಾಗಲೇ ಮಂಡ್ಯ ಮೈಸೂರು,ಶಿವಮೊಗ್ಗಾದಲ್ಲಿ ಆಗಿರುವ ಗೊಂದಲಕ್ಕೆ ಶಮನ ಹಾಡಲು ಹೆಣಗಾಡಬೇಕಾದ ಹಿನ್ನೆಲೆಯಲ್ಲಿ ಮತ್ತೆ ಉತ್ತರಕನ್ನಡದಲ್ಲೂ ಗೊಂದಲ ಆಗದಂತೆ ಅನಂತಕುಮಾರ ಹೆಗಡೆಯವರಿಗೆ ಮತ್ತೊಂದು ಅವಕಾಶ ನೀಡಲಿದ್ದಾರೆ ಎಂದು‌ ಬಲ್ಲ ಮೂಲಗಳು ತಿಳಿಸಿವೆ.
ಕಿತ್ತೂರು ಖಾನಪುರ ಕಡೆಯವರನ್ನು ಕಾಂಗ್ರೆಸ್ ಅಭ್ಯರ್ಥಿ ಮಾಡಿರುವುದರಿಂದ ಅಲ್ಲಿಯ ಮತಗಳನ್ನು ಅದು ಪಡೆಯದಂತೆ ತಡೆಯಲು ಆ ಭಾಗದಲ್ಲಿ ಜನಪ್ರಿಯತೆ ಉಳಿಸಿಕೊಂಡಿರುವ ಅನಂತಕುಮಾರ್ ಹೆಗಡೆಯವರಿಗೆ ಕೆಲವು ಕಿವಿಮಾತು ಹೇಳಿ ಪಕ್ಷ ಮತ್ತೊಂದು ಅವಕಾಶ ನೀಡಲಿದೆ ಎನ್ನಲಾಗಿದೆ.


ಕೇವಲ 27 ನೆಯ ವಯಸ್ಸಿನಲ್ಲಿ ಕಾಂಗ್ರೆಸ್ ಭದ್ರಕೋಟೆ ಎನಿಸಿದ ಕೆನರಾಕ್ಷೇತ್ರದಲ್ಲಿ ಘಟಾನು ಘಟಿಗಳನ್ನು ಮಣಿಸಿದ ಸತತ ಗೆಲುವಿನ ರುವಾರಿ ಅನಂತಕುಮಾರ್ ಹೆಗಡೆಯವರಿಗೆ ಅವಕಾಶ ನೀಡಿದಲ್ಲಿ ಗೆಲುವು ಅನಾಯಾಸ ಎಂದೇ ಹೈಕಮಾಂಡ್ ಭಾವಿಸಿದೆ ಮೊನ್ನೆಯ ತನಕವೂ ಬೇರೆ ಅಭ್ಯರ್ಥಿಯ ಬಗ್ಗೆ ಆಲೋಚನೆ ನಡೆಸಿದ್ದ ಪಕ್ಷಕ್ಕೆ ಕರಾವಳಿಯ ಎರಡು ಸ್ಥಾನಗಳನ್ನು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ನೀಡಿದ್ದರಿಂದ ಸಮೀಕರಣ ಬದಲಿಸಲಾಗಿದೆ ಎನ್ನಲಾಗಿದೆ
ಹಿಂದುತ್ವದ ಫೈಯರ್ ಬ್ರಾಂಡ್ ಚಕ್ರವರ್ತಿ ಸುಲೇಬೆಲಿ ಅವರ ಹೆಸರೂ ಕೂಡ ಚರ್ಚೆಗೆ ಬಂದು ಇನ್ನೇನು ಅಂತಿಮ ಆಗಿದೆ ಎನ್ನುವ ಘಳಿಗೆಯಲ್ಲಿ ಸಂಘಪರಿವಾರದವರು
ಮನ ಬದಲಾಯಿಸಿ ಹೆಗಡೆ ಅವರ ಪರ ಮೃದು ಧೋರಣೆ ಹೊಂದಿದರು ಎಂದು ರಾಜಕೀಯ ವಲಯದಲ್ಲಿ ಸುದ್ದಿ ಹರಿದಾಡುತ್ತಿದೆ.