ಅಕ್ಷರರೂಪ : ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.

. ‘It is the darkest hour that produces dawn’ ಎಂಬಂತೆ ಯಶದ ಮಾರ್ಗ ಸಂಕಟದ ಕಂದಕದಿಂದಲೇ ಸಾಗಿರುತ್ತದೆ.

(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಮೂರನೆಯ ಭಾಗ)

ಶ್ರೀಸಮರ್ಥರ ಮನಸ್ಸಿನಲ್ಲಿ ಮಾತ್ರ ನನ್ನನ್ನು ಈ ವರ್ಷ ಅಜ್ಞಾತವಾಗಿಡುವದೇ ಇತ್ತು. ‘ದೇವರ ಇಚ್ಛೆಯಂತೆ ವರ್ತಿಸಬೇಕು| ದೇವರುಮಾಡಿದ್ದನ್ನು ಒಪ್ಪಿಕೊಳ್ಳಬೇಕು||’ ಇದರಲ್ಲೇ ಅವರಿಗೆ ಸಂತೋಷವಾಗುತ್ತಿದ್ದರೆ, ಅವರ ಸಂತೋಷವನ್ನೇ ಇಚ್ಛಿಸುವ ನನಗೆ ಈ ಅಜ್ಞಾತವಾಸದ ಸೇವೆಯಲ್ಲಿ ಕೂಡ ಆ ದೊಡ್ಡ ಉತ್ಸವದಷ್ಟೇ ಆನಂದವಾಗುತ್ತಿದೆ. ಅದೇ ಸಮಾಧಾನ. ಈ ಸಲ ಒಂದಾನುವೇಳೆ ಬೇರೆ ಯಾವುದಾದರೂ ಭಕ್ತರ ಕಡೆಯಿಂದ ಸೇವೆ ಮಾಡಿಸಿಕೊಳ್ಳಬೇಕೆಂದು ಬಂದಿದ್ದರೆ, ಅವರಿಗೆ ಲಭಿಸುವ ಈ ಸಂಧಿ, ಅಪಸ್ವಾರ್ಥದಿಂದ ಹಟ ಹಿಡಿದು ನಾನು ಯಾಕೆ ತಪ್ಪಿಸಬೇಕು? ದೇವರ ಇಚ್ಛೆಯಂತೆ ವರ್ತಿಸಬೇಕು.

‘ದೇವರಿಗೆ ಯಾರು ಪ್ರಿಯವೋ| ನಾವು ಹಾಗೇ ವರ್ತಿಸಬೇಕು||’
‘ಈ ಜಗದಲಿ ಒಬ್ಬರಿಗಿಂತ ಒಬ್ಬರು ಹೆಚ್ಚು| ತಾನೆ ದೊಡ್ಡವನೆಂದು ಮೆರೆಯಬೇಡ||’
ರಾಮಜೋಷಿಗಳ ಈ ಸಿಡಿಮದ್ದಿನ ಚುಟುಕು ನೆನಪಾಯಿತು.

RELATED ARTICLES  ನಾನು ಎಲ್ಲರ ಪರಿಪೂರ್ಣರೂಪನಾಗಿದ್ದೇನೆ. ಹೀಗಿರುವಾಗ, ಇದೆಲ್ಲದರಲ್ಲಿ ನನಗೆಲ್ಲಿಯ ಚಿಂತೆ?

‘ನಿನ್ನ ಜನ ಬಹು ಅನೇಕ| ಆದರೂ ನನಗೆ ನೀನೊಬ್ಬನೇ ತಿಳಿದಿರು||’ ನಿಜವಾಗಿಯೂ ಹೀಗೇ ಇದ್ದಾಗಲೂ, ನಮ್ಮ ಹೃದಯವನ್ನು ಶ್ರೀಸಮರ್ಥರಿಗೆ ಕಿತ್ತು ತೋರಿಸಬೇಕು ಎಂದೆನಿಸುತ್ತದೆ.

‘ಅಸಂಖ್ಯ ಭಕ್ತರು ನಿಮಗೆ| ನಮ್ಮನ್ನಾರು ಕೇಳುವರಯ್ಯಾ| ನನ್ನ ಶ್ರದ್ಧೆ ದೃಢಗೊಳಿಸಯ್ಯಾ| ಬುದ್ಧಿ ಕೊಟ್ಟು ರಘುನಾಯಕಾ||’
ಎಂದು ಸಮರ್ಥಚರಣಗಳಲ್ಲಿ ಅನನ್ಯಭಾವದಿಂದ ಪ್ರಾರ್ಥನೆ ಮಾಡಬೇಕೆಂದು ಅನಿಸುತ್ತಿದೆ. ಉದ್ದವಾಗಿರುವ ನನ್ನ ದೀನವಾಣಿಯ ಈ ಗದ್ಗದಿತ ಗಂಟಲ ಕೂಗು ಅವರ ಕಿವಿಯ ವರೆಗೆ ಮುಟ್ಟದೇ ಹೋದಲ್ಲಿ, ನೀವು ಅವರ ಹತ್ತಿರವೇ ಇದ್ದವರು ನನ್ನ ಮೇಲಿನ ಅಭಿಮಾನದಿಂದ ನನ್ನ ಕರುಣಾಜನಕ ಸ್ಥಿತಿಯನ್ನು ಕಾಕುಲತೆಯಿಂದ ಅವರಿಗೆ ತಿಳಿಸಿರಿ. ಆದರೂ, ‘Iಣ is ಣhe ಜಚಿಡಿಞesಣ houಡಿ ಣhಚಿಣ ಠಿಡಿoಜuಛಿes ಜಚಿತಿಟಿ’ ಎಂಬಂತೆ ಯಶದ ಮಾರ್ಗ ಸಂಕಟದ ಕಂದಕದಿಂದಲೇ ಸಾಗಿರುತ್ತದೆ. ‘ಶ್ರೇಯಾಂಸಿ ಬಹು ವಿಘ್ನಾನಿ’. ಒಳ್ಳೆಯ ಕಾರ್ಯಕ್ಕೆ ಸಾವಿರ ವಿಘ್ನ.

RELATED ARTICLES  ಕಳೆದು ಹೋದ ಎಳೆಯ ದಿನಗಳು ಭಾಗ ೨೨

‘ಜೋ ಲೋಕಕಲ್ಯಾಣ| ಸಾಧವಯಾ ಜಾಣ| ಘೇಯೀ ಕರೀ ಪ್ರಾಣ| ತ್ಯಾ ಸೌಖ್ಯ ಕೈಂಚೇ|’
‘ವಿಘ್ನೈಃ ಪುನಃ ಪುನರಪಿ ಪ್ರತಿಹನ್ಯಮಾನಃ| ಪ್ರಾರಬ್ಧಮುತ್ತಮಜನಾಃ ನ ಪರಿತ್ಯಜಂತಿ||’ ಧೀರರಿಗೆ ವಿಘ್ನವೇ ಯಶೋಮಂದಿರದ ಮೆಟ್ಟಲುಗಳು. ಯಾರು ಹೆಚ್ಚು ವಿಘ್ನಗಳನ್ನು ಎದುರಿಸಿ ಮುಂದೆ ಹೋಗಿದ್ದಾನೋ ಅಷ್ಟು ಅವನು ಹೆಚ್ಚು ಸಮರ್ಥನಾಗುತ್ತಾನೆ.

‘ದುಃಖದ ಕೊನೆಗೆ ಸುಖ| ಇದೇ ನಿಯಮ||’
ಬಂಗಾರ ಹೇಗೆ ದಾಹನ,ತಾಡನ, ಛೇದನಗಳಿಂದ ಮಿರುಗುತ್ತದೆಯೋ, ಅದೇ ರೀತಿ, ದುಃಖ, ಅಪಮಾನ, ಸಂಕಟಗಳಿಂದ ತೇಜಸ್ವೀ ಜನರ ತೇಜಸ್ಸು ಅಧಿಕ ಉಜ್ವಲವಾಗುತ್ತದೆ. ಚೆಂಡನ್ನು ಎಷ್ಟು ಜೋರಾಗಿ ನೆಲದ ಮೇಲೆ ಎಸೆಯುತ್ತೀರೋ ಅಷ್ಟೇ ಜೋರಾಗಿ ಅದು ಮೇಲೇಳುತ್ತದೆ. ಮನುಷ್ಯನು ಯಾವಾಗಲೂ ಉಚ್ಚ ಭಾವನೆಯನ್ನು ಪಾಲಿಸಬೇಕು.

‘ಚಢತಾ ಅರ್ಥ ಲಾಗಲಾ| ತರೀ ಚಢತಸೀ ಗೇಲಾ| ಉತರತ್ಯಾ ಅರ್ಥೇ ಉತರಲಾ| ಭೂಮಂಡಳೀ||’
(ಈ ಪತ್ರದ ನಾಲ್ಕನೆಯ ಭಾಗ ಮುಂದುವರಿಯುವದು)