ಯಾರಿಂದ ಉತ್ಕೃಷ್ಟ ಕಾರ್ಯ ಆಗಬೇಕೆಂದಿರುವದೋ ಅವರನ್ನೇ ದೇವರು ಅನೇಕ ಸಂಕಟಗಳಿಗೆ ಒಡ್ಡುತ್ತಾನೆ. ಅನೇಕ ದುಃಖ ಸಂಕಟಗಳನ್ನು ಎದುರಿಸಿದವನೇ ಉತ್ತಮ, ಕಾರ್ಯಕ್ಷಮ ಮತ್ತು ತೇಜಸ್ವೀ ಪುರುಷನಾಗುತ್ತಾನೆ. ನಿಸರ್ಗಧರ್ಮವೇ ಹೀಗೆ.

(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ನಾಲ್ಕನೆಯ ಭಾಗ)

ಈಶ್ವರ ಸರ್ವಜ್ಞ ಮತ್ತು ಕೃಪಾಳು. ಅವನು ಯಾರಿಗೂ ಅಹಿತ ಮಾಡುವದಿಲ್ಲ.
‘ದೇವಭಕ್ತರನದಾರು ವಧಿಪರು| ಅದನಾರು ನೋಡಿಲ್ಲ ಕೇಳಿಲ್ಲ| ಶರಣಾಗತರಿಗೆ ದೇವರಕ್ಷಣೆ| ವಜ್ರಮುಷ್ಟಿಯದು||’
ಬೀಜ ಭೂಮಿಯನ್ನು ಒಡೆದೇ ಅಂಕುರಿಸುತ್ತದೆ. ಪ್ರಸವ ವೇದನೆಯ ಕೊನೆಗೇ ಪುತ್ರನ ಮುಖ ಕಣ್ಣಿಗೆ ಬೀಳುತ್ತದೆ.
‘ಯಾರ ಪಾಲಿಗೆ ಮಹಾನತೆಯೋ| ಅವರ ಯಾತನೆಯೂ ಅಷ್ಟೇ ಕಠಿಣ|’
‘ಯಾರು ಅನೇಕ ದುಃಖ ಸಹಿಸಿದರೋ| ಅವರೇ ಭಾಗ್ಯವನ್ನು ಭೋಗಿಸಿದರು|’
‘ಉಳಿಯ ಪೆಟ್ಟು ತಿಂದ ಹೊರತು ದೇವತಾಮೂರ್ತಿಯಾಗುವದಿಲ್ಲ.’
‘ಬೆದೆಯಲಿಟ್ಟ ಮಾವೇ ಚೆನ್ನಾಗಿ ಹಣ್ಣಾಗುತ್ತದೆ.’

RELATED ARTICLES  ಮಾನವನ ನಿಜ ಸುಖ ಮತ್ತು ಸನಾತನ ಧರ್ಮ.

ಯಾರಿಂದ ಉತ್ಕೃಷ್ಟ ಕಾರ್ಯ ಆಗಬೇಕೆಂದಿರುವದೋ ಅವರನ್ನೇ ದೇವರು ಅನೇಕ ಸಂಕಟಗಳಿಗೆ ಒಡ್ಡುತ್ತಾನೆ. ಅನೇಕ ದುಃಖ ಸಂಕಟಗಳನ್ನು ಎದುರಿಸಿದವನೇ ಉತ್ತಮ, ಕಾರ್ಯಕ್ಷಮ ಮತ್ತು ತೇಜಸ್ವೀ ಪುರುಷನಾಗುತ್ತಾನೆ. ನಿಸರ್ಗಧರ್ಮವೇ ಹೀಗೆ. ಅದರ ಬಗ್ಗೆ ದೇವರ ಮೇಲೆ ದೋಷಾರಣೆ ಮಾಡುವದು ಅಥವಾ ದೇವರು ನಿಷ್ಟುರ ಎಂದುಕೊಳ್ಳುವದು, ಅಂದರೆ ನಾವಾಗಿಯೇ ನಮ್ಮ ಹಿತ ಕೆಡಿಸಿಕೊಂಡಂತೆಯೇ. ಎಷ್ಟು ಕಠಿಣ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೀರೋ ಅಷ್ಟಷ್ಟು ಆತನು ಯೋಗ್ಯನೆನಿಸಿಕೊಳ್ಳುತ್ತಾನೆ.
ನನ್ನ ಬಗ್ಗೆ ಬೇಸರಪಟ್ಟುಕೊಳ್ಳಬೇಡಿರಿ.

ಆಗುವದೆಲ್ಲ ಒಳ್ಳೆಯದಕ್ಕೇ. ಇದರಲ್ಲಿ ಈಶ್ವರನ ಸದುದ್ದೇಶವಿದೆ. ನಮಗೆ ಈಗ ಅದರ ಯಥಾರ್ಥಸ್ವರೂಪ ಕಣ್ಣಿಗೆ ಕಾಣದೇ ಹೋದರೂ ಮುಂದೆ ಒಂದು ವಿಶ್ವಕಲ್ಯಾಣದ ಮಂಗಲ ದಿವಸ ಉದ್ಭವಿಸುವದು ಮತ್ತು ಆಗ ಇದರಲ್ಲಿನ ಈಶ್ವರೀ ಸದ್ಹೇತು ಮೊಳಕೆಯೊಡೆಯುತ್ತಿರುವದು ನಿಮ್ಮ ನಿದರ್ಶನಕ್ಕೆ ಬರುವದು.

RELATED ARTICLES  ಕಪ್ಪು ಚುಕ್ಕೆ

ಚೈತ್ರ-ವೈಶಾಖದ ಪ್ರಖರ ಬಿಸಿಲಿನಲ್ಲಿ, ರಸ್ತೆ ಕಾಣುವದಿಲ್ಲವೆಂದು ದೀಪದ ಬೆಳಕಿನ ಅಪೇಕ್ಷೆ ಮಾಡುವಂತೆ, ಶ್ರೀಸಮರ್ಥರ ಪ್ರತ್ಯಕ್ಷ ಸಾನಿಧ್ಯದಲ್ಲಿದ್ದು ನಾನು ಬರದಿದ್ದರಿಂದ ಹೇಗಾಗಬಹುದು ಎಂದು ಚಿಂತೆ ಮಾಡುತ್ತಾ ಕೈಕಾಲು ಕಳೆದುಕೊಂಡು ಕುಳಿತು ಕೊಳ್ಳಬೇಡಿ. ಹೆಚ್ಚಿನ ಉತ್ಸಾಹದಿಂದ ಕಾರ್ಯೋನ್ಮುಖರಾಗಿರಿ. ‘ಮುಂದೆ ಇನ್ನೂ ದೇವರ ವೈಭವ ಹೆಚ್ಚಿಸೋಣ’ ಎಂಬ ಛಲವಿರಬೇಕು. ನಾನು ಬಂದದ್ದರಿಂದ ಆದ ಉತ್ಸವಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಈ ಸಲದ ಉತ್ಸವ ಎಲ್ಲ ದೃಷ್ಟಿಯಿಂದಲೂ ಉತ್ಕೃಷ್ಟವಾಯಿತು ಎಂಬ ಸುದ್ದಿ ನನ್ನ ಕಿವಿಗೆ ಬಿದ್ದು ಎಲ್ಲಾದರೂ ನನ್ನಲ್ಲಿ ಅಡಗಿ ಕುಳಿತ ಅಹಂಕಾರ ಕರಗಿ ಹೋಗಬೇಕು ಎಂದು ನಾನು ಶ್ರೀಚರಣದಲ್ಲಿ ಪ್ರಾರ್ಥನೆ ಮಾಡುತ್ತೇನೆ. ಅಹಂಕಾರವಿಲ್ಲದಿದ್ದರೆ ಒಳ್ಳೆಯದೇ ಆಯಿತು.

(ಈ ಪತ್ರದ ಐದನೆಯ ಭಾಗ ಮುಂದುವರಿಯುವದು)