ಗೋರಕ್ಷನು ನಾನಕರನ್ನುದ್ದೇಶಿಸಿ ‘ನೀವು ನನಗೆ ಪಿತೃಸ್ಥಾನದಲ್ಲಿದ್ದೀರಿ’ ಎಂದಾಗ ‘ ನೀನು ಈ ಮಾತನ್ನು ನನ್ನ ಹೊಟ್ಟೆಯಲ್ಲಿ ಹುಟ್ಟಿ ನಿಜವಾಗಿಸು’ ಎಂದು ನಾನಕರು ಹೇಳಿದರು ಮತ್ತು ಅದರಂತೆ ಗೋರಕ್ಷನಾಥರು ನಾನಕರ ಮಗನಾಗಿ ಜನ್ಮತಾಳಿದರು.

(ಇಸವಿ ಸನ ೧೯೫೦ರ ಸುಮಾರಿಗೆ ಶ್ರೀಸಮರ್ಥ ಸೇವಾ ಮಂಡಳ, ಸಜ್ಜನಗಡಕ್ಕೆ ಬರೆದ ಪತ್ರದ ಐದನೆಯ ಭಾಗ)

ಅಶ್ವಿನ ಶುದ್ಧ ಸಪ್ತಮಿಯಿಂದ ಮೌನವೃತ ಪ್ರಾರಂಭವಾಗಿದೆ. ಚೈತ್ರ ಶುದ್ಧ ಸಪ್ತಮಿಯ ವರೆಗೆ ಇದೆ. ಹಿಮಾಲಯದ ಒಂದು ಪ್ರಸಿದ್ಧ ಕ್ಷೇತ್ರದಲ್ಲಿ ನಾನಿದ್ದೇನೆ. ದೇವರ ಕೃಪೆಯಿಂದ ನನಗೆ ಉಳಿದುಕೊಳ್ಳಲು ಒಬ್ಬರ ಮನೆಯೇ ಸಿಕ್ಕಿದೆ. ಎಲ್ಲ ಸೌಲಭ್ಯ ಇಲ್ಲಿದೆ. ಬಾಗಿಲ ಹೊರಗೆ ಯಾವುದೇ ಕಾರಣಕ್ಕೂ ಹೋಗುವ ಅವಶ್ಯಕತೆ ಬೀಳುವದಿಲ್ಲ. ಶೌಚಾದಿಗಳದ್ದೂ ಉತ್ತಮ ವ್ಯವಸ್ಥೆ ಇದೆ. ಮಳೆಯಲ್ಲೂ ಮಳೆಹನಿ ಹೆಚ್ಚಾಗಿ ತಾಗದಂತೆ ಶೌಚಕ್ಕೆ ಹೋಗಿಬರಬಹುದು. ನನಗೆ ಬಾಗಿಲು ಹೊರಗೆ ಹೋಗುವ ಯಾವುದೇ ಕೆಲಸವಿಲ್ಲ.

RELATED ARTICLES  ಮಣ್ಣಿನ ಗುಣದಂತೆ ಮನಸ್ಸಿದ್ದರೆ?

ಪರ್ವತ ಶಿಖರಗಳು ಬರ್ಫಾಚ್ಛಾದಿತವಾಗಿ ಕಾಣುತ್ತಿದ್ದರೂ ಇಲ್ಲಿ ನಾನು ಬಂದಾಗಿನಿಂದ ನೆಲದ ಮೇಲೆ ಬರ್ಫ ಬಿದ್ದಿಲ್ಲ. ಚಳಿಯೂ ಸಹ್ಯವಾಗಿದೆ. ಬೇಕಾದಷ್ಟು ಹೊದೆಯಲು ವಸ್ತ್ರಗಳೂ ಇವೆ. ವೆಚ್ಚಕ್ಕೂ ಏನೂ ಕೊರತೆಯಿಲ್ಲ. ಇಲ್ಲಿಯ ವ್ಯವಸ್ಥೆಯೂ ಉತ್ಕೃಷ್ಟವಾಗಿದೆ. ಏನೂ ಚಿಂತೆಯಿಲ್ಲ. ಇಲ್ಲಿ ಒಂದು ದೊಡ್ಡ ಆಶ್ರಮದಲ್ಲಿ ಶ್ರೀಚಂದಾರ ದೇವಸ್ಥಾನವಿದೆ. ಇವರು ನಾನಕರ ಜ್ಯೇಷ್ಠ ಪುತ್ರ. ಇವರೇ ಉದಾಸಿ ಸಂಪ್ರದಾಯದ ಆದ್ಯಪ್ರವರ್ತಕರು. ಅವರನ್ನು ಗೋರಕ್ಷನಾಥರ ಅವತಾರವೆಂದು ನಂಬುತ್ತಾರೆ. ಎಲ್ಲೋ ಹಿಮಾಲಯದಲ್ಲೊಂದು ಕಡೆ ನಾನಕರ ಮತ್ತು ಗೋರಖರ ಭೆಟ್ಟಿಯಾಗಿ, ಯೋಗಾನುಭವದ ವಿಷಯದಲ್ಲಿ ಇಬ್ಬರಲ್ಲೂ ಚರ್ಚೆಯಾಯಿತು. ಆ ಸಂದರ್ಭದಲ್ಲಿ, ಗೋರಕ್ಷನು ನಾನಕರನ್ನುದ್ದೇಶಿಸಿ ‘ನೀವು ನನಗೆ ಪಿತೃಸ್ಥಾನದಲ್ಲಿದ್ದೀರಿ’ ಎಂದಾಗ ‘ ಈ ಮಾತನ್ನು ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿ ನಿಜವಾಗಿಸು’ ಎಂದು ನಾನಕರು ಹೇಳಿದರು ಮತ್ತು ಅದರಂತೆ ಗೋರಕ್ಷನಾಥರು ನಾನಕರ ಮಗನಾಗಿ ಜನ್ಮತಾಳಿದರು. ತಮ್ಮ ಪೂರ್ವಜನ್ಮದ ಸಾಕ್ಷಿ ಒದಗಿಸಲು ಅವರು ಜನ್ಮದಿಂದಲೇ ಕಿವಿಯಲ್ಲಿ ನಾಥಪಂಥದ ಕುಂಡಲಿ ಧರಿಸಿದ್ದರು.

RELATED ARTICLES  ಮರೆಯಲ್ಲಿಯೇ ಉಳಿದ ಮಾಣಿಕ್ಯದ ಪ್ರತಿಭೆ ‌ಕೋಲಸಿರ್ಸಿ ಆರ್ ಭಾಸ್ಕರ್ ನಾಯ್ಕ

ಮುಂದೆ ನಮ್ಮ ಸಮರ್ಥರ ಯಾತ್ರೆಯ ಸಮಯದಲ್ಲಿ ಕಾಶ್ಮೀರದಲ್ಲಿ ಗೋರಕ್ಷನಾಥರ ಭೆಟ್ಟಿಯಾದಾಗ, ಆ ಕಾಲದ ಪರಿಸ್ಥಿತಿಯಲ್ಲಿ ಪರಿಹಾರ ಮಾರ್ಗ ಕಂಡುಕೊಳ್ಳುವ ವಿಷಯದ ಬಗ್ಗೆ, ಮತ್ತು ಯೋಗ – ವೇದಾಂತ ಇತ್ಯಾದಿಗಳ ಮೇಲೆ ಇಬ್ಬರಲ್ಲೂ ಬಹಳಿಷ್ಟು ಚರ್ಚೆಯಾಗಿತ್ತು ಎಂದು ಶ್ರೀ ಗಂಗೇಶ್ವರರು ಬರೆದ ಶ್ರೀಚಾಂದರ ಚರಿತ್ರದಲ್ಲಿ ಬಂದಿದೆ. ಅಕಸ್ಮಾತ್ ನನ್ನನ್ನು ನೋಡಲು ಬಂದ ಒಬ್ಬ ಮಹಾರಾಷ್ಟ್ರದ ಸಂತರಿಂದ ಇದು ತಿಳಿಯಿತು. ಅವರ ಹೆಸರು ಗಂಗಾಮುನಿ.

(ಈ ಪತ್ರದ ಆರನೆಯ ಭಾಗ ಮುಂದುವರಿಯುವದು)